ಸೋಮವಾರ, ಜನವರಿ 20, 2020
29 °C

ಅಂತರ ರಾಜ್ಯ ಕಬಡ್ಡಿ ಟೂರ್ನಿ : ಫೈನಲ್‌ಗೆ ಎಸ್‌ಬಿಎಂ, ಆರ್ಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಬೆಂಗಳೂರಿನ ಎಸ್‌ಬಿಎಂ ತಂಡ ತಾಲ್ಲೂಕಿನ ಕುಂಚನೂರ ಗ್ರಾಮದ ನ್ಯೂ ಮಹಾದೇವ ಯುವಕ ಮಂಡಳದ ಆಶ್ರಯದಲ್ಲಿ ನಡೆಯುತ್ತಿರುವ ಅಂತರ ರಾಜ್ಯ ಕಬಡ್ಡಿ ಟೂರ್ನಿಯ ಪುರುಷರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿತು.ಏಕಪಕ್ಷೀಯವಾಗಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈನ ದೇನಾ ಬ್ಯಾಂಕ್ ತಂಡವನ್ನು 29-9ರಿಂದ  ಸುಲಭವಾಗಿ ಮಣಿಸಿತು. ಅರ್ಜುನ ಪ್ರಶಸ್ತಿ ಪುರಸ್ಕೃತ, ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕಬಡ್ಡಿ ತಂಡದ ನೇತೃತ್ವ ವಹಿಸಿದ್ದ ಬಿ.ಸಿ.ರಮೇಶ ಎಸ್‌ಬಿಎಂ ತಂಡದ ಗೆಲುವಿನ ರೂವಾರಿ ಎನಿಸಿದರು.ಪುರುಷರ ವಿಭಾಗದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನಾಸಿಕ್‌ನ ಆರ್ಮಿ ತಂಡ 26-10ರಿಂದ ಮಂಗಳೂರಿನ ವೀರ ಮಾರುತಿ ತಂಡವನ್ನು ಸೋಲಿಸಿ ಫೈನಲ್‌ಗೆ ಮುನ್ನಡೆಯಿತು.ಇದಕ್ಕೂ ಮುನ್ನ ನಾಸಿಕ್‌ನ ಆರ್ಮಿ ತಂಡ 32-7ರಿಂದ ಮಹಾಲಿಂಗಪುರದ ಭೂಮಿಕಾ `ಎ~ ತಂಡವನ್ನು, ಮಂಗಳೂರಿನ ವೀರ ಮಾರುತಿ ತಂಡ 16-9ರಿಂದ ಬೆಂಗಳೂರಿನ           ಹೂಡಿ ಸ್ಪೋರ್ಟ್ಸ್ ತಂಡವನ್ನು; ಮುಂಬೈನ ದೇನಾ ಬ್ಯಾಂಕ್ ತಂಡ 27-17ರಿಂದ ಮಹಾಲಿಂಗಪುರದ ಭೂಮಿಕಾ `ಬಿ~ ತಂಡವನ್ನು ಹಾಗೂ ಬೆಂಗಳೂರಿನ ಎಸ್‌ಬಿಎಂ ತಂಡ 35-8ರಿಂದ ಮುಂಬೈನ ಫೈಜರ್ ಜಿಮಖಾನಾ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿದ್ದವು.ಮಹಿಳೆಯರ ವಿಭಾಗದಲ್ಲಿ ಕಾರವಾರದ ಕಾತ್ಯಾಯಿನಿ, ಪುತ್ತೂರಿನ ಸೇಂಟ್ ಫೆಲೋಮಿನಾ, ಮೂಡಬಿದ್ರಿಯ ಆಳ್ವಾಸ್ ಹಾಗೂ ಮುಂಬೈನ ದೇನಾ ಬ್ಯಾಂಕ್ ತಂಡಗಳು ಸೆಮಿಫೈನಲ್ ಪ್ರವೇಶಿದವು.ಕಾರವಾರದ ಕಾತ್ಯಾಯಿನಿ ತಂಡ 18-6ರಿಂದ ಪನ್ನಾಲದ ಸಂಸ್ಕೃತಿ ತಂಡದ ವಿರುದ್ಧವೂ; ಪುತ್ತೂರಿನ ಸೇಂಟ್ ಫೆಲೋಮಿನಾ ತಂಡ 19-17 ರಿಂದ ಕೊಲ್ಲಾಪುರದ ಮಹಾಲಕ್ಷ್ಮೀ ತಂಡದ ಮೇಲೂ; ಮೂಡಬಿದ್ರಿಯ ಆಳ್ವಾಸ್ ತಂಡ 26-2ರಿಂದ ಬಾಚಣಿಯ ಜೈ ಹನುಮಾನ್ ತಂಡದ ವಿರುದ್ಧವೂ; ಮುಂಬೈನ ದೇನಾ ಬ್ಯಾಂಕ್ ತಂಡ 16-3 ರಿಂದ ಬೆಂಗಳೂರಿನ ಮಹಾರಾಣಿ ಮೇಲೂ ಗೆಲವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದವು.

ಪ್ರತಿಕ್ರಿಯಿಸಿ (+)