ಸೋಮವಾರ, ಮೇ 10, 2021
26 °C

ಅಡವಿ ಹಣ್ಣುಗಳು ಉಳಿಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳು ಜೀವ ವೈವಿಧ್ಯಗಳ ಖಜಾನೆ. ಅಲ್ಲಿ ಸಸ್ಯಸಂಪತ್ತಿದೆ ಪ್ರಾಣಿ ಸಂಕುಲ ಸಮೃದ್ಧವಾಗಿದೆ. ಹಲವು ಸಮುದಾಯಗಳಿಗೆ ಕಾಡಿನಲ್ಲಿ ಸಿಗುವ ಸಸ್ಯ ಮತ್ತು ಕಾಡು ಉತ್ಪನ್ನಗಳೇ ಜೀವನಾಧಾರ. ಇದನ್ನು ಬಳಸುವ ಬಗ್ಗೆ ಮಾನವ ಸಾಂಪ್ರದಾಯಿಕ ಜ್ಞಾನವನ್ನು ಪಡೆದಿದ್ದಾನೆ.ಇಂಥ ಕಾಡಿನ ಮಡಿಲಲ್ಲಿ ಹುಳಿ-ಸಿಹಿ ಮಿಶ್ರಿತ ಹಣ್ಣುಗಳದೇ ವಿಶಿಷ್ಟ ರುಚಿ. ಇದಕ್ಕೆ ಯಾವುದೇ ರಾಸಾಯನಿಕಗಳ ಸೋಂಕಿಲ್ಲ. ಹಿತ ಮಿತವಾಗಿ ತಿಂದರೆ ಅನಾರೋಗ್ಯದ ಚಿಂತೆಯೂ ಇಲ್ಲ. ಎಲ್ಲಾಹಣ್ಣುಗಳಲ್ಲೂ ಅವುಗಳದ್ದೇ ಆದ ರುಚಿ, ಬಣ್ಣ, ಔಷಧಿಗುಣ ಹಾಗೂ ಪೌಷ್ಠಿಕಾಂಶಗಳಿವೆ. ಋತುಮಾನಕ್ಕೆ ಅನುಸಾರವಾಗಿ ಬಿಡುವ ಗುಡ್ಡೆ ಗೇರು, ಸಂಪಿಗೆ ಹಣ್ಣು, ಕವಳಿ ಹಣ್ಣು, ಬೋರೆ, ನೇರಲೆ, ಪನ್ನೇರಲೆ, ಸಳ್ಳೆ, ಬಿಕ್ಕೆ, ನುರುಕಲು, ಪರಿಗೆ, ಬೆಮ್ಮಾರಲು ಮುಂತಾದವು.ಅಡವಿ ಹಣ್ಣುಗಳು ಮಾನವನಿಗಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ಆಹಾರ. ಹಿಂದೆ ಎಲ್ಲಾ ವಯೋಮಾನದವರೂ ಉಚಿತವಾಗಿ ಸವಿದು ಬಾಯಿ ಚಪ್ಪರಿಸುತ್ತಿದ್ದರು. ಬೇಸಿಗೆ ದಿನಗಳಲ್ಲಿ ಕಾಡು ಹಣ್ಣುಗಳು ಹೆಚ್ಚಿರುತ್ತವೆ. ಈ ಹಣ್ಣುಗಳನ್ನು ತಿನ್ನಲು ಮಲೆನಾಡಿನ ಮಕ್ಕಳು ರಜೆಯನ್ನೇ ಎದುರು ನೋಡುತ್ತಿದ್ದರು.ಆದರೆ ಇಂದು ಬರಿದಾಗಿರುವ ಕಾಡು, ಸಮಯಾಭಾವದಿಂದ ಮಕ್ಕಳಿಗೆ ಇವುಗಳ ಪರಿಚಯವೇ ಇಲ್ಲ. ಅಡವಿಯಲ್ಲೆ ಮಕ್ಕಳಿಗೆ ಬೇಸಿಗೆ ಶಿಬಿರ ಏರ್ಪಡಿಸಿ ಅಡವಿ ಹಣ್ಣುಗಳ ಪರಿಚಯ ಮಾಡಿಕೊಡಬಾರದೇ.ಇತ್ತೀಚಿಗೆ ತರಹೇವಾರಿ ಹಣ್ಣುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಆ ಕಾಡುಹಣ್ಣಿನ ಸವಿ ಮತ್ಯಾವ ಹಣ್ಣುಗಳನ್ನೂ ಸರಿಗಟ್ಟಲಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.