ಹಿರಿಯೂರು: ಹೈಕೋರ್ಟ್ ಅಕ್ರಮ ಮರಳು ಸಾಗಣೆ ಮಾಡುವುದಕ್ಕೆ ತಡೆಯಾಜ್ಞೆ ನೀಡಿದ್ದು, ತಾಲ್ಲೂಕಿನ ವೇದಾವತಿ ಮತ್ತು ಸುವರ್ಣಮುಖಿ ನದಿ ಪಾತ್ರದಲ್ಲಿ ಅಕ್ರಮಮರಳು ಸಾಗಣೆಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಬುಧವಾರ ಹಮ್ಮಿಕೊಂಡಿದ್ದ ತಾಲ್ಲೂಕು ರೈತ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪ್ರಭಾವಿ ವ್ಯಕ್ತಿಗಳು ಮರಳು ದಂಧೆಯ ಹಿಂದೆ ಇದ್ದಾರೆ. ಮರಳು ದಂಧೆ ತಡೆಯುವಲ್ಲಿ ಅಧಿಕಾರಿಗಳು ವಿಫಲವಾದರೆ ರೈತಸಂಘವೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕಿನಲ್ಲಿ ಆರಂಭವಾಗುತ್ತಿರುವ ಡಿಆರ್ಡಿಒ, ಐಐಎಸ್ಸಿ, ಬಿಎಆರ್ಸಿ ಯೋಜನೆಗಳಿಗೆ ಕುಡಿಯುವ ನೀರು ಕೊಡಲು ವಿರೋಧವಿಲ್ಲ. ಆದರೆ, ಸತತ ಎರಡು ವರ್ಷ ಮಳೆಯಿಲ್ಲದೆ ತಾಲ್ಲೂಕಿನ ವಾಣಿವಿಲಾಸ ಜಲಾಶಯ ಸಂಪೂರ್ಣ ಬರಿದಾಗುವತ್ತ ಸಾಗಿದ್ದು, ಇಂತಹ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕಿಗೆ ಕೊಳವೆ ಮಾರ್ಗದ ಮೂಲಕ ನೀರು ಹರಿಸುವುದಕ್ಕೆ ತಾಲ್ಲೂಕಿನ ಜನತೆಯ ವಿರೋಧವಿದ್ದು, ಜಲಾಶಯ ತುಂಬಿಸಿ ಎಲ್ಲಿಗೆ ಬೇಕಾದರೂ ನೀರು ಕೊಡಲಿ ಎನ್ನುವುದು ರೈತ ಸಂಘದ ನಿಲುವು ಎಂದರು.

ರಸ್ತೆತಡೆ ಎಚ್ಚರಿಕೆ: ಕಾಮಗಾರಿ ನಿಲ್ಲಿಸದಿದ್ದರೆ, ನ. 19ರಂದು ಹಿರಿಯೂರು-ಚಳ್ಳಕೆರೆ ರಸ್ತೆತಡೆ ನಡೆಸಲಾಗುತ್ತದೆ. ಜಿಲ್ಲಾಡಳಿತ ಇದಕ್ಕೆ ಅವಕಾಶ ಕೊಡದೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.

ಅಧ್ಯಕ್ಷ ಎ. ಕೃಷ್ಣಸ್ವಾಮಿ, ಡಿ. ಯಶೋಧರ, ತುಳಸೀದಾಸ್, ಕೆ.ಸಿ. ಹೊರಕೇರಪ್ಪ, ತಮ್ಮಣ್ಣ, ಡಾ.ಸುಜಾತಾ, ಶಾರದಮ್ಮ, ಗುಣಶೇಖರ್, ವಿನೋದಮ್ಮ, ಕರಿಬಸಣ್ಣ, ಎಸ್.ಆರ್. ವಿಶ್ವನಾಥ್, ಎಸ್.ಡಿ. ರಂಗಸ್ವಾಮಿ, ಗೌಸ್ಪೀರ್, ಪುಟ್ಟಲಿಂಗಪ್ಪ, ಕೇಶವಮೂರ್ತಿ, ದ್ಯಾಮಲಾಂಬ, ಪುಷ್ಪಮಾಲಾ, ರಾಜಮ್ಮ, ಪಾಪಾಯಮ್ಮ, ಪದ್ಮಾವತಿ, ನಂದಿನಿ, ವಿನುತಾ, ಭಾರತಿ, ವಿಶಾಲಾಕ್ಷಿ, ಮಂಜುಳಾ, ರಂಗಮ್ಮ, ಎಂಎಂಎಂ ಮಣಿ, ಗಂಗಾಧರಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.