ಬುಧವಾರ, ಜೂನ್ 3, 2020
27 °C

ಅಗ್ರಸ್ಥಾನ ಗಳಿಸುವ ವಿಶ್ವಾಸವಿದೆ: ಆನಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗ್ರಸ್ಥಾನ ಗಳಿಸುವ ವಿಶ್ವಾಸವಿದೆ: ಆನಂದ್

ಬೆಂಗಳೂರು: ಟರ್ಕಿಯಲ್ಲಿ ಏಪ್ರಿಲ್ 4ರಿಂದ 7ರ ವರೆಗೆ ನಡೆಯಲಿರುವ ಟರ್ಕಿ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಬೋರೆಗೌಡ ಆನಂದ್ ಕುಮಾರ್ ಪಾಲ್ಗೊಳ್ಳಲಿದ್ದು, ಅಗ್ರಸ್ಥಾನ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ವಿಶ್ವ ಪ್ಯಾರಾಬ್ಯಾಡ್ಮಿಂಟನ್ ಪಟ್ಟಿಯಲ್ಲಿ ಎರಡನೇ ರ‍್ಯಾಂಕ್ ಹೊಂದಿರುವ ಬೆಂಗಳೂರಿನ ಪ್ರತಿಭೆ ಟರ್ಕಿಯಲ್ಲಿ ಪದಕ ಗೆಲ್ಲುವ ಗುರಿ ಹೊಂದಿದೆ. ಹೋದ ವರ್ಷದ ನವೆಂಬರ್‌ನಲ್ಲಿ ಸೋಲ್‌ನಲ್ಲಿ ನಡೆದ ಮೂರನೇ ವಿಕ್ಟರ್ ಏಷ್ಯನ್ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ಹಾಗೂ ಡಬಲ್ಸ್ ಎರಡೂ ವಿಭಾಗಗಳಲ್ಲಿ ಕಂಚಿನ ಪದಕ ಜಯಿಸಿದ್ದರು. ಪದಕದ ನಿರೀಕ್ಷೆ ಹೊತ್ತ ಆನಂದ್ ಮಂಗಳವಾರ ಟರ್ಕಿಗೆ ಪ್ರಯಾಣ ಬೆಳೆಸಿದರು.`ಟರ್ಕಿ ಟೂರ್ನಿಯಲ್ಲಿ ಪದಕ ಗೆದ್ದು ಅಗ್ರಸ್ಥಾನ ಪಡೆಯಬೇಕು ಎನ್ನುವ ಛಲದೊಂದಿಗೆ ತೆರಳುತ್ತಿದ್ದೇನೆ. ಈ ಟೂರ್ನಿಗೆ ತೆರಳಲು ಆರ್ಥಿಕ ಸಮಸ್ಯೆ ಕಾಡಿತು. ಈ ವೇಳೆ `ಕಮ್ಯೂನಿ ಮತ್ತು ಟಾರ್ಗೆಟ್ ಗೇಮ್ಸ ಫೆಸಲೀಟಿಸ್' ಎನ್ನುವ ಕಂಪೆನಿ ಪ್ರಾಯೋಜಕತ್ವ ನೀಡಿದೆ. ಟರ್ಕಿಯಲ್ಲಿ ಭಾರತದ ಧ್ವಜ ಹಾರಾಡಿಸಬೇಕು ಎನ್ನುವುದು ಗುರಿ. ಅದಕ್ಕಾಗಿ ಸಾಕಷ್ಟು ಕಠಿಣ ಅಭ್ಯಾಸ ನಡೆಸಿದ್ದೇನೆ' ಎಂದು ಆನಂದ್  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.