ಶನಿವಾರ, ಏಪ್ರಿಲ್ 17, 2021
32 °C

ಅಂಬೇಡ್ಕರ್ ತತ್ವಾದರ್ಶ ಅಳವಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದೇಶದ ಅಭ್ಯುದಯ ಮತ್ತು ಶೋಷಿತ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವ ಮಹತ್ವದ ಉದ್ದೇಶದಿಂದ ಡಾ. ಬಿ.ಆರ್.ಅಂಬೇಡ್ಕರ್ ಅವರು ದೇಶದ ಸಂವಿಧಾನ ರಚಿಸಿದ್ದಾರೆ ಎಂದು ಪತ್ರಕರ್ತ ಚಲುವರಾಜ್ ತಿಳಿಸಿದರು. ನಗರದ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 120ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಅವರ ಜೀವನವನ್ನು ಆದರ್ಶವಾಗಿರಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಅವರು ಕಿವಿಮಾತು ಹೇಳಿದರು. ವಾಸವಿ ವಿದ್ಯಾನಿಕೇತನ ಟ್ರಸ್ಟ್‌ನ ಅಧ್ಯಕ್ಷ ಪಿ.ರಾಮಕೃಷ್ಣ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಶಾಲೆಯ ಕಾರ್ಯದರ್ಶಿ ಪಿ.ಬದರಿನಾಥ, ಟ್ರಸ್ಟ್‌ನ ಖಜಾಂಚಿ ಕೆ.ಎನ್.ಸುರೇಂದ್ರನಾಥ ಗುಪ್ತ, ಹಿರಿಯ ನಿರ್ದೇಶಕ ಪಿ.ಗೋವಿಂದರಾಜ ಗುಪ್ತ, ನಿರ್ದೇಶಕರುಗಳಾದ ಬಿ.ಎಂ.ನಾಗರಾಜ ಶೆಟ್ಟಿ, ಎಂ.ಬಿ.ಜನಾರ್ದನ್, ಮುಖ್ಯ ಶಿಕ್ಷಕಿ ವಿ.ಕೆ. ವಿಜಯಪ್ರಭಾ ಉಪಸ್ಥಿತರಿದ್ದರು.ಶಾಲೆಯ ಆಡಳಿತಾಧಿಕಾರಿ ಬಿ.ವಿ.ಸೂರ್ಯ ಪ್ರಕಾಶ್ ಸ್ವಾಗತಿಸಿದರು. ಸಹ ಶಿಕ್ಷಕಿ ಡಿ.ಆಶಾ ನಿರೂಪಿಸಿದರು. ಮತ್ತೊಬ್ಬ ಸಹ ಶಿಕ್ಷಕಿ ವರಲಕ್ಷ್ಮ ವಂದಿಸಿದರು. ಅಖಿಲ ಭಾರತ ಮಟ್ಟದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮತ್ತು ಕಳೆದ ಸಾಲಿನಲ್ಲಿ ಶಾಲೆಯ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಸಸ್ತಿ ಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.