ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಾಪಿಂಗ್ಮಾಲ್, ಸೂಪರ್ ಮಾರ್ಕೆಟ್, ಐಷಾರಾಮಿ ಹೋಟೆಲ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಅಣಬೆಯ ಬಳಕೆಯೂ ಹೆಚ್ಚಾಗುತ್ತಿದೆ. ಇದರಿಂದಾಗಿ ಅಣಬೆ ಈಗ ಉತ್ತಮ ಬೇಡಿಕೆ ಬಂದಿದೆ.

-ಹೌದು. ಅಣಬೆಯನ್ನು ಒಂದು ಆಹಾರ ಪದಾರ್ಥವಾಗಿ ಗುರುತಿಸಿ, ವಾಣಿಜ್ಯ ಬೆಳೆಯಾಗಿ ಮನೆಯಲ್ಲೇ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಅಣಬೆ ಶಿಲೀಂದ್ರ ಜಾತಿಗೆ ಸೇರಿದ ಸಸ್ಯವಾಗಿದ್ದು ತನ್ನದೇಯಾದ ಸುವಾಸನೆಯನ್ನು ಹೊಂದಿರುವ ಅತ್ಯುತ್ತಮ ಆಹಾರವಾಗಿದೆ. ಪೌಷ್ಟಿಕಾಂಶ ಹೆಚ್ಚಾಗಿರುವುದೂ ಅಣಬೆ ಬಳಕೆಗೆ ಕಾರಣವಾಗಿದೆ. ಹೀಗಾಗಿ ಅನೇಕರು ಮನೆಯಲ್ಲೇ ಅಣಬೆ ತಯಾರಿಸಿ ಆಹಾರವಾಗಿ ಬಳಸುತ್ತಿದ್ದಾರೆ. ಇನ್ನು ಕೆಲವರು ಮಾರಾಟ ಮಾಡಿ `ಬೊಗಸೆ ತುಂಬ ಹಣ~ ಗಳಿಸುತ್ತಿದ್ದಾರೆ.

ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿರುವ `ಅಣಬೆ ಪ್ರಯೋಗ ಶಾಲೆ~ಯು ಅಣಬೆ ಬೆಳೆಸುವವರಿಗೆ ಉತ್ತೇಜನ ನೀಡುತ್ತಿದ್ದು, 10 ರೂಪಾಯಿಗೆ ಕಾಲು ಕೆ.ಜಿ ಅಣಬೆ ಬೀಜಗಳನ್ನು ಮಾರಾಟ ಮಾಡುತ್ತಿದೆ. ಕಾಲು ಕೆ.ಜಿ ಅಣಬೆ ಬೀಜಗಳಿಂದ 1.5 ಕೆ.ಜಿ ಅಣಬೆ ಪಡೆಯಬಹುದಾಗಿದ್ದು, ಮಾರಾಟದಿಂದ 150 ರೂಪಾಯಿ ಗಳಿಸಬಹುದು. ಒಂದು ಕೆ.ಜಿ ಉತ್ತಮ ಅಣಬೆಗೆ ಮಾರುಕಟ್ಟೆಯಲ್ಲಿ 50 ರಿಂದ 100 ರೂಪಾಯಿ ಬೆಲೆ ಇದೆ.

ಅಣಬೆಗಳಲ್ಲಿ ನಾನಾ ಜಾತಿಗಳಿದ್ದು ಪ್ರಮುಖವಾಗಿ ಚಿಪ್ಪು ಅಣಬೆ, ಭತ್ತದ ಹುಲ್ಲಿನ ಅಣಬೆ, ಬಿಳಿಗುಂಡಿಯ ಅಣಬೆ ಹಾಗೂ ಮಿಲ್ಕಿ ಅಣಬೆ ಎಂದು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಮೈಸೂರು ಹವಾಮಾನಕ್ಕೆ `ಚಿಪ್ಪು ಅಣಬೆ~ (ಫ್ಲೋರಿಟಸ್ ಫ್ಲೋರಿಡಾ) ಉತ್ತಮ ಬೆಳೆಯಾಗಿದೆ. ಚೆನ್ನಾಗಿ ಗಾಳಿ ಮತ್ತು ಬೆಳಕು ಬರುವ ಕೊಠಡಿಯಲ್ಲಿ ಹುಲ್ಲಿನ ಮೆದೆಯನ್ನು ಬಳಸಿ 20 ದಿನಗಳಲ್ಲಿ ಅಣಬೆ ಬೆಳೆಯಬಹುದು.

