ಮಂಗಳವಾರ, ಏಪ್ರಿಲ್ 13, 2021
32 °C

ಅಕ್ರಮದಲ್ಲಿ ಶ್ರೀರಾಮುಲು ಸಿಂಹಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಸಹೋದರರು ಭಾಗಿಯಾಗಿರುವ ಎಲ್ಲ ಅಕ್ರಮಗಳಲ್ಲಿ ಶಾಸಕ ಬಿ.ಶ್ರೀರಾಮುಲು ಅವರ ಪಾಲು ಸಾಕಷ್ಟಿದೆ ಎಂದು ಸಿಪಿಎಂ ಮುಖಂಡ ಜಿ.ಎನ್. ನಾಗರಾಜ್ ದೂರಿದರು.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ ಸಹೋದರರ ಭ್ರಷ್ಟಾಚಾರಕ್ಕೆ ರಕ್ಷಣೆ ಒದಗಿಸಲೆಂದೇ ರಾಮುಲು ನೂತನ ಪಕ್ಷ  ಸ್ಥಾಪಿಸಿದ್ದಾರೆ. ಅವರಿಗೆ ಯಾವ ಸ್ವಾಭಿಮಾನವೂ ಇಲ್ಲ. ಇದ್ದಿದ್ದರೆ ಪಕ್ಷ ಸ್ಥಾಪಿಸುತ್ತಿರಲಿಲ್ಲ ಎಂದರು.ಸ್ವಾಭಿಮಾನ ಅಡವಿಟ್ಟು ರೆಡ್ಡಿ ಸಹೋದರರ ಅಕ್ರಮದಲ್ಲಿ ಪಾಲ್ಗೊಂಡವರು,  `ಸ್ವಾಭಿಮಾನಿ~ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವುದು ನಾಚಿಕೆಗೇಡು ಎಂದು ಅವರು ಹೇಳಿದರು.ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ತನಿಖೆ ನಡೆಸಿ ಸಲ್ಲಿಸಿರುವ ವರದಿಯಲ್ಲಿ ಇವರ ಹೆಸರಿದ್ದು, ರಿಪಬ್ಲಿಕ್ ಆಫ್ ಬಳ್ಳಾರಿ ಕುಖ್ಯಾತಿಯಲ್ಲಿ ಶ್ರೀರಾಮುಲು ಅವರಿಗೇ  ಸಿಂಹಪಾಲು ಎಂದು ಅವರು ಟೀಕಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.