ಭಾನುವಾರ, ಮೇ 9, 2021
20 °C

ಅಪರಾಧ: `ಸಿಲಿಕಾನ್ ಸಿಟಿ'ಗೆ ದೇಶದಲ್ಲಿ ಮೂರನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ಐದು ವರ್ಷಗಳಿಗೆ ಹೋಲಿಸಿದರೆ, ನಗರದಲ್ಲಿ 2012ರಲ್ಲಿ ನಡೆದ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ, ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿರುವ ಮಹಾನಗರಗಳ ಪೈಕಿ `ಸಿಲಿಕಾನ್ ಸಿಟಿ' ಮೂರನೇ ಸ್ಥಾನದಲ್ಲಿದೆ ಎಂಬ ಆತಂಕದ ವಿಷಯವನ್ನು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ (ಎನ್‌ಸಿಆರ್‌ಬಿ) ಹೊರಹಾಕಿದೆ.ಒಟ್ಟು ಅಪರಾಧಗಳನ್ನು ತೆಗೆದು ಕೊಂಡರೆ ನವದೆಹಲಿಯು 47,982 ಪ್ರಕರಣಗಳ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ (30508 ಪ್ರಕರಣ) ಎರಡನೇ ಸ್ಥಾನದಲ್ಲಿದೆ.ಅದೇ ರೀತಿ ಬೆಂಗಳೂರು ಮಹಾ ನಗರದಲ್ಲೂ ಮೇಲ್ನೋಟಕ್ಕೆ ಅಪರಾಧ ಚಟುವಟಿಕೆಗಳು ಕಡಿಮೆಯಾದಂತೆ ಕಂಡುಬಂದರೂ, ಮಹಿಳೆಯರು- ಮಕ್ಕಳ ವಿರುದ್ಧದ ಅಪರಾಧ ಪ್ರಮಾಣ ಗಳಲ್ಲಿ ಅಷ್ಟೇನೂ ಕಡಿಮೆಯಾಗಿಲ್ಲ. ನಗರದಲ್ಲಿ 2010ರಲ್ಲಿ ಒಟ್ಟು 32,188 ಅಪರಾಧ ಪ್ರಕರಣಗಳು ದಾಖಲಾ ಗಿದ್ದರೆ, 2011ರಲ್ಲಿ ದಾಖಲಾದ ಪ್ರಕರ ಣಗಳ ಸಂಖ್ಯೆ 30,283. 2012ರಲ್ಲಿ ಈ ಸಂಖ್ಯೆ 29,297ಕ್ಕೆ ಇಳಿದಿದೆ.ಮಹಿಳೆಯರೆಷ್ಟು ಸುರಕ್ಷಿತ: ರಾಜ್ಯದಲ್ಲಿ 2011ಕ್ಕೆ ಹೋಲಿಸಿದರೆ, ಕಳೆದ ವರ್ಷ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾ ಗಿದೆ. 2011ರಲ್ಲಿ ಮಹಿಳೆಯರ ಮೇಲೆ ಅಪರಾಧ ಕೃತ್ಯ ಎಸಗಿದವರ ವಿರುದ್ಧ 9,594 ಪ್ರಕರಣಗಳು ದಾಖಲಾಗಿದ್ದವು. ಆದರೆ, 2012ರಲ್ಲಿ ಈ ಸಂಖ್ಯೆ 10,366ಕ್ಕೆ ಹೆಚ್ಚಳವಾಗಿದ್ದು, ರಾಜ್ಯ ದಲ್ಲಿ ಮಹಿಳೆಯರೆಷ್ಟು ಸುರುಕ್ಷಿತ ಎಂಬ ಪ್ರಶ್ನೆ ಉದ್ಬವಿಸಿದೆ.