ವಿಯೆನ್ನಾ (ಎಎಫ್ಪಿ): ಜಪಾನ್ನಲ್ಲಿ ಸಂಭವಿಸಿದ 8.9 ಪ್ರಮಾಣದ ಭೀಕರ ಭೂಕಂಪ ಪ್ರದೇಶದಲ್ಲಿ ಇದ್ದ ನಾಲ್ಕು ಪರಮಾಣು ಸ್ಥಾವರಗಳನ್ನು ಸುರಕ್ಷಿತವಾಗಿ ಸ್ಥಗಿತಗೊಳಿಸಲಾಗಿದೆ. ವಿಕಿರಣ ಸೋರಿಕೆ ಆಗಿಲ್ಲ.ವಿಶ್ವಸಂಸ್ಥೆಯ ಪರಮಾಣು ವಿಷಯಗಳ ಕಾವಲು ಸಮಿತಿ ಇದನ್ನು ದೃಢಪಡಿಸಿದೆ. ಅಂತರರಾಷ್ಟ್ರೀಯ ಪರಮಾಣು ನಿರೀಕ್ಷಣಾ ಸಂಸ್ಥೆಯ (ಐಎಇಎ) ಅಂಗವಾಗಿರುವ ಘಟನೆ ಮತ್ತು ತುರ್ತು ನಿಗಾ ಕೇಂದ್ರಕ್ಕೆ ಅಂತರ ರಾಷ್ಟ್ರೀಯ ಭೂಕಂಪ ಸುರಕ್ಷಾ ಕೇಂದ್ರ (ಎಸ್ಎಸ್ಸಿ) ತುರ್ತು ಸಂದೇಶ ಲಭಿಸಿದ ಹಿನ್ನೆಲೆಯಲ್ಲಿ ಈ ವಿವರ ನೀಡಲಾಗಿದೆ.

ಸೋರಿಕೆ ಇಲ್ಲ: ತೀವ್ರ ಭೂಕಂಪನದ ಸೂಕ್ಷ್ಮ ಪ್ರದೇಶದಲ್ಲಿ ಈ ಪರಮಾಣು ಸ್ಥಾವರಗಳು ಇದ್ದರೂ, ಸಕಾಲದಲ್ಲಿ ಸ್ಥಗಿತಗೊಳಿಸಿದ ಕಾರಣ, ವಿಕಿರಣ ಸೋರಿಕೆ ಉಂಟಾಗಿಲ್ಲ.
ವಿಕಿರಣ ಅಂಶ ಪತ್ತೆಯೂ ಆಗಿಲ್ಲ ಎಂದು ಐಎಇಎ ತಿಳಿಸಿದೆ. ಈ ಮಧ್ಯೆ ಒನಗಾವಾ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಸರ್ಕಾರ ದೃಢಪಡಿಸಿದೆ. ಆದರೆ ಇದನ್ನು ಯಶಸ್ವಿಯಾಗಿ ನಂದಿಸಲಾಗಿದೆ ಎಂದು ತಿಳಿಸಿದೆ.

ಮುನ್ನೆಚ್ಚರಿಕೆ
ಟೋಕಿಯೊ (ಪಿಟಿಐ): ಜಪಾನ್ನನ್ನು ಅಲ್ಲೋಲಕಲ್ಲೋಲ ಮಾಡಿರುವ ಸುನಾಮಿ ಅಲೆ ರಷ್ಯಾ, ಇಂಡೋನೆಷ್ಯಾ, ನ್ಯೂಜಿಲೆಂಡ್, ಫಿಲಿಪ್ಪಿನ್ಸ್, ಚಿಲಿ ಸೇರಿದಂತೆ ಶಾಂತಿ ಮಹಾಸಾಗರದ ವಲಯ, ಆಗ್ನೇಯ ಏಷ್ಯಾ ರಾಷ್ಟ್ರಗಳು, ಲ್ಯಾಟಿನ್ ಅಮೆರಿಕ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಾವಳಿ ಎಬ್ಬಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಬಾಲಿಯಲ್ಲಿ ಭಾರಿ ಅಲೆ
ಇಂಡೋನೇಷಿಯಾದ ವಿಹಾರ ತಾಣ ಬಾಲಿ ದ್ವೀಪದ ಮೇಲೆ ನಸುಕಿನಲ್ಲಿ ಸುನಾಮಿಯ ಪರಿಣಾಮ ಉಂಟಾಗಿದೆ. ಆದರೆ, ಹಿಂದೂ ಮಹಾಸಾಗರದ ಆಳದಲ್ಲಿ ಸುನಾಮಿ ಹುಟ್ಟಿಕೊಂಡಿದೆ ಎಂದು ಭೂಕಂಪಶಾಸ್ತ್ರಜ್ಞರು ತಿಳಿಸಿದಾರೆ.ಬಾಲಿಯ ರಾಜಧಾನಿ ದೆನಪಸಾರನ ಮೇಲೆ ನಸುಕಿನ 1.08ಕ್ಕೆ ಸುನಾಮಿ ಅಪ್ಪಳಿಸಿದೆ. ಅದು ಅದರ ಈಶಾನ್ಯಕ್ಕೆ 261 ಕಿ.ಮೀ ಗಳಷ್ಟು ಕೇಂದ್ರೀಕೃತವಾಗಿತ್ತು. ಅದು 510 ಕೀ.ಮೀಗಳಷ್ಟು ಆಳದಲ್ಲಿದೆ ಎಂದು ಭೂವಿಜ್ಞಾನದ ಸಮೀಕ್ಷೆ ತಿಳಿಸಿದೆ.ಸುನಾಮಿಯಿಂದ ಯಾವುದೇ ಅಪಾಯವಿಲ್ಲ ಎಂದು ಹವಾಯಿಯಲ್ಲಿರುವ ಫೆಸಿಫಿಕ್ ಸುನಾಮಿ ಎಚ್ಚರಿಕೆಯ ಕೇಂದ್ರ ತಿಳಿಸಿದೆ.ಸುನಾಮಿ ಭೂಮಿಯ ಆಳದಲ್ಲಿದ್ದು, ಅದು ಹಿಂದೂ ಮಹಾಸಾಗರದಲ್ಲಿ ಸುನಾಮಿ ಅಲೆಗಳನ್ನು ಎಬ್ಬಿಸಲಿದೆ’ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.