ಬೆಳಗಾವಿ: ನಗರದಲ್ಲಿ ಒಂದು ವಾರದೊಳಗೆ ಎಲ್ಲ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಂಗೊಳಿಸದೇ ಇದ್ದರೆ, ಅನ್ಯ ಭಾಷೆಯ ನಾಮಫಲಕಗಳಿಗೆ ಮಸಿ ಬಳಿದು ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.

ಚನ್ನಮ್ಮ ವೃತ್ತದಿಂದ ಸೋಮವಾರ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅವರಿಗೆ ಮನವಿ ಸಲ್ಲಿಸಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ, ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ಹಾಗೂ ವಿಶ್ವಕನ್ನಡ ಸಮ್ಮೇಳನ ನಡೆಸುವ ಮೂಲಕ ಎರಡನೇ ರಾಜಧಾನಿಯ ಪಟ್ಟವನ್ನು ನೀಡುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಳವಡಿಸುತ್ತಿರುವ ನಾಮಫಲಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿದೆ.

ಬೆಳಗಾವಿ ನಗರ ಹಾಗೂ ಹೊರವಲಯಗಳಲ್ಲಿ ಅಳವಡಿಸುತ್ತಿರುವ ಜಾಹಿರಾತು, ಶಾಲಾ- ಕಾಲೇಜು, ಸಂಘ-ಸಂಸ್ಥೆಗಳು ನಡೆಸುತ್ತಿರುವ ಕಾರ್ಯಕ್ರಮಗಳಲ್ಲಿ ಹಾಗೂ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಬಳಸುವುದನ್ನೇ ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಮೇಲೆ ಅಳವಡಿಸುವ ಎಲ್ಲ ನಾಮಫಲಕಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಅನ್ಯ ಭಾಷೆಯ ಜೊತೆಗೆ ಶೇ. 75ರಷ್ಟನ್ನು ಕನ್ನಡ ಬಳಸಬೇಕು ಎಂದು ಆದೇಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಕಾಟಾಚಾರಕ್ಕೆ ಎಂಬಂತೆ ನಾಮಫಲಕಗಳಲ್ಲಿ ಸಣ್ಣದಾಗಿ ಕನ್ನಡವನ್ನು ಬಳಸಲಾಗುತ್ತಿದೆ. ಇದರಿಂದಾಗಿ ಕನ್ನಡ ಭಾಷೆಗೆ ಪ್ರಾಶಸ್ತ್ಯ ಸಿಗುತ್ತಿಲ್ಲ. ಹೀಗಾಗಿ ಒಂದು ವಾರದೊಳಗೆ ಎಲ್ಲ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಂಗೊಳಿಸಬೇಕು. ಇಲ್ಲದಿದ್ದರೆ, ಕನ್ನಡೇತರ ಭಾಷೆಗಳ ನಾಮಫಲಕಗಳಿಗೆ ಕರವೇ ಕಾರ್ಯಕರ್ತರು ಮಸಿ ಬಳಿದು ಪ್ರತಿಭಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅನಾಹುತ ನಡೆದರೆ ಜಿಲ್ಲಾಡಳಿತವೇ ಜವಾಬ್ದಾರಿ ಎಂದು ಮಹಾದೇವ ತಳವಾರ ಎಚ್ಚರಿಸಿದರು.

ರ್ಯಾಲಿಗೆ ಅವಕಾಶ ಬೇಡ:
ಸುವರ್ಣ ಸೌಧ ನಿರ್ಮಿಸಿರುವುದರ ಜೊತೆಗೆ ಇದೀಗ ಬೆಳಗಾಮ್ ಹೆಸರನ್ನು ಬೆಳಗಾವಿ ಎಂದು ನಾಮಕರಣ ಮಾಡಲು ಸರ್ಕಾರ ಮುಂದಾಗುತ್ತಿರುವುದು ಗಡಿಭಾಗದ ಕನ್ನಡಿಗರ ಕನಸು ನನಸಾಗುವ ಲಕ್ಷಣಗಳು ಕಂಡು ಬರುತ್ತಿವೆ. ಆದರೆ, ಕನ್ನಡ ವಿರೋಧಿ ಸಂಘಟನೆಗಳು ಬೆಳಗಾವಿ ಹೆಸರನ್ನು ಇಡಬಾರದು ಎಂದು ಒತ್ತಾಯಿಸಿ ಮಾರ್ಚ್ 26ರಂದು ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.

ಜಿಲ್ಲಾಡಳಿತವು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ತಳವಾರ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗಣೇಶ ರೋಕಡೆ, ಬಾಳು ಜಡಗಿ, ರಾಜು ನಾಶಿಪುಡಿ, ರಮೇಶ ತಳವಾರ, ಸುರೇಶ ಗೌವನ್ನವರ, ಟಿ. ಶಾಂತಮ್ಮ, ಶಾಂತಾ ಹನಬರ, ಬಸವರಾಜ ಅವರೊಳ್ಳಿ, ಬಸವರಾಜ ಕಲಾರಕೊಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.