ಅಜ್ಮೀರ್ ಸ್ಫೋಟದ ರೂವಾರಿ ಕೊಲೆ: ಮೂವರ ಬಂಧನ

7

ಅಜ್ಮೀರ್ ಸ್ಫೋಟದ ರೂವಾರಿ ಕೊಲೆ: ಮೂವರ ಬಂಧನ

Published:
Updated:

ದಿವಾಸ್, ಮಧ್ಯಪ್ರದೇಶ (ಪಿಟಿಐ): ಅಜ್ಮೀರ್ ಸ್ಫೋಟ ಪ್ರಕರಣ ಸಂಚು ರೂಪಿಸಿದ ಹಾಗೂ ಆರ್‌ಎಸ್‌ಎಸ್ ಕಚೇರಿಯ ಸಹಾಯಕ ಸುನೀಲ್ ಜೋಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಷದ್ ಸೋಲಂಕಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ಅಜ್ಮೀರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲಂಕಿ ರಾಜಸ್ತಾನ ಎಟಿಎಸ್ ವಶದಲ್ಲಿದ್ದಾರೆ. ದಿವಾಸ್‌ನಲ್ಲಿ ವಾಸುದೇವ್ ಪಾರ್‌ಮರ್ ಮತ್ತು ಇಂದೋರ್‌ನ ಅನಂದ್ ರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೋರ್ಟ್‌ಗೆ ಹಾಜುರುಪಡಿಸಿದ್ದು ಸೋಲಂಕಿ ಅವರನ್ನು ಡಿ. 30ರವರೆಗೆ ನ್ಯಾಯಾಂಗ ಬಂಧನಕ್ಕೆ, ಉಳಿದ ಇಬ್ಬರು ಆರೋಪಿಗಳ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry