ಗುತ್ತಲ: `ರೊಕ್ಕ ಖರ್ಚು ಮಾಡಿ ಬೆಳೆದ ಪೀಕು ಮಳಿ ಇಲ್ಲದಕ್ಕ ಒಣಗಿ ಕೈಯಿಗೆ ಬಂದ ತುತ್ತು ಬಾಯಿಗೆ ಬರ ದಂಗ ಆಗಾಕ ಹತೈತ್ತಿ~ ಮುಂದ........! ಹೌದು ಇದು ಮಳೆ ಇಲ್ಲದೆ ಕಂಗಾ ಲಾಗಿರುವ ಗುತ್ತಲ ಹೋಬಳಿಯ ಪ್ರತಿಯೊಬ್ಬ ರೈತರ ಮುಂದಿರುವ ಪ್ರಶ್ನೆ ಇದು.

ಗೊಬ್ಬರ ಬೀಜಕ್ಕಾಗಿ ಸಾವಿ ರಾರು ರೂಪಾಯಿ ಹಣ ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು ಮಳೆ ಬಾರದೆ ಕೈ ಕೈ ಹಿಚುಕಿಕೊಳ್ಳುವಂತಾಗಿದೆ. ನೀರಾವರಿ ಆಧಾರಿತ ಕೃಷಿ ಹೆಚ್ಚಾ ಗಿದ್ದರೂ ವಿದ್ಯುತ್ನ ಕಣ್ಣಾ ಮುಚ್ಚಾಲೆ ಹಾಗೂ ಮಳೆಯ ಆಟದಿಂದಾಗಿ ರೈತರ ಲೆಕ್ಕಾಚಾರಗಳು ತಲೆ ಕೆಳಗಾಗಿವೆ.

ಮಳೆ ಹಾಗೂ ನದಿ ನೀರಾವರಿ ಯನ್ನು ನೆಚ್ಚಿಕೊಂಡ ಈ ಭಾಗದ ರೈತರು 16000 ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆ ಜೋಳ. 600 ಹೆಕ್ಟರ್ನಲ್ಲಿ ಹೈಬ್ರೀಡ್ ಜೋಳ, 350 ಹೆಕ್ಟರ್ನಲ್ಲಿ ಕಬ್ಬು, 500 ಹೆಕ್ಟರ್ನಲ್ಲಿ ಶೇಂಗಾ, 2000 ಹೆಕ್ಟರ್ನಲ್ಲಿ ಹತ್ತಿ ಸೇರಿದಂತೆ ಹಲವು ವಾಣಿಜ್ಯ ಬೆಳೆಗಳನ್ನು ಬೆಳೆ ದಿದ್ದಾರೆ.

ಮೆಕ್ಕೆ ಜೋಳ ಹಾಗೂ ಹತ್ತಿ ಈಗಾಗಲೇ ಮೂರು ತಿಂಗಳ ಬೆಳೆ ಇದ್ದು, ಇದು ಬೆಳೆಗಳು ಇಳುವರಿ ಹೆಚ್ಚಿಸಿಕೊಳ್ಳುವ ಹಂತವಾಗಿದೆ. ಈ ಹಂತದಲ್ಲಿ ಬೆಳೆಗಳಿಗೆ ಮಳೆಯ ಅವಶ್ಯಕತೆ ಹೆಚ್ಚಾಗಿದ್ದು, ಮಳೆ ಇಲ್ಲದೆ ರೈತರು ಪರಿತಪಿಸುವಂತಾಗಿದೆ.

