ಅಣ್ಣಾ ಗ್ರಾಮದ ನಿಯೋಗಕ್ಕೆ ನಿರಾಶೆ

7

ಅಣ್ಣಾ ಗ್ರಾಮದ ನಿಯೋಗಕ್ಕೆ ನಿರಾಶೆ

Published:
Updated:

ನವದೆಹಲಿ (ಪಿಟಿಐ): ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ  ಅವರನ್ನು ಭೇಟಿಯಾಗಲು ಅಣ್ಣಾ ಹಜಾರೆ ಸ್ವಗ್ರಾಮ ರಾಳೆಗಣ ಸಿದ್ದಿಯ ಸರಪಂಚ್ ಮತ್ತವರ ತಂಡ `ಭೇಟಿ ಒಪ್ಪಿಗೆ~ ಸಿಗದೇ ಬರಿಗೈಲಿ ಹಿಂತಿರುಗಿದೆ.

ಮುಂದೆ ಭೇಟಿ ಒಪ್ಪಿಗೆ ಸಿಕ್ಕರೂ ಒಪ್ಪಿಕೊಳ್ಳಬೇಕೋ ಅಥವಾ ಬಾರದೋ ಎಂಬುದನ್ನು ಗ್ರಾಮ ನಿರ್ಧರಿಸಲಿದೆ ಎಂದು ತಂಡ ಸ್ಪಷ್ಟಪಡಿಸಿದೆ.ಕಾಂಗ್ರೆಸ್ ಸಂಸದ ಪಿ.ಟಿ.ಥಾಮಸ್ ಏರ್ಪಡಿಸಿದ್ದ ಈ ಸಭೆ ಹಲವು ನಿರೀಕ್ಷೆಗಳನ್ನು ಹುಟ್ಟಿಹಾಕಿತ್ತು. ಈ ಬೆಳವಣಿಗೆಯ ನಂತರ ಥಾಮಸ್ ಹೇಳಿಕೆ ನೀಡಿ, `ಸಂವಹನ ದೋಷದಿಂದಾಗಿ ಈ ಗೊಂದಲವಾಗಿದೆ~ ಎಂದು ಕ್ಷಮೆ ಯಾಚಿಸಿದ್ದಾರೆ.ಆದರೆ ರಾಹುಲ್‌ಗಾಂಧಿ ಅವರಿಗೆ ಈ ಭೇಟಿ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ವರದಿಗಾರರಿಗೆ ತಿಳಿಸಿದ್ದಾರೆ.`ಅ.18ರ ಬೆಳಿಗ್ಗೆ 9ಕ್ಕೆ ರಾಹುಲ್ ಗಾಂಧಿ ಭೇಟಿ ಮಾಡಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಸಂಸದರಿಂದ ಬಂದ ನಂತರವೇ ನಾವು ಇಲ್ಲಿಗೆ ಹೊರಟಿದ್ದು. ಈಗ ಸಂಸದರು ಸಂವಹನದಲ್ಲಿ ದೋಷವಾಗಿದೆ ಎನ್ನುತ್ತಿದ್ದಾರೆ. ನಾವು ಗ್ರಾಮಕ್ಕೆ ವಾಪಸು ಹೊರಡುತ್ತೇವೆ~ ಎಂದು ಸರಪಂಚ್ ನೇತೃತ್ವದ ಆರು ಜನರ ತಂಡ ಹೇಳಿದೆ.`ಸಂಸದರ ಸಲಹೆಯ ಮೇರೆಗೆ ನಾವು ರಾಹುಲ್ ಭೇಟಿಗೆ ಅವಕಾಶ ಕೋರಿದ್ದೆವು. ಭೇಟಿಗೆ ಒಪ್ಪಿಗೆ ಕೋರಿ ಬರೆದಿದ್ದ ಪತ್ರದಲ್ಲೂ ನಾವು ಇದನ್ನು ಸ್ಪಷ್ಟಪಡಿಸಿದ್ದೆವು. ಭೇಟಿಗೆ ಆಗಮಿಸುವಂತೆ ಸಂಸದರ ಕಚೇರಿಯವರು ಹಲವು ಬಾರಿ ನಮ್ಮನ್ನು ಸಂಪರ್ಕಿಸಿದ್ದವು. ಜತೆಗೆ, ರಾಹುಲ್ ಕಚೇರಿಯವರೂ ಹಲವು ಸಲ ಸಂಪರ್ಕಿಸಿದ್ದರು~ ಎಂದು ಹಜಾರೆ ಆಪ್ತ ಸುರೇಶ್ ಪಥಾರೆ ವಿವರಿಸಿದ್ದಾರೆ.ತಮ್ಮ ಸಲಹೆ ಮೇರೆಗೆ ರಾಹುಲ್ ಭೇಟಿಗೆ ತೆರಳಿದ್ದಾಗಿ ತಿಳಿಸಿರುವ ಗ್ರಾಮಸ್ಥರ  ಹೇಳಿಕೆಯನ್ನು ಥಾಮಸ್ ಅಲ್ಲಗಳೆದಿದ್ದಾರೆ.ಹಜಾರೆ ತಮ್ಮ ಗ್ರಾಮದಲ್ಲಿ ಚಾಲನೆ ನೀಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಲು ತಿಂಗಳ ಹಿಂದೆ ಅಲ್ಲಿಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು, ಗ್ರಾಮಾಭಿವೃದ್ಧಿಯ ಬಗ್ಗೆ ಆಸಕ್ತ ಹೊಂದಿರುವ ರಾಹುಲ್‌ರನ್ನು ಭೇಟಿಯಾಗುವ ಅಪೇಕ್ಷೆ ವ್ಯಕ್ತಪಡಿಸಿದರು. ಅದಕ್ಕಾಗಿ ನೆರವು ನೀಡುವ ಭರವಸೆ ನೀಡಿದ್ದೆ~ ಎಂದು ಥಾಮಸ್ ಹೇಳಿದ್ದಾರೆ.ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಕಾರ್ಯಸೂಚಿ ಇರಲಿಲ್ಲ. ಅಣ್ಣಾ ತಂಡ ಜನಲೋಕಪಾಲ ಮಸೂದೆಗಾಗಿ ನಡೆಸುತ್ತಿರುವ ಹೋರಾಟಕ್ಕೂ ನಮ್ಮ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಪಥಾರೆ ಸ್ಪಷ್ಟಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry