ನವದೆಹಲಿ: ಸತತ ಎರಡನೇ ದಿನವೂ ನಾಯಕ ಶುಭಮನ್ ಗಿಲ್ ಮತ್ತು ತಂಡದ ಮ್ಯಾನೇಜ್ಮೆಂಟ್ ದಿಟ್ಟ ನಿರ್ಧಾರ ಕೈಗೊಂಡಿತು. ಈ ಹಿಂದೆ ಹಲವು ನಾಯಕರು ಇಂತಹ ತೀರ್ಮಾನ ಕೈಗೊಳ್ಳಲು ಹಿಂಜರಿದಿದ್ದರು. ಬಿಸಿಲ ಬೇಗೆ ಹೆಚ್ಚಾಗಿದ್ದ ಎರಡು ದಿನಗಳಲ್ಲಿ ಬೌಲರ್ಗಳು 81.5 ಓವರ್ಗಳನ್ನು ಬೌಲಿಂಗ್ ಮಾಡಿದ್ದರೂ ಭಾರತವು ವೆಸ್ಟ್ ಇಂಡೀಸ್ ಮೇಲೆ ಫಾಲೋ ಆನ್ ಹೇರಿತು. ಆದಷ್ಟು ಬೇಗನೆ ವಿಂಡೀಸ್ ತಂಡದ ಹೆಡೆಮುರಿ ಕಟ್ಟಿಬಿಡುವ ಉತ್ಸಾಹಆತಿಥೇಯರಲ್ಲಿತ್ತು.

ಶನಿವಾರ ಭಾರತ ತಂಡವು 5 ವಿಕೆಟ್ಗಳಿಗೆ 518 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಕುಲದೀಪ್ ಯಾದವ್ (82ಕ್ಕೆ5) ಅವರ ಕೈಚಳಕದ ಮುಂದೆ ಪ್ರವಾಸಿ ಬಳಗವು 248 ರನ್ ಗಳಿಸಿತು. 270 ರನ್ಗಳ ಹಿನ್ನಡೆ ಅನುಭವಿಸಿತು. ಉಭಯ ತಂಡಗಳು ಮುಖಾಮುಖಿಯಾದ ಕಳೆದ ಐದು ಟೆಸ್ಟ್ ಪಂದ್ಯಗಳೂ ಮೂರು ದಿನಗಳ ಒಳಗೇ ಮುಗಿದುಹೋಗಿದ್ದವು. ಆದ್ದರಿಂದ ಇಲ್ಲಿಯೂ ಅಂತಹದೇ ನಿರೀಕ್ಷೆ ಮೂಡಿತ್ತು.

ಆದರೆ ಪ್ರವಾಸಿ ಬ್ಯಾಟರ್ಗಳು ಈ ಹಂತದಿಂದ ಹೋರಾಟ ಆರಂಭಿಸಿದ್ದು ವಿಶೇಷ. ಅರುಣ್ ಜೇಟ್ಲಿ ಕ್ರೀಡಾಂಗಣದ ಸಪಾಟಾಗಿರುವ ಪಿಚ್ನಲ್ಲಿ ಚೆಂಡು ನಿಧಾನಗತಿಯಲ್ಲಿ ಚಲಿಸುತ್ತಿತ್ತು. ವಿಪರೀತ ಧಗೆಯೂ ಇತ್ತು. ಆದರೆ ಜಾನ್ ಕ್ಯಾಂಪ್ಬೆಲ್ (ಬ್ಯಾಟಿಂಗ್ 87; 145ಎ) ಮತ್ತು ಶಾಯ್ ಹೋಪ್ (ಅಜೇಯ 66; 103ಎ) ಅವರು ಮುರಿಯದ ಮೂರನೇ ವಿಕೆಟ್ ಜತೆಯಾಟದಲ್ಲಿ 138 ರನ್ ಸೇರಿಸಿದರು. ಅದರಿಂದಾಗಿ ದಿನದಾಟದ ಮುಕ್ತಾಯಕ್ಕೆ ವಿಂಡೀಸ್ ಬಳಗವು 2 ವಿಕೆಟ್ಗಳಿಗೆ 173 ರನ್ ಗಳಿಸಿತು. ಸರಣಿಯ ಕೊನೆ ಮತ್ತು ಎರಡನೇ ಟೆಸ್ಟ್ ಪಂದ್ಯವು ನಾಲ್ಕನೇ ದಿನಕ್ಕೆ ಸಾಗಿತು.