ಬೆಳೆಯುವುದು ಹೇಗೆ?: ಮೂರು ಕೆ.ಜಿ ಒಣ ಭತ್ತದ ಹುಲ್ಲನ್ನು ಎರಡು ಅಂಗುಲ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ಕತ್ತರಿಸಿದ ಹುಲ್ಲನ್ನು ನೀರಿನಲ್ಲಿ ನೆನೆಸಿ ಬಳಿಕ ಬಿಸಿ ನೀರಿನಲ್ಲಿ ಅರ್ಧ ಗಂಟೆ ಕುದಿಸಬೇಕು. ನೆನೆಸಿದ ಹುಲ್ಲನ್ನು ಸ್ವಚ್ಛವಾದ ನೆಲದ ಮೇಲೆ ಹರಡಿ 24 ಗ್ರಾಂ ತೊಗರಿ ಪುಡಿಯನ್ನು ಹುಲ್ಲಿನ ಮೇಲೆ ಹರಡಿ ಚೆನ್ನಾಗಿ ಮಿಶ್ರಣ ಮಾಡಬೇಕು. ಸುಮಾರು 18*12 ಅಂಗುಲ ಅಗಲದ ಪಾಲಿಥೀನ್ ಚೀಲ ತೆಗೆದುಕೊಂಡು ಚಿಕ್ಕ ರಂಧ್ರಗಳನ್ನು ಮಾಡಿ, ಅದರಲ್ಲಿ ಹುಲ್ಲನ್ನು ಹಾಕಬೇಕು. ಹುಲ್ಲಿನ ಪಕ್ಕದಲ್ಲಿ ಅಣಬೆ ಬೀಜಗಳನ್ನು ಹಾಕಬೇಕು. ಬಳಿಕ ಚೀಲದ ಬಾಯಿ ಕಟ್ಟಿ 20 ದಿನ ಇಟ್ಟರೆ ರುಚಿಯಾದ ಅಣಬೆ ಸಿದ್ಧವಾಗುತ್ತದೆ.

ಏನೆಲ್ಲ ತಯಾರಿಸಬಹುದು?: ಅಣಬೆ ಬೆಳೆದಿದ್ದಾಯಿತು. ಅಡುಗೆಯಲ್ಲಿ ಹೇಗೆ ಬಳಸಬಹುದು, ಯಾವೆಲ್ಲ ಪದಾರ್ಥಗಳನ್ನು ಮಾಡಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಅಣಬೆಯನ್ನು ಬಳಸಿ ಬಾಯಲ್ಲಿ ನೀರೂರಿಸುವ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸಬಹುದು. ಅಣಬೆ ಕರಿ, ಅಣಬೆ ಬಿರಿಯಾನಿ, ಅಣಬೆ ಸೂಪ್, ಅಣಬೆ ಪಕೋಡ, ಅಣಬೆ ಪಲಾವ್, ಅಣಬೆ ಮೊಟ್ಟೆ ಪಲ್ಯ, ಅಣಬೆ ಚಾಪ್ಸ್, ಅಣಬೆ ಮತ್ತು ಟೊಮೆಟೋ ಕರಿ, ಅಣಬೆ ಕಟ್ಲೆಟ್, ಅಣಬೆ ಪಾಯಸ, ಅಷ್ಟೇ ಏಕೆ ಅಣಬೆ ಉಪ್ಪಿನ ಕಾಯಿಗಳನ್ನೂ ತಯಾರಿಸಬಹುದು. ಮನೆಯ ಸದಸ್ಯರೊಂದಿಗೆ ಸವಿಯಬಹುದು.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ತೋಟಗಾರಿಕೆ ಸಹಾಯಕ ದಿನೇಶ್, `ರಕ್ತದೊತ್ತಡ, ಮಧುಮೇಹ ಹಾಗೂ ಹೃದ್ರೋಗ ಕಾಯಿಲೆಗಳಿಗೆ ಅಣಬೆ ಆಹಾರ `ರಾಮಬಾಣ~ವಿದ್ದಂತೆ. ಪೋಷಕಾಂಶ ಹೆಚ್ಚಾಗಿರುವುದರಿಂದ ಅನೇಕ ವೈದ್ಯರು ಬೀಜ ಖರೀದಿಸಿ, ಮನೆಯಲ್ಲೇ ಅಣಬೆ ಬೆಳೆಯುತ್ತಿದ್ದಾರೆ. ಹೋಟೆಲ್, ರೆಸ್ಟಾರಂಟ್, ದಾಬಾ ಹಾಗೂ ಸೂಪರ್ ಮಾರ್ಕೆಟ್ಗಳಲ್ಲೂ ಅಣಬೆಗೆ ಉತ್ತಮ ಬೇಡಿಕೆ ಇದೆ. ಆರ್ಥಿಕವಾಗಿಯೂ ಸಾಕಷ್ಟು ಹಣ ಸಂಪಾದಿಸಬಹುದು~ ಎಂದು ತಿಳಿಸಿದರು. ಮಾಹಿತಿಗೆ ಮೊ.9740596111 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.