ಹಾವೇರಿ ತಾಲ್ಲೂಕಿನಾದ್ಯಾಂತ ಆಗಸ್ಟ್ ತಿಂಗಳಲ್ಲಿ 94 ಮಿ.ಮಿ ಮಳೆ ಯಾಗಬೇಕಿತ್ತು. ಆದರೆ 118 ಮಿ.ಮಿ ಮಳೆಯಾಗಿದ್ದು, ವಾಡಿಕೆಗಿಂದ 24 ಮಿ.ಮಿ ಮಳೆಯಾಗಿದೆ. ಅಲ್ಲದೆ ಸೆಪ್ಟೆಂಬರ್ ತಿಂಗಳು 105 ಮಿ.ಮಿ ಮಳೆಯಾಗಬೇಕು. ಈಗಾಗಲೇ 46 ಮಿ.ಮಿ ಮಳೆಯಾಗಿದೆ.

ಆದರೆ ಹಾವೇರಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ ಗುತ್ತಲ ಹೋಬಳಿ ರೈತರಿಗೆ ಮಳೆ ಮರೀಚಿಕೆಯಾಗಿದೆ. ಇನ್ನೂ ನೀರಾವರಿ ಸೌಲಭ್ಯ ಹೊಂದಿದ ರೈತರಿಗೂ ಮಳೆಯ ಬಿಸಿ ತಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿನ ಕೃಷಿ ಪಂಪ್ಸೆಟ್ಗಳಿಗೆ ಪ್ರತಿ ದಿನ ಕೇವಲ 3-4 ಗಂಟೆಗಳ ಕಾಲ ವಿದ್ಯುತ್ ಪೂರೈ ಸಲಾಗುತ್ತಿದ್ದು, ಬೆಳೆಗಳಿಗೆ ನೀರುಣಿ ಸಲು ಸಾಧ್ಯವಾಗದೆ ರೈತರು ಪರ ದಾಡುವಂತಾಗಿದೆ.
ಇದರಿಂದಾಗಿ ಕೇವಲ ಮಳೆಯಾಶ್ರಿತ ಬೆಳೆಗಳು ಅಷ್ಟೇ ಅಲ್ಲದೆ ನೀರಾವರಿ ಸಂಪರ್ಕ ಹೊಂದಿದ ಬೆಳೆಗಳೂ ಸಹ ಸಂಕಷ್ಟಕ್ಕೆ ಸಿಲುಕಿವೆ. ಮಳೆ ಇಲ್ಲದೆ ರೈತರ ಬೆಳೆಗಳು ಒಣಗುತ್ತಿದ್ದು, ಸದ್ಯ ಮಳೆಯಾದರೂ ಬೆಳೆ ಸುಧಾರಿಸುವ ಭರವಸೆ ಇಲ್ಲ ಎನ್ನು ತ್ತಾರೆ ಕೃಷಿ ಅಧಿಕಾರಿ ಬಿ.ಕೆ.ಕುಲಕರ್ಣಿ.

ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರ ಕೃಷಿ ಪಂಪಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸು ವಲ್ಲಿ ಮುಂದಾಗಬೇಕು ಎಂದು ಗುತ್ತಲ ಗ್ರಾಮದ ಮುರುಗೇಶಪ್ಪ ಯಳಮಲ್ಲಿ ಆಗ್ರಹಿಸುತ್ತಾರೆ.

ಅಧಿಕಾರಿಗಳು ಕಚೇರಿ ಯಲ್ಲಿ ಕುಳಿತು ಮಳೆಯ ವರದಿ ತಯಾ ರಿಸಿದ್ದು, ಅಧಿ ಕಾರಿಗಳು ವರದಿಯಲ್ಲಿ ಹೇಳುವಷ್ಟು ಮಳೆ ಈ ಭಾಗದಲ್ಲಿ ಆಗಿಲ್ಲ. ಆದ್ದರಿಂದ ಈ ಭಾಗವನ್ನು ಬರ ಪೀಡಿತ ಪ್ರದೇಶ ವೆಂದು ಘೋಷಿಸ ಬೇಕು ಎಂದು ಕೊರಡೂರು ಗ್ರಾಮದ ರೈತ ಸಂಗಣ್ಣ ಅರಳಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.