ಶುಕ್ರವಾರ, ಮೇ 7, 2021
26 °C

ಅಂಬೇಡ್ಕರ್ ಜಯಂತಿ: ಮದ್ಯಪಾನಕ್ಕೆ ಗುಡ್‌ಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ತಾಲ್ಲೂಕು ಮದ್ದೂರು ಗ್ರಾಮದ ದಲಿತ ಕೇರಿಯಲ್ಲಿ ಶಾಶ್ವತವಾಗಿ ಮದ್ಯ ಸೇವನೆ ಮತ್ತು ಮಾರಾಟವನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ಭಾನುವಾರ ಕೈಗೊಳ್ಳಲಾಯಿತು.ಪರಿಶಿಷ್ಟ ಜಾತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಅಂಬೇಡ್ಕರ ಜಯಂತಿಯನ್ನು ಆಚರಿಸಲು ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಹೀಗಾಗಿ ಮದ್ಯವನ್ನು ಶಾಶ್ವತವಾಗಿ ಏಕೆ ನಿಷೇಧಿಸಬಾರದು ಎಂದು ಮಹಿಳಾ ಸಂಘಗಳ ಸದಸ್ಯರು ಒತ್ತಡ ಹೇರಿದರು.

 

ಈ ಬಗ್ಗೆ ಚರ್ಚಿಸಲು ಗ್ರಾಮದಲ್ಲಿ ದಲಿತ ಯಜಮಾನರು ಹಾಗೂ ಪರಿಶಿಷ್ಟ ಜಾತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ನೇತೃತ್ವದಲ್ಲಿ ಸಭೆ ನಡೆಯಿತು. ಇನ್ನು ಮುಂದೆ ದಲಿತರ ಬೀದಿಯಲ್ಲಿ ಮದ್ಯಪಾನ ನಿಷೇಧಿಸಬೇಕು. ಮದ್ಯ ಮಾರಾಟವನ್ನು ನಿಲ್ಲಿಸಬೇಕು. ಈ ಬಗ್ಗೆ ತಹಶೀಲ್ದಾರ್, ಪೊಲೀಸ್ ಇಲಾಖೆ ಹಾಗೂ  ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಬೇಕು ಎಂದು ತೀರ್ಮಾನ ಕೈಗೊಂಡರು.ಅಂಬೇಡ್ಕರ್ ಜಯಂತಿಯ ಆಚರಣೆಯನ್ನು ವಿಭಿನ್ನವಾಗಿ ಆಚರಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಮದ್ಯಪಾನ ನಿಷೇಧವನ್ನು ಕೈಗೊಳ್ಳಲಾಗಿತ್ತು.  ಮುಂದಿನ ದಿನಗಳಲ್ಲಿ ಎಲ್ಲ ಕೋಮಿನ ಮುಖಂಡರ ಜತೆ ಮಾತನಾಡಿ ಇಡೀ ಗ್ರಾಮವನ್ನೇ ಮದ್ಯಪಾನ ಮುಕ್ತ ಗ್ರಾಮವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಗ್ರಾಮದ ಯಜಮಾನ ನಂಜುಂಡಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.ಗ್ರಾಮದ ಎ್ಲ್ಲಲ ಜನಾಂಗದ ಮುಖಂಡರೂ ಒಗ್ಗೂಡಿ ಅದ್ದೂರಿ ಮೆರವಣಿಗೆಯ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಮಧ್ಯಾಹ್ನ ಗ್ರಾಮದಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆ ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧರ ಕುರಿತಾದ ರಸಮಂಜರಿ ಕಾರ್ಯಕ್ರಮವೂ ನಡೆಯಿತು.ಮಾಜಿ ಶಾಸಕ ಎಸ್. ಬಾಲರಾಜ್, ಮೈಸೂರಿನ ಮಹಾಬೋಧಿ ಮಿಷನ್‌ನ ಪ್ರಕಾಶ್ ಭಂತೇಜಿ, ಗ್ರಾ.ಪಂ. ಅಧ್ಯಕ್ಷೆ ಪುಟ್ಟಸಿದ್ಧಮ್ಮ, ಸಂಘದ ಅಧ್ಯಕ್ಷ ಎಂ. ಚಂದ್ರಶೇಖರ್, ಪಿ. ದೇವರಾಜು, ದೊಡ್ಡ ಯಜಮಾನರಾದ ನಂಜಯ್ಯ, ಗೌಡ್ಕೆ ಮಹದೇವಪ್ಪ, ವೀರರಾಜೇ ಅರಸ್, ಮಲ್ಲಿಕಾರ್ಜುನಸ್ವಾಮಿ, ಬಂಗಾರನಾಯಕ, ಸೋಮನಾಥ, ದಕ್ಷಿಣಾಮೂರ್ತಿ, ಪುಟ್ಟಸ್ವಾಮಿ, ಚಿಕ್ಕತಿಮ್ಮೇಗೌಡ, ಮಹಮ್ಮದ್  ಜಾನ್, ಮಹಾದೇವಯ್ಯ, ಸಿದ್ಧಬಸವಯ್ಯ, ಮಹಾದೇವಪ್ಪ, ಎಚ್. ನಂಜುಂಡಸ್ವಾಮಿ, ನಾಗರಾಜು, ಚಕ್ರವರ್ತಿ, ದೊರೆಸ್ವಾಮಿ, ನಂಜುಂಡಸ್ವಾಮಿ, ಸುಂದರ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.