ಆದರೆ, ಇಂತಹ ಆತಂಕಕ್ಕೆ ನಗರವೂ ಹೊರತಲ್ಲ ಎಂಬ ಅಂಶವನ್ನು ಎನ್‌ಸಿಆರ್‌ಬಿ ಸ್ಪಷ್ಟಪಡಿಸಿದೆ. ನಗರದಲ್ಲಿ ಒಟ್ಟು 40.58 ಲಕ್ಷ ಮಹಿಳೆಯರಿದ್ದು, ಅವರ ಮೇಲೆ ನಡೆಯುತ್ತಿರುವ ಅಪ ರಾಧ ಕೃತ್ಯಗಳ ಸಂಖ್ಯೆಯಲ್ಲೂ ಹೆಚ್ಚಳ ವಾಗಿದೆ.2011ರಲ್ಲಿ ಮಹಿಳೆಯರ ವಿರುದ್ದದ ಅಪರಾಧ ಕೃತ್ಯಗಳ ಸಂಬಂಧ 1,890 ಪ್ರಕಣಗಳ ದಾಖಲಾಗಿದ್ದರೆ, 2012ರಲ್ಲಿ 2,263 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಹಿಳೆ ಯರ ವಿರುದ್ಧದ ಅಪರಾಧ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಎರಡನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಮಹಿಳೆಯರ ಮೇಲೆ ನಡೆದ ಅಪರಾಧ ಚಟುವಟಿಕೆಗಳ ವಿರುದ್ಧ ಒಟ್ಟು 5,194 ಪ್ರಕರಣಗಳು ದಾಖಲಾಗಿವೆ.ಹಲ್ಲೆ ನಡೆಸಿ ಮಹಿಳೆಯರ ಗೌರವಕ್ಕೆ ಧಕ್ಕೆ (ಐಪಿಸಿ 354) ಉಂಟುಮಾಡಿದ ಆರೋಪದ ಮೇಲೆ ನಗರದಲ್ಲಿ ಕಳೆದ ವರ್ಷ 321 ಪ್ರಕರಣಗಳು ದಾಖಲಾ ಗಿವೆ. ಅದೇ ರೀತಿ ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟು ಮಾಡಿದ (ಐಪಿಸಿ 509) ಆರೋಪದಡಿ ಒಟ್ಟು 51 ಪ್ರಕರಣಗಳು ದಾಖಲಾಗಿವೆ. ಉಳಿದಂತೆ, ಮಹಿಳೆಯರ ಕಳ್ಳ ಸಾಗಾಟ ಆರೋಪದಡಿ 160, ಅಪಹರಣ ಸಂಬಂಧ 433, ವರದಕ್ಷಿಣೆ ಕಿರುಕುಳದಿಂದ ಸಾವು ಆರೋಪದಡಿ 51 ಹಾಗೂ ಪತಿ ಅಥವಾ ಸಂಬಂಧಿಕರು ಮಹಿಳೆಗೆ ಕಿರುಕುಳ ನೀಡಿದ ಆರೋದಡಿ 524 ಪ್ರಕರಣಗಳು ದಾಖಲಾಗಿವೆ.ಅತ್ಯಾಚಾರ ಪ್ರಕರಣದಲ್ಲಿ ಅಲ್ಪ ಇಳಿಕೆ: ನಗರದಲ್ಲಿ 2011ಕ್ಕಿಂತ ಕಳೆದ ವರ್ಷ ಅತ್ಯಾಚಾರ ಪ್ರಕರಣಗಳಲ್ಲಿ ಅಲ್ಪ ಇಳಿಕೆಯಾಗಿದೆ. 2011ರಲ್ಲಿ ಒಟ್ಟು 97 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2012ರಲ್ಲಿ ಈ ಸಂಖ್ಯೆ 90ಕ್ಕೆ ಇಳಿದಿದೆ.ಹೆಚ್ಚು ಅಪರಾಧ: ರಾಜ್ಯಕ್ಕೆ 10ನೇ ಸ್ಥಾನ

2012ರಲ್ಲಿ ದೇಶದಲ್ಲಿ ನಡೆದ ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ಎನ್‌ಸಿಆರ್‌ಬಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆ ಮಾಹಿತಿ ಪ್ರಕಾರ ಕಳೆದ ವರ್ಷ ಕರ್ನಾಟಕದಲ್ಲಿ ಒಟ್ಟು 1,34,021ಅಪರಾಧ ಪ್ರಕರಣಗಳು ದಾಖಲಾಗಿದೆ.ಈ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಅಪರಾಧ ಚಟುವಟಿಕೆಗಳು ನಡೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 10ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.