ಶನಿವಾರ, ಜೂನ್ 19, 2021
26 °C

ಅಗ್ರಸ್ಥಾನದಲ್ಲಿ ಆನಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಂಟಿ ಮನ್‌ಸಿಸ್ಕ್‌, ರಷ್ಯಾ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಇಲ್ಲಿ ನಡೆಯು ತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಡ್ರಾ ಸಾಧಿಸಿದರೂ, ಅಗ್ರಸ್ಥಾನದಲ್ಲಿ ಮುಂದ ವರಿದಿದ್ದಾರೆ.



ಸೋಮವಾರ ನಡೆದ ಪಂದ್ಯದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌ ರಷ್ಯಾದ ವ್ಲಾದಿಮಿರ್‌ ಕ್ರಾಮ್ನಿಕ್‌ ಜೊತೆ ಪಾಯಿಂಟ್‌ ಹಂಚಿಕೊಂಡರು.



ನಾಲ್ಕು ಸುತ್ತುಗಳ ಬಳಿಕ ಮೂರು ಪಾಯಿಂಟ್‌ ಹೊಂದಿರುವ ಆನಂದ್‌ ಅಗ್ರಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. 

ಕ್ರಾಮ್ನಿಕ್‌ ಮತ್ತು ಅರ್ಮೇನಿಯದ ಲೆವೊನ್‌ ಅರೋನಿಯನ್‌ ತಲಾ 2.5 ಪಾಯಿಂಟ್‌ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಅರೋನಿಯನ್‌ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಪೀಟರ್‌ ಸ್ವಿಡ್ಲರ್‌ ವಿರುದ್ಧ ಗೆಲುವು ಪಡೆದರು.



ರಷ್ಯಾದ ಸರ್ಜಿ ಕರ್ಜಾಕಿನ್‌ ಮತ್ತು  ಬಲ್ಗೇರಿಯದ ವೆಸೆಲಿನ್‌ ಟೊಪಲೊವ್‌ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.