ಅಣ್ಣಾ ಹಜಾರೆ ಚಳವಳಿ ದೇಶದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಷ್ಟೇ ವೇಗದಲ್ಲಿ ಮರೆಗೆ ಸರಿದುಹೋಗಿದೆ. ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಯ ಮೂಲಕ ದೇಶದಾದ್ಯಂತ ಸಂಚಲನ ಉಂಟು ಮಾಡಿದ್ದ ಅಣ್ಣಾಹಜಾರೆ ಅವರು ತಮ್ಮ ತಂಡವನ್ನು ಬರ್ಖಾಸ್ತುಗೊಳಿಸಿದ್ದಾರೆ.

ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುವುದೂ ಸೇರಿದಂತೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ತಂಡದ ಇತರ ಸದಸ್ಯರ ಜತೆ ಪ್ರಾರಂಭದಿಂದಲೂ ಅಣ್ಣಾಹಜಾರೆ ಭಿನ್ನಾಭಿಪ್ರಾಯ ಹೊಂದಿದ್ದರು. ಕೊನೆಗೂ ತಾಳ್ಮೆಯ ಕಟ್ಟೆ ಒಡೆದುಹೋದಂತೆ ಯಾರಿಗೂ ಹೇಳದೆ, ಯಾರನ್ನೂ ಕೇಳದೆ ಅವರು ಏಕಾಏಕಿ ತಮ್ಮ ನಿರ್ಧಾರವನ್ನು ಪ್ರಕಟಿಸಿ ಊರಿಗೆ ಮರಳಿದ್ದಾರೆ.

ಒಂದು ಚಳವಳಿಯ ಸೋಲು-ಗೆಲುವುಗಳು ಅದರ ಉದ್ದೇಶ, ಸಂಘಟನೆ ಮತ್ತು ಹೋರಾಟದ ದಾರಿಯನ್ನು ಅವಲಂಬಿಸಿರುತ್ತದೆ. ಭ್ರಷ್ಟಾಚಾರ ನಿರ್ಮೂಲನೆಯ ಅಣ್ಣಾ ಚಳವಳಿಯ ಉದ್ದೇಶ ಪ್ರಾಮಾಣಿಕವಾಗಿತ್ತು. ಭ್ರಷ್ಟಾಚಾರದಿಂದ ರೋಸಿಹೋಗಿದ್ದ ಜನ ಈ ಕಾರಣದಿಂದಾಗಿಯೇ ಪ್ರಾರಂಭದಲ್ಲಿ ಚಳವಳಿಯನ್ನು ಬೆಂಬಲಿಸಿ ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದಿದ್ದರು.

ಅಣ್ಣಾತಂಡ ಎಂದು ಕರೆಯಲಾಗುತ್ತಿದ್ದ ಒಂದು ಸಡಿಲ ಗುಂಪಿನಲ್ಲಿ ಸಾಮೂಹಿಕ ಚಳವಳಿಗೆ ಇರಬೇಕಾದ ಆಂತರಿಕ ಪ್ರಜಾಪ್ರಭುತ್ವ ಇರಲೇ ಇಲ್ಲ. ಒಮ್ಮಮ್ಮೆ ಅಣ್ಣಾ ಅವರನ್ನೂ ಕತ್ತಲಲ್ಲಿಟ್ಟು ಬೆರಳೆಣಿಕೆಯ ಮಂದಿಯಷ್ಟೇ ಕೂಡಿ ನಿರ್ಧಾರ ಕೈಗೊಂಡಿದ್ದುಂಟು. ಇದರಿಂದಾಗಿ ಮೊದಲು ತಂಡದ ಕೆಲವು ಸದಸ್ಯರು, ನಂತರ ಕಾರ್ಯಕರ್ತರು, ಕೊನೆಗೂ ಜನ ಕೂಡಾ ಚಳವಳಿಯಿಂದ ದೂರ ಸರಿಯುತ್ತಾ ಹೋಗಿ ಸಂಘಟನೆ ದುರ್ಬಲವಾಗಿ ಹೋಯಿತು. ಇದು ಹೋರಾಟದ ಹಾದಿ ಬಗ್ಗೆಯೂ ಗೊಂದಲ ಸೃಷ್ಟಿಸಿತು.

ಕೊನೆಗೆ ಉದ್ದೇಶಿತ ಗುರಿಯನ್ನು ಮುಟ್ಟಲಾಗದೆ ಚಳವಳಿ ನಡುಹಾದಿಯಲ್ಲಿಯೇ ಕುಸಿದುಬಿತ್ತು.ಚಳವಳಿಯ ಮೂಲಕವೇ ಸ್ವಾತಂತ್ರ್ಯವನ್ನು ಗಳಿಸಿದ ಭಾರತದಲ್ಲಿ ಮುಷ್ಕರ, ಪ್ರತಿಭಟನೆ, ಚಳವಳಿಗಳು ಹೊಸತೇನಲ್ಲ. ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ಪರಿಸರವಾದಿಗಳು, ಬಳಕೆದಾರರು ಹೀಗೆ ವಿವಿಧ ವರ್ಗಗಳಿಗೆ ಸೇರಿರುವ ಜನ ಪ್ರತಿದಿನ ದೇಶದ ಯಾವುದಾದರೂ ಒಂದು ಮೂಲೆಯಲ್ಲಿ ಚಳವಳಿ ನಡೆಸುತ್ತಿರುತ್ತಾರೆ.

ಆ ಎಲ್ಲ ಚಳವಳಿಗಳಿಗೆ ಘೋಷಿತ ಉದ್ದೇಶವನ್ನು ಸಾಧಿಸಲು ಸಾಧ್ಯವಾಗದೆ ಹೋಗಬಹುದು, ಸೋಲುಗಳು ಎದುರಾಗಲೂಬಹುದು. ಆದರೆ ಒತ್ತಡ ಹೇರುವಂತಹ ಗುಂಪುಗಳಾಗಿ ಕೆಲಸ ಮಾಡುವ ಈ ಚಳವಳಿಗಳ ಪ್ರಭಾವ ಸರ್ಕಾರದ ನೀತಿ-ನಿರ್ಧಾರಗಳ ಮೇಲೆ ಆಗುತ್ತಿರುತ್ತವೆ. ದಿಢೀರ್ ಜನಪ್ರಿಯತೆಯ ಅಲೆಯಲ್ಲಿ ತೇಲಿಹೋದ ಅಣ್ಣಾತಂಡಕ್ಕೆ ಈ ವಾಸ್ತವವನ್ನು ಗ್ರಹಿಸಲು ಸಾಧ್ಯವಾಗಲಿಲ್ಲ.

ದೊಡ್ಡ ಗೆಲುವಿನ ಗುರಿಯನ್ನಿಟ್ಟುಕೊಂಡು ಹೊರಟಿದ್ದ ಅಣ್ಣಾತಂಡದ ಸದಸ್ಯರು ಸಣ್ಣಸಣ್ಣ ಹಿನ್ನಡೆಯನ್ನೂ ಸಹಿಸಲಾಗದಷ್ಟು ಅಸೈರಣೆಗೀಡಾಗಿದ್ದರು. ಈ ಹತಾಶ ಸ್ಥಿತಿಯಲ್ಲಿಯೇ ರಾಜಕೀಯ ಪಕ್ಷ ಕಟ್ಟುವ ತೀರ್ಮಾನವನ್ನು ಅವಸರದಲ್ಲಿ ಪ್ರಕಟಿಸಿ ಚಳವಳಿಯ ಹಾದಿ ತಪ್ಪಿಸಿಬಿಟ್ಟರು. ಈ ಒಂದು ತಪ್ಪು ನಡೆಯಿಂದಾಗಿ ಸಾಮಾಜಿಕ ಚಳವಳಿಯಲ್ಲಿ ತೊಡಗಿಸಿಕೊಂಡವರಿಗೆಲ್ಲ ರಾಜಕೀಯ ಉದ್ದೇಶ ಇರಬಹುದೇನೋ ಎಂದು ಜನ ಸಂಶಯಿಸುವಂತಾಗಿದೆ, ಹೀಗಾಗಬಾರದು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರೋಗ್ಯಪೂರ್ಣವಾಗಿಡುವುದೇ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸುವಂತಹ ಇಂತಹ ಚಳವಳಿಗಳು. ಅಣ್ಣಾ ಚಳವಳಿಯ ವೈಫಲ್ಯದಿಂದ ಪ್ರಾಮಾಣಿಕ ಚಳವಳಿಗಾರರು ಧೃತಿಗೆಡಬೇಕಾದ ಅಗತ್ಯ ಇಲ್ಲ, ಅವರು ಇದನ್ನು ಒಂದು ಪಾಠವಾಗಿ ಸ್ವೀಕರಿಸಿ ಮುಂದುವರಿಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.