ಬೆಂಗಳೂರು: ವಾರ್ಷಿಕ 40ರಿಂದ 50 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ಅಡಿಕೆ ಕೃಷಿ ಮತ್ತು ಉದ್ಯಮಕ್ಕಾಗಿ `ಅಡಿಕೆ ಉತ್ಪನ್ನಗಳ ಉತ್ತೇಜನ ಮಂಡಳಿ~ ರಚನೆಯಾಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಪ್ರೊ. ಕಮ್ಮರಡಿ ಪ್ರಕಾಶ್ ಒತ್ತಾಯಿಸಿದರು.

ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ `ಸಹ್ಯಾದ್ರಿ ಸಂಘ~ ಬೆಂಗಳೂರಿನ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ `ಮಲೆನಾಡಿನ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಡಾ.ಗೋರಖ್ ಸಿಂಗ್ ವರದಿ~ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, `ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯ ಅಡಿಯಲ್ಲಿ ಈ ಮಂಡಳಿ ಸ್ಥಾಪನೆಯಾಗಲಿ~ ಎಂದು ಆಗ್ರಹಿಸಿದರು.

`ಅಡಿಕೆಗೆ ಭವಿಷ್ಯ ಇದೆಯೇ ಎಂಬ ಚಿಂತೆ ಬೇಡ, ಭವಿಷ್ಯದಲ್ಲಿ ಅಡಿಕೆ ಹೇಗಿರಬೇಕು ಎಂಬುದರ ಕಡೆ ಚಿಂತನೆ ಇರಲಿ~ ಎಂದು ಕಿವಿಮಾತು ಹೇಳಿದ ಅವರು, `ಅಡಿಕೆಯ ಪರ್ಯಾಯ ಬಳಕೆ ಕುರಿತು ಅಧ್ಯಯನ ನಡೆಸಲು ತಂತ್ರಜ್ಞಾನ ಮತ್ತು ವಾಣಿಜ್ಯ ಪಾರ್ಕ್ಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು~ ಎಂದರು. ಮಂಗಳೂರು, ಶಿವಮೊಗ್ಗ ಮತ್ತು ಶಿರಸಿಯಲ್ಲಿ ಇಂಥ ಪಾರ್ಕ್ಗಳನ್ನು ಸ್ಥಾಪಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಡಿಕೆಯಲ್ಲಿ ಶೇ 8ರಿಂದ 10ರಷ್ಟು ಕೊಬ್ಬಿನ ಅಂಶವಿದೆ. ಅಡಿಕೆಯಿಂದ ನೈಸರ್ಗಿಕ ಬಣ್ಣಗಳನ್ನೂ ತಯಾರಿಸಬಹುದು. ಹಾಗೆಯೇ ಅಡಿಕೆಯಲ್ಲಿ ಪೌಷ್ಠಿಕ ಮತ್ತು ಔಷಧೀಯ ಅಂಶಗಳಿವೆ. ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸಬೇಕು, ಹಕ್ಕುಸ್ವಾಮ್ಯವನ್ನು ಪಡೆಯಬೇಕು ಎಂದರು.

`ಅಡಿಕೆ ತಿನ್ನುವುದೇ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗಬಲ್ಲದು ಎಂಬ ವಾದವನ್ನು ಇತ್ತೀಚೆಗೆ ಮುಂದಿಡಲಾಗುತ್ತಿದೆ. ಇದರ ಹಿಂದೆಯೂ ದೊಡ್ಡ ಹುನ್ನಾರವಿದೆ~ ಎಂದು ಆರೋಪಿಸಿದ ಪ್ರಕಾಶ್, `ಅಡಿಕೆಯ ಬಳಕೆ ಪ್ರತಿವರ್ಷ ಶೇ 5ರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಪೂರೈಕೆ ಶೇ 4ರ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ರಾಜ್ಯದ ಒಟ್ಟು ಕೃಷಿ ಉತ್ಪಾದನೆಯಲ್ಲಿ ಅಡಿಕೆಯ ಪಾಲು ಶೇ 10ರಷ್ಟಿದೆ~ ಎಂದು ಅಂಕಿ-ಅಂಶ ನೀಡಿದರು.

ಉಡುಪಿ-ಚಿಕ್ಕಮಗಳೂರು ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ, ನಾಲ್ಕು ಹೆಕ್ಟೇರ್ವರೆಗಿನ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡುವ ಸಂಬಂಧ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುವ ಭರವಸೆ ನೀಡಿದರು. ಕಾಫಿ ಬೆಳೆಗಾರರ ಸಾಲ ಮನ್ನಾ ಸಂದರ್ಭದಲ್ಲಿ ಮಾಡಿದಂತೆ, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಿಂದ ಮಾಡಿದ ಸಾಲದ ಪ್ರಮಾಣ ಎಷ್ಟು ಎಂಬ ಅಂಕಿ-ಸಂಖ್ಯೆಗಳ ಆಧಾರದಲ್ಲಿ ಕೇಂದ್ರದ ಜೊತೆ ಮಾತನಾಡಬೇಕು ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಅಡಿಕೆ ತೋಟಗಳಿಗೆ ಸರ್ಕಾರ ಕಾರ್ಮಿಕರನ್ನು ನೀಡಬೇಕು. ರಾಷ್ಟ್ರೀಕೃತ ಹಾಗೂ ಶೆಡ್ಯೂಲ್ ಬ್ಯಾಂಕ್ಗಳ ಮೂಲಕ ಅಡಿಕೆ ಬೆಳೆಗಾರರಿಗೆ ಸಾಲ ಕೊಡಿಸಬೇಕು. ಅಡಿಕೆ ಸುಲಿಯುವ ಯಂತ್ರಕ್ಕೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮೂಲಕ ಸಬ್ಸಿಡಿ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಒತ್ತಾಯಿಸಿದರು.

ಅಡಿಕೆ ಬೆಳೆಗಾರರ ಸಾಲ ಮನ್ನಾ ಬೇಡಿಕೆಯನ್ನು ಪ್ರತಿಭಟನೆ ಬದಲು, ಮನವೊಲಿಕೆ ಮೂಲಕ ಮಾಡಿಸಿಕೊಳ್ಳೋಣ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಹೇಳಿದರು. ಸಹ್ಯಾದ್ರಿ ಸಂಘದ ಅಧ್ಯಕ್ಷ ಕೆ.ವಿ.ಆರ್. ಟ್ಯಾಗೋರ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಂಘದ ಉಪಾಧ್ಯಕ್ಷ ಇ.ವಿ. ಸತ್ಯನಾರಾಯಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.