ಬುಧವಾರ, ಮೇ 18, 2022
25 °C

ಅಪೀಮು ದಂಧೆ ಪ್ರಕರಣ:ಕಾಂಗ್ರೆಸ್ ನಾಯಕಿಗೆ 10 ವರ್ಷ ಜೈಲು.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಫರೀದ್‌ಕೋಟ್ (ಪಿಟಿಐ): ಅಕ್ರಮ ಮಾದಕ ವಸ್ತುವನ್ನು ಮನೆಯಲ್ಲಿರಿಸಿಕೊಂಡಿದ್ದ ಸ್ಥಳೀಯ ಕಾಂಗ್ರೆಸ್ ನಾಯಕಿ, ಆಕೆಯ ಪತಿ ಹಾಗೂ ಮಗ ಸೇರಿದಂತೆ ಐವರು ತಪ್ಪಿತಸ್ಥರಿಗೆ ಇಲ್ಲಿನ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಪಂಜಾಬ್ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಶರ್ಮ, ಆಕೆಯ ಪತಿ ರಾಮ್, ಮಗ ಸಿಮರ್‌ಜಿತ್, ಉತ್ತರ ಪ್ರದೇಶ ಮೂಲದ ನಾರಾಯಣ ದಾಸ್ ಮತ್ತು ರಾಜ್‌ಪಾಲ್ ಶಿಕ್ಷೆಗೊಳಗಾದವರು.

ಶಿಕ್ಷೆ ಪ್ರಕಟಿಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಫತೇದೀಪ್ ಸಿಂಗ್ ಎಲ್ಲ ಅಪರಾಧಿಗಳಿಗೆ ತಲಾ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ.2007ರ ಅ.16ರಂದು ವೀಣಾ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ 2 ಕೆ.ಜಿ. ಅಪೀಮು ವಶಪಡಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.