ಬೆಂಗಳೂರು: ‘ಅಕಾಡೆಮಿಗಳು ಸರ್ಕಾ ರದ ಅಂಗ ಸಂಸ್ಥೆಗಳೇ ಹೊರತು, ಅಡಿ ಯಾಳು ಸಂಸ್ಥೆಗಳಲ್ಲ. ಸರ್ಕಾರದಿಂದ ಸ್ವಾಯತತ್ತೆಗೆ ಧಕ್ಕೆಯಾದರೆ ಅಧ್ಯಕ್ಷರು ಪ್ರತಿರೋಧಿಸಬೇಕು’ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.

ಅಖಿಲ ಕರ್ನಾಟಕ ಜಾನಪದ ಕಲಾ ವಿದರ ಒಕ್ಕೂಟವು ನಗರದಲ್ಲಿ ಶುಕ್ರ ವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ಹೋಳಿ’ ಕಾರ್ಯಕ್ರಮದಲ್ಲಿ ಅಕಾಡೆಮಿ ಗಳ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ‘ಅಕಾಡೆಮಿಗಳ ನಿಯಮಾವಳಿಗಳು ಪುನರ್ ರಚನೆಯಾಗಿ 9 ವರ್ಷಗಳು ಕಳೆದಿವೆ. ಹೀಗಿದ್ದೂ ಸರ್ಕಾರ ಅದರಲ್ಲಿ ರುವ ಲೋಪದೋಷಗಳ ಬಗ್ಗೆ ಪುನರ್ ಪರಿಶೀಲನೆ ನಡೆಸುವ ಗೋಜಿಗೆ ಹೋಗಿಲ್ಲ’ ಎಂದು ದೂರಿದರು.

‘ನಿಯಮಾವಳಿಯಲ್ಲಿ ಪುಸ್ತಕ ಪ್ರಕ ಟಣೆಗೆ ಮಿತಿ ಹೇರಲಾಗಿದೆ. ಅಲ್ಲದೇ, ಅಕಾಡೆಮಿ ರೂಪಿಸುವ ಪ್ರತಿಯೊಂದು ಕ್ರಿಯಾಯೋಜನೆಗೂ ಸರ್ಕಾರದ ಅನುಮತಿ ಪಡೆಯುವಂತೆ ಸೂಚಿಸಲಾ ಗಿದೆ. ಹೀಗೆ ಹಲವು ದೋಷವಿರುವ ನಿಯಮಾವಳಿಗಳಲ್ಲಿ ತಿದ್ದುಪಡಿ ತರು ವಂತೆ ಅಕಾಡೆಮಿಗಳ ಅಧ್ಯಕ್ಷರು ಸರ್ಕಾ ರಕ್ಕೆ ಪತ್ರ ಬರೆಯಬೇಕು. ಹಣಕಾಸು ವಿಚಾರದಲ್ಲಿ ಉತ್ತರ ದಾಯಿತ್ವ ಇರಲಿ. ಆದರೆ, ಆಯಾ ಕ್ಷೇತ್ರದತಜ್ಞರು ರೂಪಿಸುವ ಕ್ರಿಯಾ ಯೋಜನೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ವಿರಬಾರದು. ಇನ್ನಾದರೂ ನಿಯಮಾ ವಳಿಗಳಿಂದ ಸ್ವಾಯತತ್ತೆ ಹಾಗೂ ಕ್ರಿಯಾಶೀಲತೆಗೆ ಭಂಗ ಬಾರದಿರಲಿ’ ಎಂದು ಬರಗೂರು ಆಶಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಮಾಲತಿ ಪಟ್ಟಣಶೆಟ್ಟಿ, ‘ಸಾಹಿತ್ಯ ಕಾರ್ಯಕ್ರಮಗಳನ್ನು ಕೇವಲ ನಗರ ಪ್ರದೇಶಗಳಿಗೆ ಸೀಮಿತಗೊಳಿಸದೇ, ಹಳ್ಳಿಗಳಿಗೂ ವಿಸ್ತರಿಸುವ ಯೋಜನೆಯಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.