ಆನಂದರಾವ್ ವತು೯ಲ ಭಾಗ, ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮಿ ಸೇತುವೆಯಡಿ ಸುಮಾರು 20 ಅಡಿ ಅಗಲ ಇರುವ ಜಾಗದ ಎರಡೂ ಭಾಗದ ರಸ್ತೆಗಳ ಮಧ್ಯೆ ಕಂಬಗಳು ಇವೆ. ಆ ಕಂಬಗಳ ಸುತ್ತಲೂ ಅಸಂಬದ್ಧವಾದ ರೀತಿಯಲ್ಲಿ ಜಾಹೀರಾತುಗಳನ್ನು ಅಂಟಿಸಿ ಅಸಹ್ಯಕರ ವಾತಾವರಣವನ್ನುಂಟು ಮಾಡುತ್ತಿದ್ದಾರೆ.

ನಮ್ಮ ಮೆಟ್ರೊ ರೈಲು ಮಾರ್ಗದ ಆಧಾರ ಕಂಬಗಳಿಗೂ ಇದೇ ರೀತಿಯಲ್ಲಿ ಜಾಹೀರಾತುಗಳನ್ನು ಅಸಹ್ಯವಾಗಿ ಅಂಟಿಸಿದ್ದನ್ನು ವಿರೋಧಿಸಿದ ಜನರ ಮನವಿಗೆ ಸ್ಪಂದಿಸಿ, ನಮ್ಮ ಮೆಟ್ರೊ ಅಧಿಕಾರಿಗಳು ಅವನ್ನು ತೆಗೆಸಿಹಾಕಿ ಅಲ್ಲಿ ವಿದ್ಯುತ್ ದೀಪ ಸಹಿತ ಜಾಹೀರಾತು ಫಲಕಗಳನ್ನು ಅಳವಡಿಸಿ ನಗರವನ್ನು ಅಂದವಾಗಿಸುವದರೊಂದಿಗೆ ಸಂಸ್ಥೆಗೆ ಆರ್ಥಿಕವಾಗಿ ಅನುಕೂಲ ಮಾಡಿರುವರು.

ಅದೇ ಪ್ರಕಾರ ಬಿಬಿಎಂಪಿ ಅಧಿಕಾರಿಗಳು, ಅನಧಿಕೃತವಾಗಿರುವ ಜಾಹೀರಾತುಗಳನ್ನು ಆಧಾರ ಕಂಬಗಳಿಂದ ತೆಗೆಸಬೇಕು. ಅಲ್ಲದೆ ಸೇತುವೆಯ ಕೆಳಭಾಗದಲ್ಲಿರುವ ಖಾಲಿ ಜಾಗೆಯನ್ನು ಅವಶ್ಯಕತೆ ಇದ್ದ ಭಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೂ ಅವಕಾಶ ಮಾಡಿಕೊಡುವ ಮೂಲಕ ಜಾಗೃತ ಎರಡೂ ಬದಿಯ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.