ಮಂಗಳವಾರ, ಜನವರಿ 21, 2020
29 °C

ಅಕ್ಷಯ ಪಾತ್ರಕ್ಕೆ ರೂ 55 ಕೋಟಿ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈ ಸುವ ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ಪ್ರತಿ ಷ್ಠಿತ ಜೆಮ್‌ಷೆಡ್‌ಜಿ ಟಾಟಾ ಟ್ರಸ್ಟ್‌ ರೂ 55 ಕೋಟಿ ಧನಸಹಾಯ ನೀಡಿದೆ.5 ವರ್ಷಗಳ ಅವಧಿಗೆ ಈ ಹಣ ವನ್ನು ಅಕ್ಷಯ ಪಾತ್ರ ಯೋಜನೆಗೆ ಬಳಕೆ ಮಾಡಿಕೊಳ್ಳಲು ಟಾಟಾ ಟ್ರಸ್ಟ್‌ ಸೂಚಿಸಿದೆ. ಎರಡೂ ಸಂಸ್ಥೆಗಳ ಮಧ್ಯೆ ಈ ಸಂಬಂಧ ಒಪ್ಪಂದವನ್ನೂ ಮಾಡಿ ಕೊಳ್ಳಲಾಗಿದೆ.ಅಡುಗೆಮನೆ ಆಧುನೀ ಕರಣ, ಹೊಸ ಉಪಕರಣಗಳ ವ್ಯವಸ್ಥೆ, ವಾಹನಗಳ ಖರೀದಿ ಮತ್ತಿತರ ಉದ್ದೇ ಶಗಳಿಗೆ ಈ ಹಣ ಬಳಸಿಕೊಳ್ಳಲು ತಿಳಿಸ ಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ ದಾಸ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)