ಶನಿವಾರ, ಮೇ 28, 2022
28 °C

ಅನಪೇಕ್ಷಿತ ಕರೆ: ಗಡುವು ಮುಂದಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅನಪೇಕ್ಷಿತ ಕರೆನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತೀಯ ದೂರಸಂಪರ್ಕ  ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮೊಬೈಲ್ ಸೇವಾ ಸಂಸ್ಥೆಗಳಿಗೆ ನೀಡಿದ್ದ ನಾಲ್ಕನೆಯ  ಗಡುವು  ಕೂಡ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ಟೆಲಿಮಾರುಕಟ್ಟೆ ವಾಣಿಜ್ಯ ಕರೆಗಳ ನಿಯಂತ್ರಣಕ್ಕೆ, ಮಾರ್ಚ್ 21 ಅಂತಿಮ ಗಡುವು ಎಂದು ನಿಗದಿಪಡಿಸಲಾಗಿತ್ತು.ಆದರೆ, ಸ್ಥಿರ ದೂರವಾಣಿ ವಾಣಿಜ್ಯ ಕರೆಗಳನ್ನು ಗುರುತಿಸಲು ಪ್ರತ್ಯೇಕ ಸಂಖ್ಯಾ ಸರಣಿಯನ್ನು ದೂರಸಂಪರ್ಕ ಇಲಾಖೆ ಇನ್ನೂ ಅಂತಿಮಗೊಳಿಸಿಲ್ಲ. ಇದನ್ನು ಅಂತಿಮಗೊಳಿಸದ ಹೊರತು ಮೊಬೈಲ್ ಸೇವಾ ಸಂಸ್ಥೆಗಳಿಗೆ ಅನಪೇಕ್ಷಿತ ಕರೆ ನಿಷೇಧ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ‘ಟ್ರಾಯ್’ ಅಧ್ಯಕ್ಷ ಜೆ.ಎಸ್ ಶರ್ಮಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.