ಶುಕ್ರವಾರ, ಜೂನ್ 25, 2021
29 °C

ಅನಧಿಕೃತ ಪಾರ್ಕಿಂಗ್: ಲಂಚದಲ್ಲಿ ಬೆಂಗಳೂರು ಮೊದಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾನೂನುಬಾಹಿರವಾಗಿ ಪಾರ್ಕಿಂಗ್ ಮಾಡಿ ದಂಡದಿಂದ ತಪ್ಪಿಸಿಕೊಳ್ಳಲು ಲಂಚ ನೀಡುವ ವಾಹನ ಚಾಲಕರಲ್ಲಿ ಬೆಂಗಳೂರು ಭಾರತದಲ್ಲೇ ಮುಂಚೂಣಿ ಸ್ಥಾನ ಪಡೆದಿದೆ.ಈ ಅಂಕಿ ಅಂಶಗಳನ್ನು ಐ ಪೇಡ್ ಬ್ರೈಬ್ ಡಾಟ್ ಕಾಮ್‌ನ ಫಲಿತಾಂಶ ಬಹಿರಂಗಪಡಿಸಿದೆ. ಸ್ವಯಂ ಸೇವಾ ಸಂಸ್ಥೆಯಾದ ಜನಾಗ್ರಹ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಲುವಾಗಿ ವೆಬ್‌ಸೈಟ್ ಮೂಲಕ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಸಿದ ನಡೆಸಿದ ಸಮೀಕ್ಷೆಯಿಂದ ಇದು ಬಹಿರಂಗವಾಗಿದೆ.ಸಂಚಾರಿ ನಿಯಮ ಉಲ್ಲಂಘನೆಗಳು: ಬೆಂಗಳೂರಿಗರು ಸರಾಸರಿಯಾಗಿ 378 ರೂ. ಲಂಚವನ್ನು ನೀಡುತ್ತಿದ್ದಾರೆ ಎನ್ನುವ ಅಂಶ 96 ಜನರ ಪ್ರತಿಕ್ರಿಯೆಯಿಂದ ಸ್ಪಷ್ಟವಾಗಿದೆ. ನಂತರದ ಸ್ಥಾನ ದೆಹಲಿ (ರೂ. 350), ಮುಂಬೈ (ರೂ. 320), ಪುಣೆ (ರೂ. 227), ಹೈದ್ರಾಬಾದ್ (ರೂ. 250) ಮತ್ತು ಚೆನ್ನೈ(ರೂ. 214)ಗಳಿಗೆ ಲಭಿಸುತ್ತದೆ. ಸಿಗ್ನಲ್ ಜಂಪಿಂಗ್ ಪ್ರಕರಣಗಳಲ್ಲಿ ದೆಹಲಿ ಅಗ್ರಸ್ಥಾನ ಹೊಂದಿದ್ದು ಸರಾಸರಿ 333 ರೂ. ಲಂಚವನ್ನು ಅಲ್ಲಿಯ ಚಾಲಕರು ನೀಡಿದ್ದರೆ. ಬೆಂಗಳೂರಿಗರು ಈ ಪ್ರಕರಣಗಳಲ್ಲಿ ರೂ. 318 ಲಂಚ ನೀಡಿದ್ದಾರೆ.ಬೆಂಗಳೂರಿಗರು ಪಾಸ್‌ಪೋರ್ಟ್ ಪಡೆಯುವಲ್ಲಿ ಅತ್ಯಂತ ಕಡಿಮೆ ಲಂಚ ನೀಡಿದ್ದಾರೆ. ನವದೆಹಲಿಯ ಜನರು ಸಂಚಾರ ಸಂಬಂಧಿ ವೆಚ್ಚವಾಗಿ ಸರಾಸರಿ ರೂ. 1,452 ವೆಚ್ಚ ಮಾಡುತ್ತಿದ್ದರೆ, ಬೆಂಗಳೂರಿಗರು ಅದರ ಮೂರನೇ ಒಂದರಷ್ಟು ಭಾಗವೆಂದರೆ 430 ರೂ., ಹೈದ್ರಾಬಾದ್ ಜನರು 836 ರೂ., ಮುಂಬೈ ಜನರು 570 ರೂ., ಚೆನ್ನೈ ಜನರು 508 ರೂ., ಪುಣೆ ವಾಸಿಗಳು 500 ರೂ. ವೆಚ್ಚ ಮಾಡುತ್ತಿದ್ದಾರೆ.ವಿವಿಧ ಲಂಚ ನೀಡಿದ ವಿಭಾಗ: ನೂತನ ಆಸ್ತಿಯ ನೋಂದಣಿಯಲ್ಲಿ ಹೈದರಾಬಾದ್ 1,59,476 ರೂ., ಚೆನ್ನೈನಲ್ಲಿ ಕಸ್ಟಮ್ಸ ಕ್ಲಿಯರೆನ್ಸ್‌ಗೆ 74,644 ರೂ. (ಬೆಂಗಳೂರು 15,403 ರೂ.), ಆದಾಯ ತೆರಿಗೆ ಸಂಬಂಧಿ ಅಪರಾಧಗಳಲ್ಲಿ ಚೆನ್ನೈ 1,70,166 ರೂ. (ಬೆಂಗಳೂರು -11,816) ವೆಚ್ಚ ಮಾಡಿ ಅಗ್ರಸ್ಥಾನ ಗಳಿಸಿದರೆ, ಮದ್ಯ ಸೇವನೆ ಮಾಡಿ ಸಿಕ್ಕಿಕೊಂಡರೆ ದಂಡ ತಪ್ಪಿಸಿಕೊಳ್ಳುವಲ್ಲಿ ಪುಣೆ ಅಗ್ರಸ್ಥಾನ ಹೊಂದಿದೆ. ಇಲ್ಲಿನ ಜನರು ಅದಕ್ಕಾಗಿ ಸರಾಸರಿ ರೂ. 1,900 ವೆಚ್ಚ ಮಾಡಿದ್ದಾರೆ. (ಬೆಂಗಳೂರು 950 ರೂ.).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.