ಊಟದ ವಿರಾಮದ 50 ನಿಮಿಷಗಳ ನಂತರ ವೆಸ್ಟ್ ಇಂಡೀಸ್ ತಂಡದ ಎರಡನೇ ಇನಿಂಗ್ಸ್ ಆರಂಭವಾಯಿತು. ಒಂಬತ್ತನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಎಸೆತವನ್ನು ಹುಕ್ ಮಾಡಿದ ತೇಜನಾರಾಯಣ್ ಚಂದ್ರಪಾಲ್ ಅವರಿಗೆ ಅದೃಷ್ಟ ಕೈಕೊಟ್ಟಿತು. ಮಿಡ್ವಿಕೆಟ್
ನಲ್ಲಿದ್ದ ಗಿಲ್ ಆಕರ್ಷಕ ರೀತಿಯಲ್ಲಿ ಕ್ಯಾಚ್ ಪಡೆದರು. ಕೆಲವು ನಿಮಿಷಗಳ ನಂತರ ವಾಷಿಂಗ್ಟನ್ ಸುಂದರ್ ಎಸೆತವನ್ನು ಅಂದಾಜಿಸುವಲ್ಲಿ ಎಡವಿದ ಅಲಿಕ್ ಅಥನೇಜ್ ಅವರ ವಿಕೆಟ್ ಉರುಳಿತು. ಇದರಿಂದಾಗಿ ಚಹಾ ವಿರಾಮದ ವೇಳೆಗೆ ವಿಂಡೀಸ್ 35 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು.

ಅಷ್ಟೊತ್ತಿಗೆ ಕ್ಯಾಂಪ್ಬೆಲ್ ಅವರಿಗೆ ರಕ್ಷಣಾತ್ಮಕ ಆಟದಿಂದ ಹೆಚ್ಚು ಪ್ರಯೋಜನೆ ಇಲ್ಲ ಎಂಬ ಅರಿವು ಮೂಡಿತ್ತು. ಚಹಾ ನಂತರ ಬೀಸಾಟವಾಡುವ ನಿರ್ಧಾರದೊಂದಿಗೆ ಕಣಕ್ಕೆ ಮರಳಿದರು. ಟಿ20 ಮಾದರಿಯ ಬ್ಯಾಟಿಂಗ್ ಆರಂಭಿಸಿದ ಅವರು ಭಾರತದ ಸ್ಪಿನ್ನರ್ಗಳಾದ ರವೀಂದ್ರ ಜಡೇಜ, ವಾಷಿಂಗ್ಟನ್ ಮತ್ತು ಕುಲದೀಪ್ ಅವರ ಎಸೆತಗಳನ್ನು ದಂಡಿಸಿದರು. ಫ್ರಂಟ್ಫುಟ್, ಸ್ವೀಪ್ ಹೊಡೆತಗಳನ್ನು ಭರಪೂರ ಪ್ರಯೋಗಿಸಿದರು. ಬ್ಯಾಕ್ಫುಟ್ ಕಟ್ ಮತ್ತು ಸ್ಲ್ಯಾಪ್ಗಳಿಗೂ ಕೊರತೆಯಿರಲಿಲ್ಲ.

