ರಾಜರಾಜೇಶ್ವರಿನಗರ: ಸೋಂಪುರ ಬಳಿಯ ಚನ್ನವೀರಯಪಾಳ್ಯದ ಬಸವೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಸಾವಿರಾರು ಭಕ್ತರ ಜಯ ಘೋಷಣೆಯೊಂದಿಗೆ ಹಲವಾರು ಗ್ರಾಮಗಳ ದೇವರ ಉತ್ಸವ, ಕಡಲೆಕಾಯಿ ಪರಿಷೆ ಹಾಗೂ ಜಾನಪದ ಕಲಾಮೇಳ ಅದ್ದೂರಿಯಾಗಿ ನಡೆಯಿತು.

ಸಚಿವರಾದ ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ, ವಸತಿ ಮಹಾಮಂಡಲದ ಉಪಾಧ್ಯಕ್ಷ ಎಸ್.ಟಿ.ಸೋಮಶೇಖರ್, ನೈಸ್ ಮುಖ್ಯಸ್ಥ ಅಶೋಕ್ಖೇಣಿ, ಶಾಸಕ ಕೃಷ್ಣಬೈರೇಗೌಡ, ನಟರಾದ ದರ್ಶನ್, ಶ್ರೀನಗರ ಕಿಟ್ಟಿ, ನಿರ್ಮಾಪಕ ಎಚ್.ಎಂ. ಕೃಷ್ಣಮೂರ್ತಿ, ದೇಗುಲ ಮಠದ ಮಹಾಲಿಂಗಸ್ವಾಮಿ, ಮರುಳೆ ಗವಿಮಠದ ಶಿವರುದ್ರಸ್ವಾಮಿ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಕಂಠೀರವ ಸ್ಟುಡಿಯೋ ಅಧ್ಯಕ್ಷ ಎಂ.ರುದ್ರೇಶ್, ಪಾಲಿಕೆ ಸದಸ್ಯರಾದ ವೀಣಾ ನಾಗರಾಜು, ಜಿ.ಎಚ್.ರಾಮಚಂದ್ರ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಾವಿರಾರು ಭಕ್ತರಿಗೆ ಉಚಿತವಾಗಿ ಕಡಲೆಕಾಯಿ, ಕಬ್ಬು, ಗೆಣಸು ವಿತರಿಸಲಾಯಿತು. ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಮರಗಾಲು ಕುಣಿತ, ಗೊರವನ ಕುಣಿತ, ಕೋಲಾಟ, ವೀರಭದ್ರನ ಕುಣಿತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅತ್ಯಂತ ಅದ್ದೂರಿಯಾಗಿ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.