ನವದೆಹಲಿ: ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲೂ ವೆಸ್ಟ್ ಇಂಡೀಸ್ನ ಬ್ಯಾಟರ್ಗಳು ದಿಟ್ಟ ಹೋರಾಟ ನೀಡಿದ್ದಾರೆ. ಫಾಲೋ ಆನ್ಗೆ ಗುರಿಯಾದರೂ ದ್ವಿತೀಯ ಇನಿಂಗ್ಸ್ನಲ್ಲಿ ವಿಂಡೀಸ್ಗೆ ಜಾನ್ ಕ್ಯಾಂಪ್ಬೆಲ್ ಹಾಗೂ ಶಾಯ್ ಹೋಪ್ ಆಸರೆಯಾಗಿದ್ದಾರೆ.

ಅಮೋಘ ಶತಕ ಗಳಿಸಿದ ಕ್ಯಾಂಪ್ಬೆಲ್ ಹಾಗೂ ಶತಕದ ಮುನ್ನಡೆಯುತ್ತಿರುವ ಹೋಪ್ ಜೊತೆಯಾಟದ ನೆರವಿನಿಂದ ಕೆರೆಬಿಯನ್ ಪಡೆ ಇನಿಂಗ್ಸ್ ಮುನ್ನಡೆಯತ್ತ ದಾಪುಗಾಲು ಇಟ್ಟಿದೆ.

ನಾಲ್ಕನೇ ದಿನದ ಊಟದ ವಿರಾಮಕ್ಕೆ 78 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 252 ರ್ ಗಳಿಸಿದ್ದು, ಇನಿಂಗ್ಸ್ ಮುನ್ನಡೆಗಿನ್ನು 18 ರನ್ ಬೇಕಿದೆ.

ಕ್ಯಾಂಪ್ಬೆಲ್ ಹಾಗೂ ಹೋಪ್ ಮೂರನೇ ವಿಕೆಟ್ಗೆ 178 ರನ್ಗಳ ಬೃಹತ್ ಜೊತೆಯಾಟ ಕಟ್ಟಿದರು. ಆ ಮೂಲಕ ಆತಿಥೇಯ ಬೌಲರ್ಗಳನ್ನು ಕಾಡಿದರು.

ಕ್ಯಾಂಪ್ಬೆಲ್ 199 ಎಸೆತಗಳಲ್ಲಿ 115 ರನ್ ಗಳಿಸಿ (12 ಬೌಂಡರಿ, 3 ಸಿಕ್ಸರ್) ಔಟ್ ಆದರು.

ಅತ್ತ ಕಲಾತ್ಮಕ ಇನಿಂಗ್ಸ್ ಕಟ್ಟಿದ ಹೋಪ್ 189 ಎಸೆತಗಳಲ್ಲಿ 92 ರನ್ ಗಳಿಸಿ (10 ಬೌಂಡರಿ, 2 ಸಿಕ್ಸರ್) ಕ್ರೀಸಿನಲ್ಲಿದ್ದಾರೆ. ಅವರಿಗೆ ನಾಯಕ ರೋಸ್ಟನ್ ಚೇಸ್ (23*) ಸಾಥ್ ಕೊಡುತ್ತಿದ್ದಾರೆ.

ಈ ಮೊದಲು ಯಶಸ್ವಿ ಜೈಸ್ವಾಲ್ (175) ಹಾಗೂ ನಾಯಕ ಶುಭಮನ್ ಗಿಲ್ (129*) ಅಮೋಘ ಶತಕಗಳ ಬೆಂಬಲದೊಂದಿಗೆ ಭಾರತ ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ನಷ್ಟಕ್ಕೆ 518 ರನ್ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ಬಳಿಕ ಕುಲದೀಪ್ ಯಾದವ್ (82ಕ್ಕೆ 5) ದಾಳಿಗೆ ಸಿಲುಕಿದ್ದ ವಿಂಡೀಸ್ 248 ರನ್ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಭಾರತ ಮೊದಲ ಇನಿಂಗ್ಸ್ನಲ್ಲಿ 270 ರನ್ಗಳ ಬೃಹತ್ ಮುನ್ನಡೆ ಗಳಿಸಿತ್ತು.
.Test: ವೆಸ್ಟ್ ಇಂಡೀಸ್ ಮರು ಹೋರಾಟ.ಕುಲದೀಪ್ಗೆ 5 ವಿಕೆಟ್, ವಿಂಡೀಸ್ 248ಕ್ಕೆ ಆಲೌಟ್; ಭಾರತಕ್ಕೆ 270 ರನ್ ಮುನ್ನಡೆ