ಕ್ಯಾಂಪ್ಬೆಲ್ ಅವರನ್ನು ನೋಡಿ ಪ್ರೇರಣೆಗೊಂಡಂತೆ ಕಂಡ ಹೋಪ್ ಕೂಡ ಬ್ಯಾಟ್ ಬೀಸಿದರು. ಯಾವುದೇ ಅವಕಾಶವನ್ನೂ ಅವರು ಬಿಡಲಿಲ್ಲ. ಈ ಹಂತದಲ್ಲಿ ವಿಂಡೀಸ್ ತಂಡವು ಪ್ರತಿ ಓವರ್ಗೆ ಸರಾಸರಿ ಆರು ರನ್ ಗಳಿಸಿತು. ಪಿಚ್ನಲ್ಲಿ ಸ್ಪಿನ್ನರ್ಗಳಿಗೆಯಾವುದೇ ನೆರವು ಸಿಗಲಿಲ್ಲ. ಇದರಿಂದಾಗಿ ನಾಯಕ ಗಿಲ್ ಅವರು ಅನಿವಾರ್ಯವಾಗಿ ಫೀಲ್ಡರ್ಗಳನ್ನು ವೃತ್ತದಿಂದ ಹೊರಗೆ ನಿಯೋಜಿಸಿದರು. ಆಗ ಬ್ಯಾಟರ್ಗಳು ದೊಡ್ಡ ಹೊಡೆತಗಳ ನ್ನಾಡುವುದನ್ನು ಬಿಟ್ಟು ಒಂದು ಮತ್ತು ಎರಡು ರನ್ ಪಡೆಯತೊಡಗಿದರು. ಈ ಪ್ರಯತ್ನಗಳಲ್ಲಿ ಕೆಲವು ಬೌಂಡರಿಗಳೂ ಅವರ ಖಾತೆ ಸೇರಿದವು. ಇಷ್ಟೆಲ್ಲದರ ನಡುವೆಯೂ ಭಾರತ ತಂಡವು ಇನ್ನೂ ಉತ್ತಮ ಸ್ಥಿತಿಯಲ್ಲಿಯೇ ಇದೆ. ವಿಂಡೀಸ್ಗೆ ಮೊದಲ ಇನಿಂಗ್ಸ್ ಬಾಕಿ ಚುಕ್ತಾಗೊಳಿಸಲು ಇನ್ನೂ 97 ರನ್ಗಳು ಬೇಕಿವೆ.

ಕುಲದೀಪ್ ಕೈಚಳಕ: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಪ್ರಸ್ತುತ ಕ್ರಿಕೆಟ್ನಲ್ಲಿರುವ ಉತ್ತಮ ಸ್ಪಿನ್ನರ್ಗಳಲ್ಲಿ ಅಗ್ರಗಣ್ಯರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಆಫ್ಸ್ಪಿನ್ನರ್ ಆರ್. ಆಶ್ವಿನ್ ಅವರ ಜಾಗ ತುಂಬುವ ಭರವಸೆ ಮೂಡಿಸಿದರು.

ಕುಲದೀಪ್ ತಮ್ಮ ಮೊದಲ ಸ್ಪೆಲ್ನಲ್ಲಿ (10–0–27–3) ವೆಸ್ಟ್ ಇಂಡೀಸ್ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲವಾದ ಪೆಟ್ಟು ಕೊಟ್ಟರು. ಇದರಿಂದಾಗಿ ಊಟದ ವಿರಾಮಕ್ಕೆ 8ಕ್ಕೆ217 ರನ್ ಗಳಿಸಿತು. ವಿರಾಮದ ನಂತರ ತಂಡದ ಖಾತೆಗೆ 31 ರನ್ಗಳು ಸೇರುವಷ್ಟರಲ್ಲಿ ಇನ್ನುಳಿದ ಎರಡು ವಿಕೆಟ್ಗಳೂ ಪತನವಾದವು. ಕೊನೆಯ ವಿಕೆಟ್ ಕೂಡ ಕುಲದೀಪ್ ಖಾತೆ ಸೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.