ಶುಕ್ರವಾರ, ಜೂನ್ 18, 2021
29 °C

ಅಧ್ಯಯನ ಪೀಠಕ್ಕೆ ಬೇಕು ಸಮಾನ ಆದ್ಯತೆ: ಬರಗೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಾಜ್ಯದ ಎಲ್ಲ ವಿಶ್ವ­ವಿದ್ಯಾ­ಲಯ­ಗಳ ಅಧ್ಯಯನ ಪೀಠಗಳಿಗೂ ಸರ್ಕಾರ ಸಮಾನ ಅನುದಾನ ಹಾಗೂ ಸ್ಥಾನಮಾನ ನೀಡಬೇಕು ಎಂದು ಮೈಸೂರು ವಿ.ವಿ ಕುವೆಂಪು ಅಧ್ಯಯನ ಕೇಂದ್ರದ ಬಸವ ಅಧ್ಯ­ಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.­ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.



ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ರಂಗಾ­ಯಣದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ಮತ್ತು ಮೂಢನಂಬಿಕೆಯ ಪ್ರಶ್ನೆ’ ವಿಶೇಷ ಉಪನ್ಯಾಸ ಕಾರ್ಯ­ಕ್ರಮದಲ್ಲಿ ಮಾತನಾಡಿದರು.



ಗಣ್ಯರ ಹೆಸರಿನಲ್ಲಿ ಎಲ್ಲ ವಿಶ್ವ­ವಿದ್ಯಾ­ಲಯಗಳಲ್ಲೂ ಅಧ್ಯಯನ ಪೀಠ­ಗಳಿವೆ. ಆದರೆ, ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಅನು­ಸರಿಸಲಾಗಿದೆ. ಕೆಲವು ಪೀಠಗಳಿಗೆ ₨ 10 ಲಕ್ಷ ನೀಡಿದರೆ, ಬಲಾಢ್ಯರ ಪೀಠಗಳಿಗೆ ಕೋಟಿಗಟ್ಟಲೆ ಅನುದಾನ ದಕ್ಕುತ್ತದೆ. ಅಲ್ಲದೇ, ಅವರ ಹೆಸರಿನಲ್ಲಿ ಹೆಚ್ಚು ಪೀಠಗಳೂ ಸ್ಥಾಪನೆಯಾ­ಗುತ್ತವೆ. ಈ ತಾರ­ತಮ್ಯವನ್ನು ಸರ್ಕಾರ ನಿಲ್ಲಿಸ­ಬೇಕು. ಕಡಿಮೆ ಅನುದಾನದ ಬಡ್ಡಿ­ಯಲ್ಲಿ ಪೀಠವನ್ನು ಮುನ್ನ­ಡೆಸುವುದು ಕಷ್ಟ ಎಂದರು.



ದೇವಸ್ಥಾನಗಳಿಗೆ ಹೋಗಬಾರದು ಎಂದು ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಹೇಳಿಲ್ಲ. ಕಾಯ್ದೆಯಲ್ಲಿ ಪಟ್ಟಿ ಮಾಡಿರುವ ಕೆಲವು ಆಚರ­ಣೆಗಳನ್ನು ಮೌಢ್ಯ ಎಂದು ಪರಿಗಣಿಸಲು ಸಾಧ್ಯ­ವಿಲ್ಲ. ಹೀಗಾಗಿ, ಇದನ್ನು ಕಂದಾ­ಚಾರ ಪ್ರತಿ­ಬಂಧಕ ಕಾಯ್ದೆ ಎಂಬ ಹೆಸರಿನಿಂದ ಕರೆಯು­ವುದು ಸೂಕ್ತ. ಆಗ ಬಹುತೇಕ ಗೊಂದಲಗಳು ನಿವಾರಣೆ­­ಯಾಗುತ್ತವೆ ಎಂದರು. 



ರಂಗಾಯಣದ ನಿರ್ದೇಶಕ ಎಚ್‌. ಜನಾರ್ದನ್‌, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ.ಎನ್‌. ತಳವಾರ

ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.