ಶುಕ್ರವಾರ, ಫೆಬ್ರವರಿ 26, 2021
18 °C
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಗುಮ್ಮ

ಅಭಿವೃದ್ಧಿ ಕಾಮಗಾರಿಗಳಿಗೆ ಶುರುವಾದ ತರಾತುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿವೃದ್ಧಿ ಕಾಮಗಾರಿಗಳಿಗೆ ಶುರುವಾದ ತರಾತುರಿ

ಯಾದಗಿರಿ: ವಿಧಾನ ಸಭೆ ಚುನಾ ವಣೆಗಳು ಮುಗಿದು ಮೂರು ವರ್ಷ ಕಳೆದರೂ, ಜಿಲ್ಲಾ ಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಜನರು ಕಾಯು ವಂತಾಗಿತ್ತು. ಲೋಕಸಭೆ ಚುನಾವಣೆ, ವಿಧಾನ ಪರಿಷತ್‌ ಚುನಾವಣೆಗಳು ಮುಗಿಯುತ್ತಿದ್ದಂತೆ ಯೇ, ಇದೀಗ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಎದುರಾಗುತ್ತಿದ್ದು, ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕುಗೊಂಡಿವೆ.ಚುನಾವಣೆಗೆ ಯಾವುದೇ ಸಂದ ರ್ಭದಲ್ಲಿ ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿದ್ದು, ನೀತಿ ಸಂಹಿತೆ ಜಾರಿಯಾ ಗುವ ಮೊದಲೇ ಅಭಿವೃದ್ಧಿ ಕಾಮಗಾರಿಗ ಳಿಗೆ ಚಾಲನೆ ನೀಡುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗಿದ್ದಾರೆ.ನಗರದಲ್ಲಿಯೇ ಕಳೆದ ಒಂದು ವಾರದಲ್ಲಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ರಂಗಮಂದಿರ ಹಾಗೂ ಕನ್ನಡ ಭವನದ ಕಾಮಗಾರಿಗೂ ಚುನಾವಣೆಯ ನೆಪದಲ್ಲಾದರೂ ಚಾಲನೆ ಸಿಕ್ಕಿದೆ ಎನ್ನುವ ನೆಮ್ಮದಿ ನಗರದ ನಾಗರಿಕರದ್ದಾಗಿದೆ.ಚುನಾವಣೆ ಘೋಷಣೆ ಆಗುತ್ತಿದ್ದಂತೆ ಯೇ ಮಾದರಿ ನೀತಿ–ಸಂಹಿತೆ ಜಾರಿಯಾ ಗಲಿದೆ. ಇದರಿಂದಾಗಿ ಯಾವು ದೇ ಕಾಮಗಾರಿಗಳ ಉದ್ಘಾ ಟನೆಯಾಗಲಿ, ಶಂಕುಸ್ಥಾಪನೆ  ಯಾಗಲಿ ನೆರವೇರಿಸಲು ಸಾಧ್ಯವಿಲ್ಲ. ಹೀಗಾಗಿ ಚುನಾವಣೆ ಘೋಷಣೆ ಆಗುವ ಮುನ್ನವೇ ನಗರ ದಲ್ಲಿ ಅಭಿವೃದ್ಧಿ ಕಾಮಗಾ ರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎನ್ನುವ ಮಾತು ಜನರಿಂದ ಕೇಳಿ ಬರುತ್ತಿವೆ.ಜಿಲ್ಲಾ ಕೇಂದ್ರವಾಗಿ ಆರು ವರ್ಷ ಕಳೆದಿದ್ದರೂ, ಹೇಳಿ ಕೊಳ್ಳುವಂತಹ ಯಾವುದೇ ಕಾಮಗಾರಿಗಳು ಆಗಿರಲಿಲ್ಲ.  ಜನವರಿ 6 ರಂದು ನಗರದ ಮಧ್ಯಭಾಗದಲ್ಲಿ ನಿರ್ಮಿಸಿರುವ ನೂತನ ಬಸ್‌ನಿಲ್ದಾಣವನ್ನು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಉದ್ಘಾಟಿಸಿದರು. ಇದಾದ ಎರಡು ದಿನಗಳ ನಂತರ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾ ಯಿತು. ಮತ್ತೆ ನಾಲ್ಕು ದಿನಗಳ ಅಂತರದಲ್ಲಿ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ, ರಂಗಮಂದಿರ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನ ಸೂರ ಶಂಕುಸ್ಥಾಪನೆ ನೆರವೇರಿಸಿದರು.ಅಷ್ಟೇ ಅಲ್ಲದೇ ಜ.12 ರಂದು ಬಿಡುವಿಲ್ಲದ ಕಾರ್ಯಕ್ರಮಗಳನ್ನು ನಡೆಸಿದ ಸಚಿವರು, ಜಿಲ್ಲಾ ಬಂಡವಾಳ ಹೂಡಿಕೆದಾರರ ಸಮಾವೇಶವನ್ನೂ ನಡೆಸಿದರು. ಪ್ರವಾಸೋದ್ಯಮ ಇಲಾಖೆಯಿಂದ ಕೊಡಮಾಡಿರುವ ಟ್ಯಾಕ್ಸಿಗಳ ವಿತರಣೆಯೂ ಆಯಿತು. ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನೂ ಸಚಿವರು ನಡೆಸಿದರು.ಇದರ ಜೊತೆಗೆ ತಾಲ್ಲೂಕಿನ ಮೈಲಾ ಪುರದಲ್ಲಿ ಬಹುದಿನಗಳಿಂದ ಕುಂಠಿತ ಗೊಂಡಿದ್ದ ಕಲ್ಯಾಣ ಮಂಟಪವನ್ನೂ ಸ್ಥಳೀಯ ಶಾಸಕ ಡಾ. ಎ.ಬಿ. ಮಾಲಕರಡ್ಡಿ ಉದ್ಘಾಟಿಸಿದರು. ಮೈಲಾಪುರದಲ್ಲಿ ರಸ್ತೆಯೂ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಯಿತು.ಇನ್ನು ಗುರುಮಠಕಲ್‌ ಮತಕ್ಷೇತ್ರದ ಲ್ಲಂತೂ ಸಚಿವ ಬಾಬುರಾವ ಚಿಂಚನಸೂ ರ, ಕಳೆದ ಒಂದು ವಾರದಿಂದ ಬಿಡುವಿಲ್ಲ ದೇ, ದಿನಕ್ಕೆರಡು ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ದ್ದಾರೆ. ಒಟ್ಟಾರೆ, ಚುನಾವಣೆಯ ಭೀತಿಯಿಂದಾಗಿ ಯಾದಗಿರಿ ನಗರವೂ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿಯ ಕಾಮಗಾರಿಗಳಿಗೆ ಚಾಲನೆ ಸಿಕ್ಕಂತಾಗಿದೆ ಎಂದು ಜನರು ಹೇಳುತ್ತಿದ್ದಾರೆ.***

ಕನ್ನಡ ಭವನ, ರಂಗಮಂದಿರಗಳಿಗೆ ಈಗಲಾದರೂ ಚಾಲನೆ ಸಿಕ್ಕಿದೆ. ಆದಷ್ಟು ಬೇಗ ಈ ಎರಡೂ ಕಾಮಗಾರಿಗಳು ಪೂರ್ಣವಾಗಬೇಕು.

-ವಿಶ್ವನಾಥ ಸಿರವಾರ,
ಆಳ್ವಾಸ್‌ ನುಡಿಸಿರಿ ಬಳಗದ ಜಿಲ್ಲಾ ಘಟಕದ ಉಪಾಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.