ಭಾನುವಾರ, ಮೇ 9, 2021
23 °C

ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸಿದ್ದೇನೆ: ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಅಡಿಕೆ ಮತ್ತು ತೆಂಗು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ತೀವ್ರ ಪ್ರಯತ್ನ ಮಾಡಿದ್ದೇನೆ. ಕೇಂದ್ರದ ಯುಪಿಎ ಸರ್ಕಾರ ಅಡಿಕೆ ನಿಷೇಧಿಸುವ ಕುರಿತು ಯಾವಪ್ರಸ್ತಾಪ ಮಾಡಿಲ್ಲ. ಕೆಲವರು ರಾಜ­ಕೀಯ ಲಾಭಕ್ಕಾಗಿ ಗೊಂದಲ ಸೃಷ್ಟಿಸಿ­ದ್ದಾರೆ. ವದಂತಿಗೆ ಬೆಳೆಗಾರರು ಕಿವಿ­ಗೊಡಬಾರದು ಎಂದು ಸಂಸದ ಕೆ.­ಜಯ­ಪ್ರಕಾಶ್ ಹೆಗ್ಡೆ ಮನವಿ ಮಾಡಿದರು.ಸಖರಾಯಪಟ್ಟಣದಲ್ಲಿ ಹೋಬಳಿ ಕಾಂಗ್ರೆಸ್ ಭಾರತ ನಿರ್ಮಾಣ ಯಾತ್ರಾ ಅಂಗವಾಗಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಕಡೂರು-ಚಿಕ್ಕಮಗಳೂರು ರೈಲ್ವೆ ಯೋಜನೆ ಕಾಮಗಾರಿಗೆ ಅಗತ್ಯ ಅನುದಾನ ತರುವಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಚಿಕ್ಕಮಗಳೂರಿನಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆ ಕಾಮಗಾರಿಗೆ ಚಾಲನೆ ದೊರೆತಿದೆ. ಕೆಲವರು ಈ ವಿಚಾರವನ್ನು ಸಂಶಯದ ದೃಷ್ಟಿಯಲ್ಲೇ ನೋಡುತ್ತಿ­ದ್ದಾರೆ. ಕೇಂದ್ರದ ವಿವಿಧ ಯೋಜನೆ­ಗಳಡಿಯಲ್ಲಿ ಸಾಕಷ್ಟು ಅನುದಾನ ಕ್ಷೇತ್ರಕ್ಕೆ ತಂದಿರುವುದಾಗಿ ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.­ಡಿ.ಎಲ್.­ವಿಜಯಕುಮಾರ್ ಮಾತ­ನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನು ಅನು­ಷ್ಠಾನಕ್ಕೆ ತಂದಿದೆ. ಮುಖ್ಯಮಂತ್ರಿ ಸಿದ್ದ­ರಾಮಯ್ಯ ಬಡವರು, ಕೂಲಿ ಕಾರ್ಮಿ­ಕರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಪರವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನ­ಗೊಳಿಸಿ­ದ್ದಾರೆ. ಅಂಬೇಡ್ಕರ್ ನಿಗಮ, ಅಲ್ಪ­ಸಂಖ್ಯಾತರ ನಿಗಮ, ಹಿಂದುಳಿದ ವರ್ಗ­ಗಳ ನಿಗಮಗಳಲ್ಲಿ ಪಡೆದಿದ್ದ ಸಾಲ­ವನ್ನು ಮುಖ್ಯ ಮಂತ್ರಿ ಮನ್ನಾ ಮಾಡುವ ಮೂಲಕ ಸಾಲದ ಶೂಲದಿಂದ ರಕ್ಷಿಸಿದ್ದಾರೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.