ರಾಮನಗರ: ಬಿಡದಿ ಹೋಬಳಿಯ ಹೆಜ್ಜಾಲ ಗ್ರಾಮದ ಬಳಿಯ ಉಗ್ರಾಣದ ಮುಂಭಾಗದಲ್ಲಿ ನಿಂತಿದ್ದ ಎರಡು ಕ್ಯಾಂಟರ್ ಹಾಗೂ ಒಂದು ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದ ಘಟನೆ ಭಾನುವಾರ ಜರುಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ವಳ್ಳಿಯಪ್ಪ ಉಗ್ರಾಣದಲ್ಲಿ ಬ್ರಿಟಾನಿಯಾ ಕಂಪೆನಿಗೆ ಸೇರಿದ ಬಿಸ್ಕತ್ತುಗಳನ್ನು ತುಂಬಿದ್ದ ಒಂದು ಲಾರಿ ಸಂಪೂರ್ಣ ಭಸ್ಮವಾಗಿದೆ. ಇನ್ನೆರಡು ಕ್ಯಾಂಟರ್ಗಳಿಗೆ ಭಾಗಶಃ ಹಾನಿಯಾಗಿದೆ.

ಸುತ್ತಮುತ್ತಲಿನ ಕಸಕಡ್ಡಿಗಳ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ನಂತರ ಅದು ಸರಕು ತುಂಬಿದ್ದ ಲಾರಿಗಳಿಗೂ ವ್ಯಾಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.