ಗುರುವಾರ , ಏಪ್ರಿಲ್ 15, 2021
21 °C

ಅದ್ದೂರಿ ಶತಮಾನೋತ್ಸವ ಆಚರಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ತಾಲ್ಲೂಕಿನ ಹಂರರಗಿ ಗ್ರಾಮದ ಸರಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಶತಮಾನೋತ್ಸವವನ್ನು ಅದ್ದೂರಿ ಯಿಂದ ಹಾಗೂ ವಿಶಿಷ್ಟ ರೀತಿಯಿಂತ ಆಚರಿಸಲಾಗುವುದು ಎಂದು ಶತಮಾನೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಐಗಳಿ ಹೇಳಿದರು.ಅವರು ಈ ಕುರಿತು ನಡೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಶಾಲೆಯ ನವೀಕರಣ ಸೇರಿದಂತೆ ವಿವಿಧ ಅವಶ್ಯಕ ಪೀಠೋಪಕರಣ ಗಳನ್ನು ಸಾರ್ವಜನಿಕರ ಸಹಕಾರದಿಂದ ಖರೀದಿಸಲಾಗುವುದು. ಸ್ಮರಣ ಸಂಚಿಕೆ ಹೊರತರಲಾಗುತ್ತದೆ ಎಂದು ತಿಳಿಸಿದರು.ಅಂದಾಜು 5 ಲಕ್ಷ ರೂಪಾಯಿ ಬೇಕಾಗುತ್ತಿದ್ದು ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿ ಗಳು ಹಾಗೂ ಗ್ರಾಮದ ಹಿರಿಯರು ಮುಕ್ತ ಮನಸ್ಸಿನಿಂದ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು,

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ ಮಾತನಾಡಿ ಗ್ರಾಮದ ಜನತೆ ತಾಲ್ಲೂಕಿನಲ್ಲಿ ಒಳ್ಳೆಯ ಹೆಸರನ್ನು ಪಡೆದಿರುವುದು ಸಂತಸದ ಸಂಗತಿ ಎಂದು ಹೇಳಿದರು.ಶತಮಾನೋತ್ಸವ ಆಚರಿಸುವ ಶಾಲೆಗಳಿಗೆ ಸರಕಾರ ವಿಶೇಷ ಅನುದಾನ ನೀಡುವ ನಿಟ್ಟಿನಲ್ಲಿ ಆಲೋಚನೆ ನಡೆಸಿದ್ದು ಹಂಗರಗಿ ಶಾಲೆಗೆ ವಿಶೇಷ ಅನುದಾನ ನೀಡುವಂತೆ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಎಲ್ಲರೂ ಕೂಡಿ ಒತ್ತಾಯಿಸಬೇಕೆಂದು ಹೇಳಿದರು.ಜಿ.ಎಫ್. ಹುಲ್ಲೂರ, ನಾಗನಗೌಡ ಬಿರಾದಾರ, ಶಂಕರಗೌಡ ಬಿರಾದಾರ, ಕೆ.ಪಿ. ಬಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ, ಚನ್ನಬಸವ ಬಿರಾದಾರ, ಸಂಗಪ್ಪ ಕೋಳೂರ ಮೊದಲಾದವರು ಮಾತನಾಡಿದರು.ಸಭೆಯಲ್ಲಿ ಈರಣ್ಣ ಕಲ್ಯಾಣಶೆಟ್ಟಿ, ಚನ್ನಬಸು ಬಶೆಟ್ಟಿ, ಎ.ಎಮ್. ಚಪ್ಪರಬಂದ, ಎಚ್.ಎಸ್. ದಾಸರ, ಎಮ್.ಎಸ್. ಹಳ್ಳಿ, ಮಲಕಪ್ಪ ಹರಿಜನ, ನಾಗು ಅರಳಿಚಂಡಿ, ಸಿ ಸಿ ಮುಕಾರ್ತಿಹಾಳ, ಮಲ್ಲು ಮಸೂತಿ, ಶಾಂತು ಕೋಲಕಾರ, ಮಹಾಂತೇಶ ಬಿರಾದಾರ, ಕೆಂಚನಗೌಡ ಬಿರಾದಾರ, ಯಮನಪ್ಪಗೌಡ ಬಿರಾದಾರ, ಜಿ.ಎಚ್.  ಗುಳಬಾಳ, ರಾಯಪ್ಪ ಅಗಸರ, ಅಪ್ಪಾಸಿ ಬಶೆಟ್ಟಿ,ಅಶೋಕ ಮುಕಾರ್ತಿಹಾಳ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಗೌರವಾದ್ಯಕ್ಷ ಸಿದ್ದಣ್ಣ ಕೋರಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹಾಗೂ ಶಿಕ್ಷಕ ಎಚ್.ಬಿ. ಬಾರಿಕಾಯಿ ಕಾರ್ಯಕ್ರಮ ನಡೆಸಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.