ಕವಿತಾ ಸಾಫ್ಟ್ವೇರ್ ಎಂಜಿನಿಯರ್. ವಾರಾಂತ್ಯದ ಶುಕ್ರವಾರ ರಾತ್ರಿ ಗೆಳತಿಯರಿಗೆ ಮನೆಯಲ್ಲಿ ಪಾರ್ಟಿ ಕೊಡಿಸುವುದಾಗಿ ವಾಗ್ದಾನ ಮಾಡಿರುತ್ತಾಳೆ. ಕವಿತಾ ಅಪಾರ್ಟ್ಮೆಂಟ್ನಲ್ಲಿ ಒಬ್ಬಳೇ ವಾಸವಾಗಿದ್ದಾಳೆ.

ಪಾರ್ಟಿ ಕೊಡುವ ಆ ದಿನ ಅವಳದ್ದೂ ಎರಡನೇ ಪಾಳಿಯ ಕೆಲಸ. ಅಂದರೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗಿನ ಕೆಲಸ! ರಾತ್ರಿ 10 ಗಂಟೆಗೆ ಮನೆಗೆ ಹೋಗಿ ನಮಗೆ ಅಡುಗೆ ಮಾಡಿ ಬಡಿಸುವ ಹೊತ್ತಿಗೆ ಮಧ್ಯರಾತ್ರಿ 2 ಗಂಟೆ ಆಗುವುದು ಖಚಿತ ಎಂದು ಅವಳ ಗೆಳತಿಯರು ಮೂಗು ಮುರಿಯಲು ಶುರು ಮಾಡಿದರು!

‘ಅಯ್ಯೋ ಡೋಂಟ್ ವರೀ, ನಿಮಗೆ ಮನೆಗೆ ಹೋದ ತಕ್ಷಣವೇ ಬಿಸಿ ಬಿಸಿ ಊಟ ತಾನೇ ಬೇಕು? ನಾವು ಹೋಗುವಷ್ಟರಲ್ಲಿ ಬಿಸಿಬೇಳೆಭಾತ್ ರೆಡಿಯಾಗಿರುತ್ತದೆ’ ಎಂದಾಗ ಗೆಳತಿಯರೆಲ್ಲ ಹೌಹಾರಿದರು. ಇವಳ ಮನೆಯಲ್ಲಿ ಯಾರೋ ಇರಬೇಕು, ಇಲ್ಲ ಅಂದ್ರೆ ನಾವು ಹೋಗುವಷ್ಟರಲ್ಲಿ ಯಾವುದಾದರೂ ಹೋಟೆಲ್ನಿಂದ ಬಿಸಿಬೇಳೆಭಾತ್ ಪಾರ್ಸಲ್ ಬರುತ್ತದೆ ಅಷ್ಟೇ ಎಂದು ಅವರೆಲ್ಲ ಮಾತಾಡಿಕೊಂಡರು.

ಇತ್ತ ಕವಿತಾ ಮಾತ್ರ, ತನ್ನ ಮೊಬೈಲ್ ಆ್ಯಪ್ನಲ್ಲಿ ಬೇಳೆ, ಅಕ್ಕಿ, ಎರಡು ಚಮಚ ಎಣ್ಣೆ, ಸ್ವಲ್ಪ ತರಕಾರಿ ಇತ್ಯಾದಿ ಪರಿಕರಗಳನ್ನು ಆ್ಯಡ್ ಮಾಡಿದ ಬಳಿಕ, ಉಷ್ಣಾಂಶ 100 ಡಿಗ್ರಿ ಎಂದು ಟೈಪ್ ಮಾಡಿ ಮೊಬೈಲ್ ಆಫ್ ಮಾಡಿದರು.

ಕಂಪೆನಿಯ ಕ್ಯಾಬ್ನಲ್ಲಿ ಕವಿತಾ ಗೆಳೆತಿಯರೊಂದಿಗೆ ತನ್ನ ಅಪಾರ್ಟ್ಮೆಂಟ್ಗೆ ಬಂದಾಗ, ಮನೆಗೆ ಬೀಗ ಹಾಕಿತ್ತು, ಸುತ್ತ ಮುತ್ತ ಹೋಟೆಲ್, ಪಾರ್ಸಲ್ನವರು ಯಾರು ಇರಲಿಲ. ಕವಿತಾ ಮನೆಯ ಒಳಗೆ ಹೋದ ತಕ್ಷಣ ಗೆಳತಿಯರನ್ನು ಡೈನಿಂಗ್ ಟೇಬಲ್ ಮೇಲೆ ಕೂರಿಸಿ, ಚಿಕ್ಕ ಫ್ರಿಡ್ಜ್ ಆಕಾರದಲ್ಲಿದ್ದ ಓವೆನ್ ತೆರೆದು ಅದರಲ್ಲಿದ್ದ ಬಿಸಿಬೇಳೆಭಾತ್ ಬಡಿಸಿದಾಗ ಎಲ್ಲರಿಗೂ ಅಶ್ಚರ್ಯ.

‘ಏನೂ ಕವಿತಾ ನಿನ್ನ ಮಹಿಮೆ, ಜಾದೂ ಮಾಡುವುದನ್ನು ಕಲಿತ್ತಿದ್ದಿಯಾ?’ ಎಂದು ಗೆಳತಿಯರು ಕೇಳಿದರು! ಆಗಾ ಕವಿತಾ ಹೇಳಿದ್ದು ಯಾವ ಜಾದೂ ಇಲ್ಲ, ಇದು ನೂತನ ತಂತ್ರಜ್ಞಾನದ 3ಡಿ ಫುಡ್ ಪ್ರಿಂಟರ್ ಮಹಿಮೆ ಅಷ್ಟೆ.

ಹೌದು, ನಾವು ಕಚೇರಿಯಲ್ಲೇ ಕುಳಿತು ಮನೆಯಲ್ಲಿ ಅಡುಗೆ ಮಾಡುವಂತಹ ಸಾಧನವನ್ನು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.ಇದಕ್ಕೆ 3ಡಿ ಫುಡ್ ಪ್ರಿಂಟರ್ ಎಂದೂ ನಾಮಕರಣ ಮಾಡಿದ್ದಾರೆ. ರೆಡಿಮೇಡ್ ಕಾಫಿ ಮಾಡುವ ಯಂತ್ರದ ಗಾತ್ರದಲ್ಲಿರುವ ಈ ಸಾಧನದಲ್ಲಿ ಒವೆನ್ ಮತ್ತು ಎರಡು ಕೈಗಳಿರುವ ಒಂದು ರೋಬೊ ಕೂಡ ಇರುತ್ತದೆ. ಬಳಕೆದಾರರು ಆ್ಯಪ್ ಮೂಲಕ ನಿರ್ದೇಶನ ನೀಡಿದಂತೆ ಕೆಲಸ ಮಾಡುತ್ತದೆ.

ಉದಾಹರಣೆಗೆ ನಾವು ಇದರಲ್ಲಿ ಅನ್ನ ಮಾಡ ಬೇಕಾದರೆ, ಒಂದು ಬಟ್ಟಲಿನಲ್ಲಿ ನೀರು, ಮತ್ತೊಂದು ಬಟ್ಟಲಿನಲ್ಲಿ ಅಕ್ಕಿ ಹಾಗೂ ಅನ್ನ ಬೇಯುವ ಒಂದು ಖಾಲಿ ಪಾತ್ರೆಯನ್ನು ಅದರಲ್ಲಿ ಇಟ್ಟಿರಬೇಕು. ನಾವು ಕಚೇರಿಯಲ್ಲಿ ಕುಳಿತುಕೊಂಡು ಆ್ಯಪ್ ಮೂಲಕ ನಿರ್ದೇಶನ ಮಾಡಿದರೆ ಸಾಕು ಅಲ್ಲಿರುವ ರೋಬೊ ಕೆಲಸ ಮಾಡಲು ಆರಂಭಿಸುತ್ತದೆ.

ಖಾಲಿ ಪಾತ್ರೆಯಲ್ಲಿ ನೀರು, ಅಕ್ಕಿ ಹಾಕಿ ಪಾತ್ರೆಯನ್ನು ಮುಚ್ಚುತ್ತದೆ. ಬಳಿಕ ನಾವು ಆ್ಯಪ್ ಮೂಲಕ ಅನ್ನ ಬೇಯುವುದಕ್ಕೆ ಉಷ್ಣಾಂಶವನ್ನು ನಿಗದಿ ಮಾಡಬೇಕು ಅಷ್ಟೇ. ಅನ್ನ ಬೆಂದ ಕೂಡಲೇ ಉಷ್ಣಾಂಶವು ತಾನಾಗಿಯೇ ಕಡಿಮೆಯಾಗುತ್ತದೆ.

ಆದರೆ, ಪ್ರಸ್ತುತ ಈ 3ಡಿ ಪ್ರಿಂಟರ್ನಲ್ಲಿ ಪಾಶ್ಚಿಮಾತ್ಯ ಶೈಲಿಯ ಖಾದ್ಯಗಳನ್ನು ಮಾತ್ರ ತಯಾರಿಸಲು ಸಾಧ್ಯ ಎನ್ನುತ್ತಾರೆ ಈ ಸಾಧನವನ್ನು ಅಭಿವೃದ್ಧಿಪಡಿಸಿರುವ ವಿಜ್ಞಾನಿ ಲಿಪ್ಸನ್. ಇದರಲ್ಲಿ ಅಡುಗೆ ಮಾಡುವುದರಿಂದ ಪೋಷಕಾಂಶಗಳು ಮತ್ತು ಮಿಟಮಿನ್ಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎನ್ನುತ್ತಾರೆ ಅವರು.

ಈ ಸಾಧನ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಲಿಪ್ಸನ್ ಹೇಳುತ್ತಾರೆ. ಒಟ್ಟಿನಲ್ಲಿ ಅಡುಗೆ ಮಾಡುವ 3ಡಿ ಫುಡ್ ಪ್ರಿಂಟರ್ ಯಂತ್ರ ಗೃಹಿಣಿಯರ ಕೈ ಸೇರುವ ಕಾಲ ಬಹಳ ದೂರವೇನಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.