ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಡುಗೆ ಅನಿಲ ಸಾಗಿಸುವ ಬುಲೆಟ್ ಟ್ಯಾಂಕರ್ಗಳು ನಗರದಲ್ಲಿ ಕಳೆದ ಮೂರು ದಿನಗಳಿಂದ ಮುಷ್ಕರ ಹೂಡಿವೆ.

ವಾಹನಗಳ ಬಾಡಿಗೆ ಜಾಸ್ತಿ ಮಾಡಬೇಕು ಹಾಗೂ ಹಳೆಯ ವಾಹನಗಳನ್ನು ಬದಲಿಸಿ ಹೊಸ ವಾಹನಗಳನ್ನು ನೀಡಬೇಕು ಎಂದು ಆಗ್ರಹಿಸಿ ವಾಹನ ಮಾಲೀಕರ ಸಂಘದಿಂದ ಮುಷ್ಕರ ನಡೆಯುತ್ತಿದೆ. ರಾಜ್ಯಕ್ಕೆ ಅಡುಗೆ ಅನಿಲ ಪೂರೈಕೆ ಆಗುತ್ತಿರುವುದು ನಗರದಿಂದ. ಎಚ್ಪಿಸಿಎಲ್, ಬಿಪಿಸಿಎಲ್ ಹಾಗೂ ಐಒಸಿಎಲ್ ಆಡಳಿತ ಮಂಡಳಿ ವಿರುದ್ಧ 500ಕ್ಕೂ ಅಧಿಕ ಬುಲೆಟ್ ಟ್ಯಾಂಕರ್ಗಳು ಪ್ರತಿಭಟನೆ ನಡೆಸುತ್ತಿವೆ.

ಮುಂಬೈ, ಚೆನ್ನೈಯಲ್ಲಿ ಮಾತುಕತೆ ನಡೆಯಬೇಕಿದ್ದು, ಸಂಕ್ರಾಂತಿ ಹಿನ್ನೆಲೆಯಲ್ಲಿ ಪ್ರಮುಖರು ಊರಿಗೆ ತೆರಳಿದ್ದಾರೆ. ಹಾಗಾಗಿ ಮಾತುಕತೆ ವಿಳಂಬವಾಗಿದೆ ಎಂದು ವಾಹನ ಮಾಲೀಕರ ಸಂಘದ ಪದಾಧಿಕಾರಿ ಭಾನುವಾರ ರಾತ್ರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.