ಮೈಸೂರು: ಲೆದರ್ ವಸ್ತುಗಳನ್ನು ತಯಾರು ಮಾಡುವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ನಾಲ್ವರು ಅಗ್ನಿ ದುರಂತದಿಂದ ಪಾರಾದ ಘಟನೆ ಶನಿವಾರ ಮುಂಜಾನೆ ನಗರದಲ್ಲಿ ಜರುಗಿದೆ.

ತೊಗರಿ ಬೀದಿಯಲ್ಲಿ ಮಾದೇಶ್ ಎಂಬುವರಿಗೆ ಸೇರಿದ ಸ್ಕೂಲ್ ಬ್ಯಾಗ್ ಮತ್ತು ಜರ್ಕಿನ್ಗಳನ್ನು ಮಾರಾಟ ಮಾಡುವ ಅಂಗಡಿಗೆ ಶಾರ್ಟ್ ಷರ್ಕ್ಯೂಟ್ನಿಂದ ಮುಂಜಾನೆ 3.30ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು.

ಇದರಿಂದ ಟೈಲರಿಂಗ್ ಯಂತ್ರ ಹಾಗೂ ಸುಮಾರು 50 ಸಾವಿರ ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾದವು. ಅಂಗಡಿಯ ಮೇಲಿರುವ ಮೊದಲನೇ ಮಹಡಿ ಯಲ್ಲಿ ಮಾದೇಶ್ ಕುಟುಂಬ ವಾಸವಿತ್ತು.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚತ್ತುಕೊಂಡ ಮಾದೇಶ್ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಹಡಿಯಿಂದ ಕೆಳಗಿಳಿದರು. ಕೂಡಲೇ ಅಂಗಡಿಯ ಛಾವಣಿ ಕುಸಿದುಬಿತ್ತು. ಅದೃಷ್ಟವಶಾತ್ ಮಾದೇಶ್ ಕುಟುಂಬ ಯಾವುದೇ ಅಪಾಯವಿಲ್ಲದೆ ಪಾರಾಯಿತು.

38 ಬಂಧನ, ರೂ.49 ಸಾವಿರ ವಶ: ಕ್ಲಬ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಜೂಜಿನಲ್ಲಿ ತೊಡಗಿದ್ದ 38 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ ರೂ.49 ಸಾವಿರ ನಗದು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಗರದಲ್ಲಿ ಜರುಗಿದೆ.

ಹೆಬ್ಬಾಳು 1ನೇ ಹಂತದ ರಿಂಗ್ ರಸ್ತೆಯ ಬಳಿಯ ಪ್ರಗತಿ ಸ್ಪೋರ್ಟ್ಸ್ ಕ್ಲಬ್ನಲ್ಲಿ ಜೂಜಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಂಜೆ ದಾಳಿ ನಡೆಸಿದಾಗ 38 ಮಂದಿ ಸಿಕ್ಕಿಬಿದ್ದಿದ್ದಾರೆ. ಕ್ಲಬ್ನ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳು ಸೇರಿದಂತೆ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಮಹಿಳೆಯ ಬಂಧನ: ಆಲನಹಳ್ಳಿಯ ಜುವೆಲ್ಲರಿ ಅಂಗಡಿಯಲ್ಲಿ ಕಳವು ಮಾಡಿದ ಆರೋಪದ ಮೇರೆಗೆ ಮಹಿಳೆಯನ್ನು ನಜರ್ಬಾದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಚಿಕ್ಕಹುಣಸೂರಿನ ಪಾರ್ವತಿ (60) ಬಂಧಿತ ಮಹಿಳೆ. ಅಂಗಡಿಯಲ್ಲಿ ವ್ಯಾಪಾರ ಮಾಡುವ ನಾಟಕವಾಡಿದ ಈಕೆ ಬೆಳ್ಳಿ ಪದಾರ್ಥಗಳನ್ನು ಬ್ಯಾಗ್ಗೆ ಹಾಕಿಕೊಳ್ಳುವಾಗ ಸಿಕ್ಕಿಬಿದ್ದಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಾಗಿದೆ.

ವೃದ್ಧೆಯ ಶವ ಪತ್ತೆ: ನಗರದ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 6ರಲ್ಲಿ ಅಪರಿಚಿತ ವೃದ್ಧೆಯ ಶವ ಶನಿವಾರ ಪತ್ತೆಯಾಗಿದೆ. 5 ಅಡಿ ಎತ್ತರ, ದುಂಡುಮುಖ ಹೊಂದಿದ್ದು, ಶವದ ವಾರಸುದಾರರು ಇದ್ದಲ್ಲಿ ರೈಲ್ವೆ ಪೊಲೀಸ್ ದೂ:2516579 ಸಂಪರ್ಕಿಸಬಹುದು.

ವ್ಯಕ್ತಿ ನಾಪತ್ತೆ: ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ರಂಗಚಾರಿಹುಂಡಿ ಗ್ರಾಮದ ಸಿದ್ದಯ್ಯ ಎಂಬುವರು ಕಳೆದ ಫೆ.5ರಂದು ಕಾಣೆಯಾಗಿದ್ದಾರೆ. ಇವರ ಬಗ್ಗೆ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.