ಗುರುವಾರ , ಜನವರಿ 23, 2020
20 °C

ಅಡುಗೆ ಸಿಲಿಂಡರ್‌ ರೂ3.46 ತುಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗೃಹ ಬಳಕೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಬೆಲೆ ರೂ 3.46 ಏರಿಕೆಯಾಗಿದೆ. ವಿತರಕರಿಗೆ ನೀಡುವ ಕಮಿಷನ್‌ ಶೇ 9ರಷ್ಟು ಏರಿಸಿ­ರುವ ಹಿನ್ನೆಲೆಯಲ್ಲಿ ಸರ್ಕಾರ ಸಿಲಿಂಡರ್‌ ಬೆಲೆ ಏರಿಕೆ ಮಾಡಿದೆ.ಈ ದರ ಮಂಗಳವಾರದಿಂದಲೇ  ಅನ್ವಯವಾಗಲಿದೆ. ವಿತರಕರಿಗೆ 14.2 ಕಿಲೋ ಸಿಲಿಂಡರ್‌ಗೆ ನೀಡಲಾಗುತ್ತಿರುವ ಕಮಿಷ­ನನ್ನು ರೂ 3.46 ಹೆಚ್ಚಿಸಲಾಗಿದೆ. ಗೃಹ ಬಳಕೆ ಅನಿಲ ಸಿಲಿಂಡರ್‌ ಬೆಲೆಯನ್ನು ಅದೇ ಪ್ರಮಾಣದಲ್ಲಿ ಏರಿಕೆ ಮಾಡ­ಲಾಗಿದೆ ಎಂದು ತೈಲ ಸಚಿವಾಲಯ ತಿಳಿಸಿದೆ.ಹೆಚ್ಚಿಸಲಾದ ಕಮಿಷನ್‌ ಹೊರೆ­ಯನ್ನು ಗ್ರಾಹಕರಿಗೆ ವರ್ಗಾಯಿಸ­ಲಾಗಿದೆ. ಇದು ಮಂಗಳವಾರದಿಂದಲೇ ಜಾರಿಗೆ ಬರಲಿದೆ.

ಇದರಿಂದ ಪ್ರತಿ ಸಿಲಿಂಡರ್‌ಗೆ ವಿತರಕ­ರಿಗೆ ನೀಡುವ ಕಮಿಷನ್‌ ಹಣ 40.71 ರೂಪಾಯಿ ಆಗುತ್ತದೆ.

ಪ್ರತಿಕ್ರಿಯಿಸಿ (+)