ಗುರುವಾರ , ಮೇ 6, 2021
27 °C

ಅನಭಿಜ್ಞ ಶಾಕುಂತಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಸಂಗ ತಂಡದಿಂದ ಶುಕ್ರವಾರ (ಏ.27) ಕೆ.ವೈ.ನಾರಾಯಣಸ್ವಾಮಿ ಅವರ `ಅನಭಿಜ್ಞ ಶಾಕುಂತಲ~ ಹೊಸ ನಾಟಕ ಪ್ರದರ್ಶನ. ಪ್ರಕಾಶ್ ಪಿ. ಶೆಟ್ಟಿ ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ನಿರ್ವಹಣೆ: ಶಶಿಧರ್ ಭಾರೀಘಾಟ್.ಪ್ರಸಂಗ: ಪ್ರಸಂಗ ಹಲವು ಹೊಸ ಆಲೋಚನೆಗಳನ್ನು ಹೊತ್ತು ವೇದಿಕೆಗೆ ಬರಲು ಸಿದ್ಧಗೊಳ್ಳುತ್ತಿರುವ ತಂಡ. ಇದು ನಾಟಕ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಜಗತ್ತಿನ ವೈವಿಧ್ಯಮಯ ಪ್ರಸಂಗಗಳಿಂದ ಜನತೆ ಮುಂದೆ ಅನಾವರಣಗೊಳ್ಳುವುದು ಇದರ ಮೂಲ ಉದ್ದೇಶ. ಕಲೆಯ ಬಗ್ಗೆ ಅಪಾರ ಕಾಳಜಿ, ಭಿನ್ನವಾಗಿ ಯೋಚಿಸುವ ಗೆಳೆಯರ ಬಳಗವೇ ಈ ತಂಡ.ಇಲ್ಲಿ ಕಲಾವಿದರು, ನಟರು, ಗಾಯಕರು, ಸಾಹಿತಿಗಳು ತಂಡಕ್ಕೆ ಸ್ಫೂರ್ತಿಯ ಸೆಲೆಯಾಗಿ ತೊಡಗಿಕೊಂಡಿದ್ದಾರೆ.`ಅನಭಿಜ್ಞ ಶಾಕುಂತಲದ ಮೂಲಕ ಪ್ರಸಂಗ ತಂಡವು ನಿಮ್ಮ ಮುಂದೆ ಬರುತ್ತಿದೆ. ನಿರ್ದೇಶಕ ಪ್ರಕಾಶ್.ಪಿ ಶೆಟ್ಟಿ ಅವರೊಂದಿಗೆ ನಾರಾಯಣ ರಾಯಚೂರು, ಎನ್. ಮಂಗಳಾ, ಬಿ. ವಿಠ್ಠಲ್ (ಅಪ್ಪಯ್ಯ), ನಂದಕಿಶೋರ್, ಪ್ರವೀಣ್‌ಕುಮಾರ್, ರಾಧಾಕೃಷ್ಣ ಉರಾಳ, ಗೀತಾ ಸುರತ್ಕಲ್, ಬಿ.ಜಿ. ರಾಮಕೃಷ್ಣ, ಚಂಪಾಶೆಟ್ಟಿ, ವೇಣು ನೆಪೋಲಿಯನ್, ರಾಜ್‌ಕುಮಾರ್ ಮುಂತಾದ ಪ್ರತಿಭಾನ್ವಿತರು ತಂಡಕ್ಕೆ ಹೆಗಲು ಕೊಟ್ಟಿದ್ದಾರೆ.ನಾಟಕ ಕುರಿತು: `ಅನಭಿಜ್ಞ ಶಾಕುಂತಲ~ ಭಾರತದ ದೇಸಿಜ್ಞಾನ ಪರಂಪರೆಗಳು ನಿರಂತರವಾಗಿ ನಂಬಿಕೊಂಡು ಬಂದಿರುವ ನೆನಪಿನ ಕಥನದ ದೃಶ್ಯರೂಪಕ. ಭಾರತೀಯ ಎನ್ನುವ ಮರೆವಿನ ಚಿಂತನೆಗಳು ನಿರೂಪಿಸುತ್ತಿರುವ ಪುರುಷ ವಿಸ್ಮೃತಿಗಳ ಹುಸಿತನವನ್ನು ಈ ನಾಟಕ ಬಯಲುಗೊಳಿಸಲು ಪ್ರಯತ್ನಿಸುತ್ತದೆ.ಸಂಜೆ 6.30ಕ್ಕೆ ಪ್ರಸಂಗ ತಂಡದ ಉದ್ಘಾಟನೆ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಮಾಹಿತಿ ಹಾಗೂ ಟಿಕೆಟ್‌ಗಳಿಗೆ: 98457 70196, 98865 43697 ್ಢ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.