ಅದ್ದೂರಿ ಮರಗಮ್ಮದೇವಿ ಜಾತ್ರೆ

ಶನಿವಾರ, ಜೂಲೈ 20, 2019
28 °C

ಅದ್ದೂರಿ ಮರಗಮ್ಮದೇವಿ ಜಾತ್ರೆ

Published:
Updated:

ಬಾಗಲಕೋಟೆ: ನವನಗರದ ಗವಳಿ ಭವಾನಿ ಯುವಕ ಸಮಾಜದಿಂದ ಮರಗಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.ನವನಗರದ ಹಳೆ ಆರ್.ಟಿ.ಒ. ವೃತ್ತದಿಂದ ಸಕಲ ವಾದ್ಯ,  ಮಹಿಳೆಯರ ಕುಂಭಮೇಳದೊಂದಿಗೆ ದೇವರ ಮೆರವ ಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಸೆಕ್ಟರ್ ನಂ.29ರಲ್ಲಿರುವ ಮರಗಮ್ಮದೇವಿ ದೇವಸ್ಥಾನಕ್ಕೆ ತಲುಪಿತು.ಬಳಿಕ ಗವಳಿ ಸಮಾಜದ ಹಿರಿಯ ಮುಖಂಡರಿಗೆ ಕೆಂಪು ಪೇಟಾ ಧರಿಸಿ ಕೋಲಾಟ ಆಡಿಸಲಾಯಿತು. ಬರಗಾಲದ ಹಿನ್ನಲೆಯಲ್ಲಿ ಮರಗಮ್ಮ ದೇವಸ್ಥಾನದಲ್ಲಿ ಸೇರಿದ ಮಹಿಳೆಯರು ಸಮಾಜದ ಮುಖಂಡರು, ಯುವಕರು ಮಳೆಗಾಗಿ ಪ್ರಾರ್ಥಿಸಿದರು.ಜಾತ್ರಾ ಮಹೋತ್ಸವದದಲ್ಲಿ ಶಾಸಕ ವೀರಣ್ಣ ಚರಂತಿಮಠ,  ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಸಿದ್ದಪ್ಪ ಕಿರ್ಲೋಸ್ಕರ್, ನಾಗೋಜಿ ಲಂಗೋಟೆ, ಬಾಬು ಗಡೆಪ್ಪ, ಮಾರುತಿ ಕಿರ್ಲೋಸ್ಕರ್, ಕಿಸನ್ ಗಡೆಯಪ್ಪ, ಅಂಬಾಜಿ ಕಿರ್ಲೋಸ್ಕರ್, ರಾಮ ಲಂಗೋಟೆ, ರಾಜು ಲಂಗೋಟೆ, ಚಂದ್ರು, ರಾಮ, ವಿಠ್ಠಲ, ರಾಜು ಗಡೆಪ್ಪ (ಗವಳಿ) ಮತ್ತಿತರರು ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry