ಸೋಮವಾರ, ಏಪ್ರಿಲ್ 12, 2021
24 °C

ಅಧಿಕಾರಿಗಳ ವಿರುದ್ಧ ಶಾಸಕರು ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: `ಈಗಾಗಲೇ ವಿವಿಧ ಗ್ರಾಮದಲ್ಲಿ ಎರಡು ತಿಂಗಳಿಂದ ನಡೆಸಿದ ಜನಸ್ಪಂದನ ಸಭೆಗಳು ಫಲಪ್ರದವಾಗಿಲ್ಲ. ವಿವಿಧ ಯೋಜನೆಗಳಡಿ ಮಸಾಶನಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಇಲ್ಲಿಯವರೆಗೆ ಮಸಾಶನ ಮಂಜೂರಾಗಿಲ್ಲ.ಆದ್ದರಿಂದ ಇಂಥ ಸಭೆಗಳು ಭೋಗಸ್ ಸಭೆಗಳಾಗುತ್ತಿವೆ. ಇಂಥ ಸಭೆಗೆ ನಾನು ಎಲ್ಲ ಕೆಲಸ ಬಿಟ್ಟು ಕತ್ತೆ ಕಾಯುವುದಕ್ಕೆ ಬರಬೇಕೇನು?~ ಎಂದು ಚಿತ್ತಾಪುರ ಶಾಸಕ ವಾಲ್ಮೀಕ ನಾಯಕ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.ಪಟ್ಟಣದ ಸಮೀಪದ ಬಳವಡಿಗಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, `ವಿವಿಧ ಯೋಜನೆಯಡಿ ತಿಂಗಳ ಮಸಾಶನಕ್ಕಾಗಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು 15 ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದೆ. ಆದರೆ ಈ ಎಲ್ಲ ದಾಖಲಾತಿಗಳನ್ನು  ತೆಗೆದುಕೊಂಡು ಬರುವಷ್ಟರಲ್ಲೇ  ಫಲಾನುಭವಿ ಸತ್ತೆ ಹೋಗುತ್ತಾನೆ. ಆದ್ದರಿಂದ ಅವಶ್ಯಕತೆ ಇರುವ ಪ್ರಮಾಣ ಪತ್ರಗಳನ್ನಷ್ಟೇ ಕಡ್ಡಾಯ ಮಾಡಿ~ ಎಂದು ಶಾಸಕರ ತಹಸೀಲ್ದಾರರಿಗೆ ಸಭೆಯಲ್ಲಿ ಸೂಚನೆ ನೀಡಿದರು.`ಈಗಾಗಲೇ ಸ್ಥಗಿತಗೊಂಡ ವಿವಿಧ ಮಸಾಶನ ಸಲುವಾಗಿ ಬಂದ ಅರ್ಜಿಗಳನ್ನು ಯಾವುದೇ ದಾಖಲಾತಿ ಪಡೆಯದೆ ಸ್ಥಳದಲ್ಲೇ ಮಂಜೂರು ಮಾಡಿ, ಇಲದ್ಲಿದ್ದರೆ ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಮುಂದಿನ ಸಭೆಗೆ ನಾನು ಬರುವದಿಲ್ಲಿ. ನನಗೆ ತೊರಿಕೆ ಸಭೆ ಬೇಕಾಗಿಲ್ಲ~ಎಂದು  ಅವರ ಆಕ್ರೋಶ ವ್ಯಕ್ತಪಡಿಸಿದರು.`ತಾಲ್ಲೂಕಿನಲ್ಲಿ ಬರುವ ನೆಮ್ಮದಿ ಕೇಂದ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಲ್ಲಿ ದಲ್ಲಾಳಿಗಳಿಂದಲೇ ಕೆಲಸ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಇಂಥ ಅಕ್ರಮಕ್ಕೆ ಕಡಿವಾಣ ಹಾಕಲಾಗದಿದ್ದರೆ, ಅಂಥ ಕೇಂದ್ರಗಳನ್ನು ಬಂದ ಮಾಡಿ. ಯಾವುದೇ ಕಾರಣಕ್ಕೆ ಫಲಾನಿಭವಿಗಳಿಗೆ ತೊಂದರೆಯಾಗಬಾರದು~ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ತಾಲ್ಲೂಕಿನಲ್ಲೇ 15 ಸಾವಿರ ಮತದಾರರು, ಮತದಾರರ ಪಟ್ಟಿಯಿಂದ ಹೊರಗಿದ್ದಾರೆ. ಆದ್ದರಿಂದ ಕೂಡಲೇ ಅಂಥವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿಗೆ ಆದೇಶಿಸಿದರು.ಅಂಗನವಾಡಿ ಕಾರ್ಯಕರ್ತೆಯರನ್ನು ಅಂಗನವಾಡಿ ಮೇಲ್ವಿಚಾರಕರು ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳತ್ತಿದ್ದಾರೆ. ಇದರಿಂದ ಅಂಗನವಾಡಿ ಕೇಂದ್ರಗಳು ಮುಚ್ಚಲಾಗಿದೆ. ಆದ್ದರಿಂದ ಕೂಡಲೇ ಇಂಥ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ತಾಲ್ಲೂಕು ಅಧಿಕಾರಿಗೆ ಸಾರ್ವಜನಿಕರು ಸಭೆಯಲ್ಲಿ ಒತ್ತಾಯಿಸಿದ ಘಟನೆಯೂ ನಡೆಯಿತು.ಚಿತ್ತಾಪುರ ತಹಸೀಲ್ದಾರ್ ಬಾಲರಾಜ ದೇವುಖಾದ್ರ, ತಾಲೂಕ್ಲು ಕಾರ್ಯನಿರ್ವಹಕ ಅಧಿಕಾರಿ ಆರ್. ಎಸ್ ಬಿರೆದಾರ್, ಶಹಾಬಾದ ಉಪತಹಸೀಲ್ದಾರ್ ಮಾಣಿಕೆಪ್ಪ ಸಿಂದೆ, ತಾಲೂಕ್ಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಆರ್. ಎಸ್ ರತ್ನಕಾರ್, ಕಂಧಾಯ ನೀರಿಕ್ಷಕರು ಮಹೇಶ, ಗ್ರಾಮ ಲೆಕ್ಕಾಧಿಕಾರಿಯಾದ ಗುರುಮೂರ್ತಿ ಚತ್ರಚಾರ್ಯ ಮಠ, ಮತ್ತು ವೀರಭದ್ರಪ್ಪ ಗೊಡಿಯಾಳ್, ತೋಟಗಾರಿಕೆ ಇಲಾಖೆ ಅಧಿಕಾರಿ ರವಿ, ಮಲಣ್ಲಗೌಡ ಪೊಲೀಸ್ ಪಾಟೀಲ, ದಮಡಯ್ಯಾ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಣಿಕೆಮ್ಮ ಕೊಡಚಿ ಮತ್ತಿತರರು ಜನಸ್ಪಂದನ ಸಭೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.