ಲಂಡನ್: ಒಲಿಂಪಿಕ್ಸ್ನ `ವೇಗದ ಓಟಗಾರ~ ಪಟ್ಟವನ್ನು ತಮ್ಮದಾಗಿಸಿಕೊಳ್ಳಲು ಪೈಪೋಟಿಯಲ್ಲಿರುವ ಜಮೈಕದ ಉಸೇನ್ ಬೋಲ್ಟ್ ಮತ್ತು ಯೋಹಾನ್ ಬ್ಲೇಕ್ ಹೆಚ್ಚಿನ ಪ್ರಯಾಸವಿಲ್ಲದೆ ಸೆಮಿಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡರು.

ಒಲಿಂಪಿಕ್ ಕ್ರೀಡಾಂಗಣದಲ್ಲಿ ಶನಿವಾರ ನೆರೆದಿದ್ದ 80,000 ಕ್ಕೂ ಅಧಿಕ ಪ್ರೇಕ್ಷಕರ ಸಾನಿಧ್ಯದಲ್ಲಿ ನಡೆದ 100 ಮೀ. ಓಟದ ಹೀಟ್ಸ್ನಲ್ಲಿ ಬೋಲ್ಟ್ 10.9 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಇನ್ನೊಂದು ಹೀಟ್ಸ್ನಲ್ಲಿ ಬ್ಲೇಕ್ 10.00 ಸೆಕೆಂಡ್ಗಳಲ್ಲಿ ಗುರಿ ಕ್ರಮಿಸಿದರು.

ಆದರೆ ಶನಿವಾರ ನಡೆದ ಹೀಟ್ಸ್ನಲ್ಲಿ ಅತಿವೇಗದ ಸಮಯ ಕಂಡುಕೊಂಡದ್ದು ಅಮೆರಿಕದ ರ್ಯಾನ್ ಬೈಲಿ. ಮೂರನೇ ಹೀಟ್ಸ್ನಲ್ಲಿ ಓಡಿದ ಬೈಲಿ 9.88 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಎರಡನೇ ಹೀಟ್ಸ್ನಲ್ಲಿ ಪಾಲ್ಗೊಂಡ ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ 9.97 ಸೆಕೆಂಡ್ಗಳಲ್ಲಿ ಗುರಿ ತಲುಪಿ ಎರಡನೇ ಅತ್ಯುತ್ತಮ ಸಮಯ ಕಂಡುಕೊಂಡರು.

ಯೋಹಾನ್ ಬ್ಲೇನ್ (10.00), ಬ್ರಿಟನ್ನ ಡ್ವೇನ್ ಚೇಂಬರ್ಸ್ (10.02), ಜಮೈಕದ ಅಸಫಾ ಪೊವೆಲ್ (10.04), ಐವರಿ ಕೋಸ್ಟ್ನ ಬೆನ್ ಯೂಸುಫ್ (10.06), ಜಪಾನ್ನ ರ್ಯೋಟ ಯಮಗಾಟ (10.07) ಮತ್ತು ಅಮೆರಿಕದ ಟೈಸನ್ ಗೇ (10.08) ಅವರ ಬಳಿಕ ಬೋಲ್ಟ್ ಒಟ್ಟಾರೆಯಾಗಿ ಒಂಬತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ಬೋಲ್ಟ್ ಹೀಟ್ಸ್ನಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯ ತೋರಿದಂತೆ ಕಂಡುಬರಲಿಲ್ಲ. ಅರ್ಹತೆ ಗಿಟ್ಟಿಸಲು ಮಾತ್ರ ಓಡಿದಂತೆ ಕಾಣಿಸಿತು. ಭಾನುವಾರ ನಡೆಯುವ ಸೆಮಿಫೈನಲ್ ಹಾಗೂ ಫೈನಲ್ಗೆ `ಎನರ್ಜಿ~ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅವರು ತಂತ್ರ ಬಳಸಿರಬಹುದು. ಬೋಲ್ಟ್ ಬೀಜಿಂಗ್ ಕೂಟದ 100 ಮೀ. ಹಾಗೂ 200 ಮೀ. ಓಟದಲ್ಲಿ ಸ್ವರ್ಣ ಜಯಿಸಿದ್ದರು. ಆದರೆ ಈ ಬಾರಿ ಅವರು ಬ್ಲೇಕ್, ಗ್ಯಾಟ್ಲಿನ್ ಮತ್ತು ಟೈಸನ್ ಗೇ ಅವರಿಂದ ಪ್ರಬಲ ಪೈಪೋಟಿ ಎದುರಿಸಬೇಕಿದೆ.

100 ಮೀ. ಓಟದ ಸೆಮಿಫೈನಲ್ ಹಾಗೂ ಫೈನಲ್ ಭಾನುವಾರ ನಡೆಯಲಿವೆ. ಫೈನಲ್ ಸ್ಥಳೀಯ ಕಾಲಮಾನ ರಾತ್ರಿ 9.50ಕ್ಕೆ (ಭಾರತೀಯ ಕಾಲಮಾನ ಸೋಮವಾರ ಮುಂಜಾನೆ 2.20ಕ್ಕೆ) ನಡೆಯಲಿದೆ.

ಗಮನ ಸೆಳೆದ ಪಿಸ್ಟೋರಿಯಸ್: ವೇಗದ ಓಟಗಾರರ ಜೊತೆಗೆ ದಕ್ಷಿಣ ಆಫ್ರಿಕಾದ `ಬ್ಲೇಡ್ ರನ್ನರ್~ ಆಸ್ಕರ್ ಪಿಸ್ಟೋರಿಯಸ್ ಕೂಡಾ ಶನಿವಾರ ನೆರೆದ ಪ್ರೇಕ್ಷಕರ ಗಮನ ಸೆಳೆದರು. ಕೃತಕ ಕಾಲುಗಳನ್ನು (ಕಾರ್ಬನ್ ಫೈಬರ್ ಬ್ಲೇಡ್) ಬಳಸಿ ಓಡುವ ಪಿಸ್ಟೋರಿಯಸ್ ಪುರುಷರ 400 ಮೀ. ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

45.44 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಅವರು ಒಟ್ಟಾರೆಯಾಗಿ 16ನೇ ಸ್ಥಾನ ಪಡೆದು ಸೆಮಿಫೈನಲ್ಗೆ ಮುನ್ನಡೆದರು. `ಇಲ್ಲಿ ಸ್ಪರ್ಧಿಸುವುದೇ ವಿಶೇಷ ಅನುಭವ. ನನ್ನ ಕನಸು ಈಡೇರಿದೆ~ ಎಂದು ಪಿಸ್ಟೋರಿಯಸ್ ಪ್ರತಿಕ್ರಿಯಿಸಿದರು.

ದಿಬಾಬಗೆ ಬಂಗಾರ: ಇಥಿಯೋಪಿಯದ ತಿರುನೇಶ್ ದಿಬಾಬ ಮಹಿಳೆಯರ 10 ಸಾವಿರ ಮೀ. ಓಟದಲ್ಲಿ ಚಿನ್ನ ಗೆದ್ದರು. ಈ ಮೂಲಕ ಬೀಜಿಂಗ್ನಲ್ಲಿ ಜಯಿಸಿದ್ದ ಚಿನ್ನದ ಗೌರವವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ದಿಬಾಬ 30 ನಿಮಿಷ 20.75 ಸೆಕೆಂಡ್ಗಳಲ್ಲಿ ಗುರಿ ತಲುಪಿದರು.

ಕೀನ್ಯಾದ ಅಥ್ಲೀಟ್ಗಳಾದ ಸ್ಯಾಲಿ ಕಿಪ್ಯೆಗೊ (30:26.37 ಸೆ.) ಮತ್ತು ವಿವಿಯಾನ ಚೆರುಯೊಟ್ (30:30.44 ಸೆ.) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು. ದಿಬಾಬ ಬೀಜಿಂಗ್ ಕೂಟದಲ್ಲಿ 5,000 ಮೀ. ಹಾಗೂ 10,000 ಮೀ. ಓಟದಲ್ಲಿ ಸ್ವರ್ಣ ಜಯಿಸಿದ್ದರು.

ಪೋಲೆಂಡ್ನ ಥಾಮಸ್ ಮಜೇವ್ಸ್ಕಿ ಪುರುಷರ ಶಾಟ್ಪಟ್ ಸ್ಪರ್ಧೆಯ ಚಿನ್ನ ತಮ್ಮದಾಗಿಸಿಕೊಂಡರು. ಅವರು ಕಬ್ಬಿಣದ ಗುಂಡನ್ನು 21.89 ಮೀ. ದೂರ ಎಸೆಯುವಲ್ಲಿ ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.