ಶುಕ್ರವಾರ, ಮೇ 20, 2022
21 °C

ಅಂತೂ ಇಂತೂ ಸಿಗ್ನಲ್ ದೀಪ ಬಂತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಬುಧವಾರ ನೂತನ ಸಂಚಾರಿ ಸೂಚನಾ ದೀಪಗಳಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು.ಬಹುದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ದೀಪಗಳಿಗೆ ಈಗ ಚಾಲನೆ ಸಿಕ್ಕಂತಾಗಿದೆ. ನಿಯಮಗಳು ಉಲ್ಲಂಘನೆಯಾಗದಂತೆ ಸಂಚಾರ ಪೊಲೀಸರು ನಿಗಾ ವಹಿಸುತ್ತಿದ್ದಾರೆ.ನಗರದಲ್ಲಿ ಎರಡನೇ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿದ್ದು, ಈಗಾಗಲೇ ಶಿಡ್ಲಘಟ್ಟ ವೃತ್ತದಲ್ಲಿ ಸಿಗ್ನಲ್ ದೀಪಗಳು ಕಾರ್ಯನಿರ್ವಹಿಸುತ್ತಿವೆ.ಸಿಗ್ನಲ್ ದೀಪಗಳ ಕಾರ್ಯನಿರ್ವಹಣೆಯಿಂದ ಇಲ್ಲಿನ ವಾಹನಗಳ ಸಂಚಾರ ವ್ಯವಸ್ಥೆಯು ಸುಧಾರಣೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.ಸಿಗ್ನಲ್ ದೀಪಗಳ ಅಳವಡಿಕೆ ಯೋಜನೆ ಹಲವು ದಿನಗಳ ಹಿಂದೆಯೇ ರೂಪಿಸಲಾಗಿತ್ತು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ವೃತ್ತದ ನಾಲ್ಕು ದಿಕ್ಕುಗಳಲ್ಲಿ ಕಂಬಗಳ ಜೊತೆ ದೀಪಗಳನ್ನು ಅಳವಡಿಸಲಾಯಿತು.`ಬಜಾರ್ ರಸ್ತೆ, ಸಂತೆ ಮಾರುಕಟ್ಟೆ ಬೀದಿ ಮತ್ತು ಬಿ.ಬಿ.ರಸ್ತೆಯಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸುವಲ್ಲಿ ಸಹಕಾರಿಯಾಗಲಿದೆ.ಸುಗಮ ಸಂಚಾರಕ್ಕೂ ಉಪಯುಕ್ತವಾಗಲಿದೆ~ ಎಂದು ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಕೆರೆಯಲ್ಲಿ  ಅಪರಿಚಿತ ಶವ ಪತ್ತೆ

ಮುಳಬಾಗಲು: ತಾಲ್ಲೂಕಿನ ಶೆಟ್ಟಿಬಣಕನಹಳ್ಳಿ ಗ್ರಾಮದ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಬುಧವಾರ ಪತ್ತೆಯಾಗಿದ್ದು, ಶವ ಸಂಪೂರ್ಣ ಕೊಳೆತು ಹೋಗಿದೆ.  ನೀಲಿ ಪ್ಯಾಂಟ್ ಧರಿಸಿದ್ದು, ಬಟ್ಟೆಯ ಮೇಲೆ ವರ್ಷನ್ ಟೈಲರ್ಸ್‌ ಬೆರಕಿ ಎಂದು ಇದೆ ಎಂದು ಸಬ್ ಇನ್ಸ್‌ಪೆಕ್ಟರ್ ಬಸವರಾಜ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.