ರಾಜ್ಯದಲ್ಲಿ ಕೆಲವರು ಶಾಸಕರು ತಮಗೆ ದೊರೆತ ಸ್ಥಾನ ಅಧಿಕಾರ ದುರ್ಬಳಕೆಗೆ ದೊರೆತ ಅವಕಾಶ ಎಂದೇ ಭಾವಿಸಿದಂತಿದೆ. ಎಲ್ಲವೂ ತಮ್ಮ ಮೂಗಿನ ನೇರಕ್ಕೆ ನಡೆಯಬೇಕು ಎಂಬಂತಹ ಭಾವನೆ ಅವರಲ್ಲಿ ಬಲಿಯುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ.

ಈ ಪ್ರವೃತ್ತಿ, ರಾಜ್ಯದ ಸಾಮಾಜಿಕ ಕ್ಲಬ್ಗಳಿಗೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭೆಯ ಸದನ ಸಮಿತಿ ನೀಡಿರುವ ಶಿಫಾರಸುಗಳಲ್ಲಿ ವೇದ್ಯ. ಈ ಸಮಿತಿಯ ವರದಿಯನ್ನು ಕಳೆದ ವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ರಾಜ್ಯದ ಕ್ಲಬ್ಗಳಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಗೌರವ ಸದಸ್ಯತ್ವಕ್ಕೆ ಅವಕಾಶ ಇರಬೇಕು ಎಂಬಂತಹ ವಿವಾದಾತ್ಮಕ ಶಿಫಾರಸನ್ನು ಈ ಸಮಿತಿ ಮಾಡಿದೆ. ಕ್ಲಬ್ಗಳಲ್ಲಿ ವಸ್ತ್ರಸಂಹಿತೆ ಇರಬಾರದು, ಸದಸ್ಯತ್ವ ಶುಲ್ಕ ನಿಗದಿಗೆ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕು ಹಾಗೂ ಈ ಮಾರ್ಗದರ್ಶಿ ಸೂತ್ರಗಳಿಗೆ ಸರ್ಕಾರದ ಅನುಮೋದನೆ ಇರಬೇಕು ಎಂಬುದು ಸಮಿತಿ ಮಾಡಿರುವ ಮತ್ತೊಂದಿಷ್ಟು ಶಿಫಾರಸುಗಳು.

ಈ ಶಿಫಾರಸುಗಳನ್ನು ಯಾರ ಅನುಕೂಲಕ್ಕಾಗಿ ಮಂಡಿಸಲಾಗುತ್ತಿದೆ ಎಂಬುದನ್ನು ಅರಿಯದಷ್ಟು ಜನಸಾಮಾನ್ಯರೇನೂ ಮೂರ್ಖರಲ್ಲ. ಕ್ಲಬ್ಗಳು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆಯೇ ಇಲ್ಲವೇ ಎಂಬುದರ ಉಸ್ತುವಾರಿಗೆ ರಾಜ್ಯಮಟ್ಟದ ಸಮಿತಿ ರಚನೆಯಾಗಬೇಕೆಂಬ ಸಲಹೆಯನ್ನೂ ಈ ಸಮಿತಿ ನೀಡಿದೆ.

ವಾಸ್ತವವಾಗಿ ಈ ಶಿಫಾರಸುಗಳು ಸಂವಿಧಾನದ 14 ಮತ್ತು 19 (ಸಿ) ವಿಧಿಗಳ ಸ್ಪಷ್ಟ ಉಲ್ಲಂಘನೆ. ಈ ರಾಷ್ಟ್ರದ ಜನರಿಗೆ ತಮ್ಮದೇ ಆದ ಸಂಘ ಸಂಸ್ಥೆ ಕಟ್ಟಿಕೊಳ್ಳಲು ಹಾಗೂ ಅವುಗಳಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಇತರ ಜನರ ಹಕ್ಕುಗಳಿಗೆ ಧಕ್ಕೆಯಾಗದಂತೆ ರೂಪಿಸಿಕೊಳ್ಳುವ ಹಕ್ಕಿದೆ. ಎಲ್ಲೋ ಕೆಲವು ಶಾಸಕರಿಗೆ ಬೆಂಗಳೂರಿನ ಕೆಲವು ಕ್ಲಬ್ಗಳು ಸದಸ್ಯತ್ವ ನಿರಾಕರಿಸಿದ ಕಾರಣಕ್ಕೆ ಕ್ಲಬ್ಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸಲು ಮುಂದಾಗುವ ಈ ಕ್ರಮ ಅಸಂಗತ ಮಾತ್ರವಲ್ಲ ಅಕ್ರಮವಾದುದೂ ಹೌದು.

ಬೆರಳೆಣಿಕೆಯ ಕ್ಲಬ್ಗಳನ್ನು ಮಾತ್ರ ತರಾತುರಿಯಲ್ಲಿ ತಪಾಸಣೆ ನಡೆಸಿ ಬೇಕಾಬಿಟ್ಟಿ ಶಿಫಾರಸುಗಳನ್ನು ಮಾಡಿರುವ ಕ್ರಮದ್ಲ್ಲಲೇ ಸ್ವಹಿತದ ದುರುದ್ದೇಶ ಎದ್ದು ಕಾಣಿಸುತ್ತದೆ. ಕ್ಲಬ್ಗಳಿಂದ ಸರ್ಕಾರದ ಜಮೀನು ಒತ್ತುವರಿ ಅಥವಾ ಕಟ್ಟಡ ನಿರ್ಮಾಣ ನಿಯಮಗಳ ಉಲ್ಲಂಘನೆಗಳಾಗಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾದುದು ಅತ್ಯಂತ ಅವಶ್ಯ. ಆದರೆ ಇಂತಹ ಅಕ್ರಮಗಳನ್ನು ನಿವಾರಿಸಲು ಈಗಾಗಲೇ ಕಾನೂನುಗಳು ಇದ್ದೇ ಇವೆ. ಸಾಮಾನ್ಯ ಆಡಳಿತ ವ್ಯವಸ್ಥೆಯಲ್ಲೇ ಈ ವಿಚಾರಗಳು ಪರಿಶೀಲನೆಯಾಗುವ ಪ್ರಕ್ರಿಯೆ ಜಾರಿಯಲ್ಲಿರಬೇಕು.

ಇದು ಖಂಡಿತ ಶಾಸಕರು ನಿರ್ವಹಿಸುವ ಕೆಲಸವಲ್ಲ. ಈ ಅಕ್ರಮಗಳ ತನಿಖೆಗೆ ಸದನ ಸಮಿತಿಯ ರಚನೆಯೂ ಹಣ ಹಾಗೂ ಸಮಯದ ವ್ಯರ್ಥ ಪೋಲು. ಸಿದ್ದರಾಮಯ್ಯನವರ ಸರ್ಕಾರ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಈ ಸಮಿತಿಯ ಶಿಫಾರಸುಗಳ ಅಸಂಗತತೆಯನ್ನು ಗಮನಿಸಿ ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು.

ಶಾಸಕರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕ್ಲಬ್ಗಳಲ್ಲಿ ಉಚಿತ ಸದಸ್ಯತ್ವಕ್ಕಾಗಿ ಹೋರಾಡಲು ಒಳದಾರಿಗಳನ್ನು ಹುಡುಕುವುದಕ್ಕಿಂತ ಜನಸೇವೆಗೆ ತೊಡಗಿಕೊಳ್ಳುವುದು ಶಾಸಕರ ಆದ್ಯತೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.