ಸೋಮವಾರ, ಮಾರ್ಚ್ 8, 2021
25 °C

ಅಡಿಕೆ ನಿಷೇಧ ಸತ್ಯವಲ್ಲ: ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಕೆ ನಿಷೇಧ ಸತ್ಯವಲ್ಲ: ಹೆಗ್ಡೆ

ತರೀಕೆರೆ: ಕೇಂದ್ರ ಸರ್ಕಾರ ಅಡಿಕೆ ನಿಷೇಧ ಮಾಡುವಂತೆ ಸುಪ್ರೀಂ ಕೋರ್ಟ್‌­ನಲ್ಲಿ  ಪ್ರಮಾಣ ಪತ್ರ ಸಲ್ಲಿಸಿದೆ ಎಂಬುದು ವಿರೋಧ ಪಕ್ಷಗಳ ಪಿತೂ­ರಿಯೇ ಹೊರತು ಸತ್ಯವಲ್ಲ. ಒಂದೊಮ್ಮೆ ಅದರ ಪ್ರತಿ ಒದಗಿಸಿದಲ್ಲಿ ರಾಜಕೀಯ ನಿವೃತ್ತಿಹೊಂದಲು ಸಿದ್ಧ. ಅದರಂತೆ ಆರೋಪ ಮಾಡುತ್ತಿರುವವರು ಈ ಸವಾಲಿಗೆ ಬದ್ಧರಾಗಬೇಕು ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಯ­ಪ್ರಕಾಶ್ ಹೆಗ್ಡೆ  ಸವಾಲು ಹಾಕಿದರು.ಪಟ್ಟಣದ ಕೋಡಿಕ್ಯಾಂಪ್ ನಿಂದ ಗಾಂಧಿ ಸರ್ಕಲ್ ವರೆಗೆ ರೋಡ್ ಶೋ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಮಾತ­ನಾಡಿದರು.

ತರೀಕೆರೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕುರಿತಂತೆ ಇರುವ ಪ್ರಸ್ತಾವನೆಯನ್ನು ವ್ಯಾಪಕಗೊಳಿಸಿ ತುಮಕೂರಿನಿಂದ ಶಿವಮೊಗ್ಗ ವರೆಗೆ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧವಾಗಿದೆ ಎಂದರು. ಅಜ್ಜಂಪುರ, ಶಿವನಿ ರೈಲ್ವೆ ನಿಲ್ದಾಣಗಳ ಉನ್ನತೀಕರಣ ಈಗಾಗಲೇ ನಡೆಯುತ್ತಿದ್ದು,ತರೀಕೆರೆ ನಿಲ್ದಾಣವನ್ನು ಉನ್ನತೀಕರಣಕ್ಕೆ ಈಗಾ­ಗಲೇ ಕ್ರಮಕೈಗೊಳ್ಳಲಾಗಿದೆ ಎಂದರು. ಅಜ್ಜಂಪುರ,ಶಿವನಿ, ಬೇಲೇನ­ಹಳ್ಳಿಗಳಲ್ಲಿ ಏಕ್ಸ್ ಪ್ರೆಸ್ ರೈಲು ನಿಲುಗಡೆಗೆ ಅಗತ್ಯ ಕ್ರಮ ವಹಿಸಲಾಗಿರುವುದಾಗಿ ತಿಳಿಸಿ­ದರು.ಶಾಸಕ ಜಿ.ಎಚ್.ಶ್ರೀನಿವಾಸ್ ಮಾತ­ನಾಡಿ, ಬಿಜೆಪಿ ಅಭ್ಯರ್ಥಿ ಶೋಭ ಕರಂದ್ಲಾಜೆ ಹೊರಗಿನವರು, ವಿವಿದೆಡೆ ಟಿಕೇಟ್ ಗಾಗಿ ಪ್ರಯತ್ನಿಸಿ ಎಲ್ಲೂ ದೊರೆಯದಿದ್ದಾಗ ಈ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಹಿಂದೆ ಕೆಜೆಪಿಯಲ್ಲಿ­ದ್ದಾಗ ಬಿಜೆಪಿಯನ್ನು ಯದ್ವಾತದ್ವಾ ಟೀಕಿಸಿದವರಿಗೆ ಈಗ ಬಿಜೆಪಿಯಿಂದ ಸ್ಪರ್ಧಿಸಿ ಮತ ಕೇಳಲು ಯಾವ ನೈತಿಕತೆ ಇದೆ. ಯಡಿಯೂರಪ್ಪ ಭ್ರರಷ್ಟಾಚಾರ­ದಲ್ಲಿ ಜೈಲು ಪಾಲಾಗಿ ಈಗ ನೈತಿಕತೆ ಬೋಧಿಸುವ ಅಗತ್ಯತೆ ಇಲ್ಲ.  ಜಯ­ಪ್ರಕಾಶ್ ಹೆಗ್ಡೆ ಇದೇ ಕ್ಷೇತ್ರದವರಾಗಿದ್ದು ಸದಾ ಜನಗಳ ಜೊತೆಯಲ್ಲಿಯೇ ಇರುವವರು.ಹಾಗಾಗಿ ಮತದಾರ ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ನೀಡಿ ಮತ್ತೊಮ್ಮೆ ಜಯಶೀಲರನ್ನಾಗಿ ಮಾಡಬೇಕೆಂದು ಕೋರಿದರು.ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬ­ಲಿಸುವ ಅಗತ್ಯತೆ ಇದೆ. ಅದರೊಂದಿಗೆ ಹೊರಗಿನಿಂದ ಬಂದವರಿಗೆ ತಕ್ಕ ಪಾಠ ಕಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ, ಪುರಸಭೆ ಅಧ್ಯಕ್ಷ ಸುನಿಲ್ ದತ್ತ. ಪುರಸಭೆ ಸದಸ್ಯರು, ವಿವಿಧ ಬ್ಲಾಕ್ ಗಳ ಅಧ್ಯಕ್ಷರು, ಪದಾಧಿ­ಕಾರಿಗಳು, ಕಾಂಗ್ರೆಸ್ ಮುಖಂಡರು ಇದ್ದರು. ಜಿಲ್ಲಾ ಸಮಿತಿ ಮುಖಂಡರ ಗೈರು: ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ ಸಮಿತಿ ಮುಖಂಡರು ಯಾರು ಸಹಾ ಪಾಲ್ಗೊಳ್ಳದಿರುವುದು ಎದ್ದು ಕಾಣುತ್ತಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.