ಅಫ್ಜಲ್‌ಗುರು ಕ್ಷಮಾದಾನಕ್ಕೆ : ಕಾಶ್ಮೀರ ಶಾಸಕನ ಬೆಂಬಲ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ಅಫ್ಜಲ್‌ಗುರು ಕ್ಷಮಾದಾನಕ್ಕೆ : ಕಾಶ್ಮೀರ ಶಾಸಕನ ಬೆಂಬಲ

Published:
Updated:

ಶ್ರೀನಗರ(ಪಿಟಿಐ): ಸಂಸತ್ತಿನ ಮೇಲೆ ದಾಳಿ ಮಾಡಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಅಫ್ಜಲ್‌ಗುರುವಿಗೆ ಕ್ಷಮಾದಾನ ನೀಡುವ ಕುರಿತು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳ ಬೇಕು ಹಾಗೂ ಈ ನಿರ್ಣಯಕ್ಕೆ ಕೇಂದ್ರ ಸರ್ಕಾರ ಯಾವುದೇ ರೀತಿ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಬಾರದೆಂದು  ಪಕ್ಷೇತರ ಶಾಸಕ ಅಬ್ದುಲ್‌ರಶೀದ್‌ ಶನಿವಾರ ವರದಿಗಾರರಿಗೆ ತಿಳಿಸಿದ್ದಾರೆ.ಕ್ಷಮದಾನ ನಿರ್ಧಾರದ ಕುರಿತು ಕೇಳಿರುವ ಅರ್ಜಿಯನ್ನು  ವಿಧಾನಸಭೆ ಕಾರ್ಯಾಲಯಕ್ಕೆ ಶುಕ್ರವಾರ ಸಲ್ಲಿಸಲಾಗಿದೆ. ಈ ಅರ್ಜಿಯ ಬಗ್ಗೆ ಆಡಳಿತ  ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಅಥವಾ ವಿರೋಧ ಪಕ್ಷವಾದ ಪಿಡಿಪಿ ತೆಗೆದುಕೊಳ್ಳುವ ನಿರ್ಧಾರವನ್ನು ಎದುರು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ.

ರಾಜೀವ್ ಹತ್ಯೆಯ ಹಂತಕರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಕ್ಷಮದಾನ ನೀಡುವ  ಅರ್ಜಿ ಸಲ್ಲಿಸಿರುವುದು ಮತ್ತು ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ದೇವಿಂದ್ರ ಪಾಲ್‌ಸಿಂಗ್ ಇವರ ಕ್ಷಮದಾನದ ಅರ್ಜಿಯನ್ನು ಪ್ರಧಾನ ಮಂತ್ರಿಗಳಿಗೆ ಕಳುಹಿಸಿರುವುದಾದರೇ ನಮ್ಮ ಮುಖ್ಯ ಮಂತ್ರಿ ಒಮರ್ ಅಬ್ದುಲ ಅವರು ಅಫ್ಜಲ್‌ಗುರು ವಿಷಯದಲ್ಲಿ ಏಕೆ  ತಮ್ಮ ಟ್ವಿಟರ್‌ನಲ್ಲಿ ಕೋಲಾಹಲಕ್ಕೆ ಒಳಗಾಗಬೇಕು? ಎಂದು ರಶೀದ್ ಪ್ರಶ್ನಿಸಿದ್ದಾರೆ.

 ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಒಮರ್ ಸೂಕ್ತ ನಿರ್ಣಯ ತೆಗೆದುಕೊಳ್ಳುವರು ಹಾಗೂ ಇದಕ್ಕೆ ಪ್ರಮುಖ ಪಕ್ಷಗಳು ಬೆಂಬಲವನ್ನು ವ್ಯಕ್ತಪಡಿಸುವ ವಿಶ್ವಾಸ ಇದೆ ಎಂದು ಅವರು ವಿವರಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry