ಗುರುವಾರ , ಏಪ್ರಿಲ್ 15, 2021
31 °C

ಅಣುಸ್ಥಾವರ ಅಭಿವೃದ್ಧಿ ನಿಲ್ಲಿಸುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೋ (ಇತಾರ್‌ತಾಸ್): ಜಪಾನಿನ ರಿಯಾಕ್ಟರುಗಳಲ್ಲಿ ಸತತ ಸ್ಫೋಟಗಳು ಸಂಭವಿಸುತ್ತಿದ್ದರೂ ಅಣು ಸ್ಥಾವರಗಳ ಅಭಿವೃದ್ಧಿಪಡಿಸುವುದನ್ನು ಮುಂದುವರಿಸುವುದಾಗಿ ರಷ್ಯದ ಪ್ರಧಾನಿ ವ್ಲಾಡಿಮಿರ್ ಪುಟಿನ್ ಗುರುವಾರ ಪ್ರಕಟಿಸಿದರು.ಅಣು ಶಕ್ತಿಯಿಲ್ಲದೆ ಜಾಗತಿಕ ಶಕ್ತಿಯ ಸಮತೋಲದ ಕುರಿತು ಮಾತನಾಡುವುದೇ ಅಸಾಧ್ಯ. ಜಪಾನ್‌ನಲ್ಲಿ ಅವಘಡಗಳು ಸಂಭವಿಸುತ್ತಿರುವ ಸ್ಥಾವರಗಳಲ್ಲಿನ ಉಪಕರಣಗಳು ನಲವತ್ತು ವರ್ಷಗಳಷ್ಟು ಹಳೆಯದಾಗಿವೆ. ಆದರೆ ಆಧುನಿಕ ಅಣುಶಕ್ತಿ ಸ್ಥಾವರಗಳ ರಕ್ಷಣೆಯ ವ್ಯವಸ್ಥೆ ವಿಶೇಷ ಲಕ್ಷಣಗಳನ್ನು ಹೊಂದಿವೆ. ಹೀಗಾಗಿ ಇಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಯಾವುದೇ ಸ್ಥಾವರಗಳಿಗೆ ಹಾನಿಯಾಗದಂತೆ ತಡೆಯಲು ಸಾಧ್ಯವಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.