ಬುಧವಾರ, 17 ಡಿಸೆಂಬರ್ 2025
×
ADVERTISEMENT
ADVERTISEMENT

45 Movie: ಚೆಲುವೆಯ ನೋಟ ಚೆನ್ನ... ನಾಚಿ ನೀರಾದ ಶಿವಣ್ಣ

Published : 16 ಡಿಸೆಂಬರ್ 2025, 23:48 IST
Last Updated : 16 ಡಿಸೆಂಬರ್ 2025, 23:48 IST
ಫಾಲೋ ಮಾಡಿ
Comments
ಎಲ್ಲಾ ನಿರ್ಮಾಪಕರು ಹಣ ಹಾಕಿ ಸಿನಿಮಾ ಮಾಡಿದರೆ, ರಮೇಶ್‌ ರೆಡ್ಡಿ ಅವರು ಈ ಸಿನಿಮಾಗೆ ಹಣ ಸುರಿದಿದ್ದಾರೆ. ಗ್ರಾಫಿಕ್ಸ್‌, ಮೇಕಿಂಗ್‌ ಅದ್ಭುತವಾಗಿದೆ. ಕನ್ನಡ ಸಿನಿಮಾ ಉಳಿಯಬೇಕು ಎಂದರೆ ಇಂತಹ ನಿರ್ಮಾಪಕರು ಇರಬೇಕು. ಶಿವಣ್ಣನ ಸ್ನೇಹವನ್ನು ಉಳಿಸಿಕೊಂಡಿದ್ದೇನೆ ಎನ್ನುವುದೇ ಹೆಮ್ಮೆ. ರಾಜ್‌ ಬಿ.ಶೆಟ್ಟಿ ಇವತ್ತು ನಮ್ಮ ಚಿತ್ರರಂಗದ ಮೋಸ್ಟ್‌ ವಾಂಟೆಂಡ್‌ ಹೀರೋ. ಶಿವಣ್ಣ–ಸುಧಾರಾಣಿ ಜೋಡಿಯ ಕ್ರೇಜ್‌ ಜೋರಿತ್ತು. ಸುಧಾರಾಣಿಯವರಂಥ ಹುಡುಗಿ ಹುಡುಕುತ್ತಿದ್ದೆವು.  
–ಉಪೇಂದ್ರ, ನಟ
ಈ ಸಿನಿಮಾ ಸೆಟ್‌ಗೆ ಇಳಿಯುವ ಮುನ್ನವೇ ಆ್ಯನಿಮೇಷನ್‌ನಲ್ಲಿ ಇಡೀ ಸಿನಿಮಾ ನೋಡಿದ್ದೆವು. ‘45’ ಬಿಡುಗಡೆಯಾದ ಬಳಿಕ ಅರ್ಜುನ್‌ ಜನ್ಯ ಬೇರೆ ಹಂತಕ್ಕೇ ತಲುಪಲಿದ್ದಾರೆ. ‘ಚೆಲುವೆಯ..’ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಅದರ ಗುಟ್ಟು ಬಿಟ್ಟುಕೊಡುವುದಿಲ್ಲ. ಸಿನಿಮಾದಲ್ಲೇ ನೋಡಿ. 
–ಶಿವರಾಜ್‌ಕುಮಾರ್‌, ನಟ 
₹1,000 ನೀಡಿದ ರಾಜ್‌
ನಟ ರಾಜ್‌ ಬಿ.ಶೆಟ್ಟಿ ತಮ್ಮ ನಿರ್ಮಾಣದ ‘ಸು ಫ್ರಮ್‌ ಸೋ’ ಸಿನಿಮಾದ ಗಳಿಕೆಯ ಮೊದಲ ಎರಡು ₹500ರ ನೋಟನ್ನು ನಿರ್ದೇಶಕ ಅರ್ಜುನ್‌ ಜನ್ಯ ಹಾಗೂ ನಿರ್ಮಾಪಕ ರಮೇಶ್‌ ರೆಡ್ಡಿ ಅವರಿಗೆ ನೀಡಿ ‘45’ ಸಿನಿಮಾ ಗಳಿಕೆಯಲ್ಲಿ ದಾಖಲೆ ಬರೆಯಲಿ ಎಂದು ಶುಭಕೋರಿದರು.
ಕನ್ನಡ ಸಿನಿಮಾಗಳು ಗಡಿ ದಾಟಿ ಹೋಗಲ್ಲ ಎನ್ನುವ ಕೊರಗು ಇದೆ. ಪರಭಾಷಾ ಸಿನಿಮಾಗಳ ಹಾವಳಿ ಎನ್ನುತ್ತಲೇ ಇರುತ್ತೇವೆ. ನಾವೂ ಕೂಡಾ ಒಳ್ಳೆಯ ಸಿನಿಮಾಗಳನ್ನು ಮಾಡಿ ಹಾವಳಿ ಕೊಡುವವರಾಗಬೇಕು. ‘45’ ಸಿನಿಮಾ ಇಂತಹ ಸಿನಿಮಾ ಆಗಲಿದೆ ಎನ್ನುವ ಭರವಸೆ ಇದೆ. ಕನ್ನಡದ ಪ್ರೇಕ್ಷಕರು ಹೊಸತನಕ್ಕೆ ಹಪಹಪಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾಗೊಂದು ಅವಕಾಶ ಕೊಡಿ. ಈ ಸಿನಿಮಾದಲ್ಲಿ ನಾನು ವಿದ್ಯಾರ್ಥಿಯಾಗಿದ್ದೆ. ನಾನು ಶಿವಣ್ಣ–ಉಪೇಂದ್ರ ಅವರ ಸಿನಿಮಾ, ಪೋಸ್ಟರ್‌ ನೋಡಿಕೊಂಡು ಇಲ್ಲಿಗೆ ಬಂದವನು, ಇಂದು ಅವರ ಜೊತೆ ತೆರೆಹಂಚಿಕೊಂಡಿದ್ದೇನೆ.  
–ರಾಜ್‌ ಬಿ.ಶೆಟ್ಟಿ, ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT