ಗುರುವಾರ , ಏಪ್ರಿಲ್ 22, 2021
28 °C

ಅಪರಾಧ ನಿಯಂತ್ರಣ ಸಮಿತಿ ರಚನೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ/ ಎಂ.ರವಿ Updated:

ಅಕ್ಷರ ಗಾತ್ರ : | |

ಮೈಸೂರು: ನಗರದಲ್ಲಿ ದಿನೇ ದಿನೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಅವುಗ ಳನ್ನು ಬಯಲಿಗೆ ಎಳೆಯಲು ಪೊಲೀಸರಿಗೆ ಸಾರ್ವ ಜನಿಕರಿಗೆ ಸಹಕಾರ ಅಗತ್ಯ. ಹಾಗಾಗಿ ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ತಂದು ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸ್ ಇಲಾಖೆ  ನಾಗರಿಕರನ್ನು ಒಳಗೊಂಡ ಅಪರಾಧ ನಿಯಂತ್ರಣ ಸಮಿತಿಯೊಂದನ್ನು ರಚಿಸಲು ಚಿಂತನೆ ನಡೆಸಿದೆ.ಅಪರಾಧ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಾಗ ಸಾರ್ವಜನಿಕರು ಸಾಕಷ್ಟು ಮಾಹಿತಿ ಯನ್ನು ಒದಗಿಸುತ್ತಾರೆ. ಸಾರ್ವಜನಿಕರ ಸಹಕಾರ ಇಲ್ಲದೆ ಯಾವುದೇ ಪ್ರಕರಣವನ್ನು ಬಯಲಿಗೆ ಎಳೆಯುವುದು ಪೊಲೀಸರಿಗೆ ಕಷ್ಟ.ಅಪರಾಧ ಪ್ರಕರಣಗಳು ನಡೆಯುವ ಮುನ್ಸೂಚನೆ ದೊರೆತ ಕೂಡಲೇ ಪೊಲೀಸರಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರೆ ಮುಂದಾಗುವ ಅನಾಹುತವನ್ನು ತಪ್ಪಿಸ ಬಹುದು. ಇಲ್ಲವೆ ಮುಂಜಾಗ್ರತಾ ಕ್ರಮ ಕೈಗೊಳ್ಳ ಬಹುದು. ಹಾಗಾಗಿ ನಾಗರಿಕರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಸದ್ದಿಲ್ಲದೆ ಸಿದ್ಧತೆ ನಡೆಸಿದ್ದಾರೆ.ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಿಷ್ಟು ಮಂದಿಯನ್ನು ಸಮಿತಿಗೆ ನೇಮಕ ಮಾಡಲಾಗುತ್ತದೆ. ಹಿರಿಯ ನಾಗರಿಕರು, ನಿವೃತ್ತ ಪೊಲೀಸ್ ಅಧಿಕಾರಿ ಗಳು, ಸರ್ಕಾರಿ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸ್ವಯಂಪ್ರೇರಿತರಾಗಿ ಕೆಲಸ ಮಾಡುವ ಉತ್ಸಾಹಿಗಳನ್ನು ಸಮಿತಿಗೆ ಸದಸ್ಯರನ್ನಾಗಿ ಮಾಡಲಾಗುತ್ತದೆ. ಸಮಿತಿಗೆ ಸದಸ್ಯರಾಗಬೇಕಾದ ವರು ನಗರದಲ್ಲಿ ಕನಿಷ್ಠ 25 ವರ್ಷಗಳಿಂದ ನೆಲೆಸಿರ ಬೇಕು. ಕಾಯಂ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.ತಮ್ಮ ಬಡಾವಣೆ ಮತ್ತು ನೆರೆಹೊರೆ ರಸ್ತೆಗಳಲ್ಲಿ ಓಡಾಡುವ ಅನುಮಾನಾಸ್ಪದ ವ್ಯಕ್ತಿಗಳು, ಅನೈತಿಕ ಚಟುವಟಿಕೆಗಳು ಮತ್ತು ಸಮಾಜಘಾತುಕ ಶಕ್ತಿಗಳ ಬಗ್ಗೆ ತಿಳಿದುಬಂದರೆ ಸಮಿತಿಯ ಸದಸ್ಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಎಚ್ಚೆ ತ್ತುಕೊಳ್ಳುವ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ.

ಪೊಲೀಸರಿಗೆ ಮಾಹಿತಿ ನೀಡುವ ಸಮಿತಿ ಸದಸ್ಯರ ಹೆಸರನ್ನು ಎಲ್ಲೂ ಬಹಿರಂಗ ಮಾಡದೆ ಪೊಲೀಸರು ಗೌಪ್ಯವಾಗಿ ಇಡಲಿದ್ದಾರೆ. ಸದಸ್ಯರು ಸ್ವ-ಇಚ್ಛೆಯಿಂದ ಪೊಲೀಸರ ಕೆಲಸಕ್ಕೆ ಕೈ ಜೋಡಿಸಬೇಕು.  ವಾರ್ಡನ್ ಮಾದರಿಯಲ್ಲಿ ಸಮಿತಿ: ಅಪರಾಧ ನಿಯಂತ್ರಣ ಸಮಿತಿಯನ್ನು ವಾರ್ಡನ್‌ಗಳ ಮಾದರಿ ಯಲ್ಲಿ ರಚಿಸಲಾಗುತ್ತಿದೆ. ಈಗಾಗಲೇ ಕೆಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾರ್ಡನ್‌ಗಳನ್ನು ನೇಮಿಸಲಾ ಗಿದೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 10-15 ವಾರ್ಡನ್‌ಗಳನ್ನು ನೇಮಕ ಮಾಡಲಾಗಿದೆ.ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದಾಗ ವಾರ್ಡನ್‌ಗಳು ಕೂಡಲೇ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ಇಲ್ಲವೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಿದ್ದಾರೆ. ಇದೇ ಮಾದರಿಯಲ್ಲಿ ಅಪರಾಧ ನಿಯಂತ್ರಣ ಸಮಿತಿ ಸದಸ್ಯರು ಮುಂದೆ ಕಾರ್ಯನಿರ್ವಹಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.