ಸೋಮವಾರ, ಜನವರಿ 20, 2020
22 °C

ಅಭಿವೃದ್ಧಿ ಮರೆತ ಬಿಜೆಪಿ ನಾಯಕರು: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ಅಧಿಕಾರಕ್ಕಾಗಿ ಕಿತ್ತಾಟದಲ್ಲಿಯೇ ಮಗ್ನರಾಗಿರುವ ಬಿಜೆಪಿ ನಾಯಕರು ರಾಜ್ಯದ ಅಭಿವೃದ್ಧಿ ವಿಚಾರವನ್ನೇ ಸಂಪೂರ್ಣ ಮರೆತು ಬಿಟ್ಟಿದ್ದಾರೆ ಎಂದು ಮಾಜಿ ಶಾಸಕ ಬಿ.ವಿ.ರಾಮಚಂದ್ರರೆಡ್ಡಿ ಶುಕ್ರವಾರ ಆರೋಪಿಸಿದರು.ವರ್ತೂರಿನಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಾರ್ಷಿಕ ಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುವುದೇ ಸಚಿವರ ಗುರಿಯಾಗಿದೆ ಎಂದು ದೂರಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ವರ್ತೂರು ವಾರ್ಡ್ ಸದಸ್ಯ ಎಸ್.ಉದಯಕುಮಾರ್, ವಾರ್ಡ್ ವ್ಯಾಪ್ತಿಯಲ್ಲಿನ ಪ್ರತಿಯೊಂದು ಗ್ರಾಮದಲ್ಲಿ ಬೂತ್ ಕಮಿಟಿಗಳಿಗೆ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಮುಂದಿನ ವಾರ ಚಾಲನೆ ನೀಡಲಾಗುವುದು ಎಂದರು.ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಪಿಳ್ಳಾರೆಡ್ಡಿ ದೇವರಬಿಸನಹಳ್ಳಿ, ಬಿಬಿಎಂಪಿ ಬೆಳ್ಳಂದೂರು ವಾರ್ಡ್ ಸದಸ್ಯ ಬಿ.ಪಿ.ಬಾಬುರೆಡ್ಡಿ, ಮುಖಂಡ ಎಚ್.ಎ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ, ತಾ.ಪಂ. ಸದಸ್ಯರಾದ ಶ್ರೀನಿವಾಸರೆಡ್ಡಿ, ವಿ.ಟಿ.ಬಿ. ಬಾಬುರೆಡ್ಡಿ ಮತ್ತಿತರರು ಇದ್ದರು. 

ಪ್ರತಿಕ್ರಿಯಿಸಿ (+)