ರಾಮನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕೋಟಾಕ್ಕೆ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಿರುವ ಎರಡು ಕೋಟಿ ರೂಪಾಯಿ ಅನುದಾನ ಬಳಕೆಗೆ ಸಂಬಂಧಿಸಿದಂತೆ ಜಿ.ಪಂ ಕ್ರಿಯಾ ಯೋಜನೆ ರೂಪಿಸಿದೆ. ಇದಕ್ಕೆ ಸದಸ್ಯರ ಅಪಸ್ವರವೂ ವ್ಯಕ್ತವಾಗಿದೆ.

`ಅಧ್ಯಕ್ಷೆ ಯು.ಪಿ.ನಾಗೇಶ್ವರಿ ಅವರು ತಮಗೆ ಬೇಕಾದ ಸದಸ್ಯರ ಕ್ಷೇತ್ರಗಳಿಗೆ ಮಾತ್ರ ಈ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಮುಂದಾಗಿದ್ದಾರೆ. ಉಳಿದ ಸದಸ್ಯರನ್ನು ಗಮನಕ್ಕೆ ತೆಗೆದುಕೊಂಡಿಲ್ಲ~ ಎಂಬ ಆರೋಪ ಜೆಡಿಎಸ್ ಸದಸ್ಯರಲ್ಲಿ ವ್ಯಕ್ತವಾಗಿದೆ. ಅಭಿವೃದ್ಧಿ ವಿಷಯದಲ್ಲಿ ಅಧ್ಯಕ್ಷರು ತಾರತಮ್ಯ ಮಾಡುತ್ತಿದ್ದು, ಇಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಕೆಲ ಸದಸ್ಯರ ಆಕ್ರೋಶವಾಗಿದೆ.

ಕ್ರಿಯಾ ಯೋಜನೆ ವಿವರ: ಎರಡು ಕೋಟಿ ರೂಪಾಯಿ ಅನುದಾನದಲ್ಲಿ ಚನ್ನಪಟ್ಟಣ ಮತ್ತು ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಅಂದಾಜು ರೂ 1.52 ಕೋಟಿ ರೂಪಾಯಿಯನ್ನು ಕ್ರಿಯಾ ಯೋಜನೆಯಲ್ಲಿ ನಿಗದಿಗೊಳಿಸಲಾಗಿದೆ. ಅದರಲ್ಲಿ ಚನ್ನಪಟ್ಟಣ ತಾಲ್ಲೂಕಿಗೆ ರೂ 77.25 ಲಕ್ಷ, ಕನಕಪುರ ತಾಲ್ಲೂಕಿಗೆ ರೂ 75.25 ಲಕ್ಷ ರೂಪಾಯಿಗಳನ್ನು ವ್ಯಯಿಸಲು ಯೋಜಿಸಲಾಗಿದೆ.

ರಾಮನಗರ ತಾಲ್ಲೂಕಿಗೆ 33.50 ಲಕ್ಷ ರೂಪಾಯಿ ಹಾಗೂ ಮಾಗಡಿ ತಾಲ್ಲೂಕಿಗೆ ಕೇವಲ 13 ಲಕ್ಷ ರೂಪಾಯಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆಯಲ್ಲಿ ನಮೂದಿಸಲಾಗಿದೆ ಎಂದು ತಿಳಿದು ಬಂದಿದೆ.

`ಅಧ್ಯಕ್ಷರ ಅನುದಾನದ ಎರಡು ಕೋಟಿ ಮೊತ್ತದಲ್ಲಿ ಶೇ 25ರಷ್ಟನ್ನು ( ರೂ 50 ಲಕ್ಷ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಜನತೆಯ ಕಲ್ಯಾಣಕ್ಕೆ ನಿಯಮಾನುಸಾರ ವಿನಿಯೋಗಿಸಬೇಕಿದೆ. ಉಳಿದ 1.50 ಕೋಟಿ ಮೊತ್ತವನ್ನು ಸಹ ನಿಯಮಕ್ಕೆ ಅನುಗುಣವಾಗಿಯೇ ಅಧ್ಯಕ್ಷರು ವಿವೇಚನೆ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ~ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್.ವೆಂಕಟೇಶಪ್ಪ `ಪ್ರಜಾವಾಣಿ~ ಗೆ ತಿಳಿಸಿದರು.

ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಪ್ರೌಢಶಾಲಾ ಕಟ್ಟಡ ನಿರ್ವಹಣೆ, ಚೆಕ್ ಡ್ಯಾಂ ನಿರ್ಮಾಣ, ಬೀದಿ ದೀಪ, ಅಂಗನವಾಡಿಗೆ ನೀರು ಸರಬರಾಜು, ಶೌಚಾಲಯ, ಅಡುಗೆ ಕೋಣೆ ನಿರ್ಮಾಣ, ಗ್ರಾಮಗಳಲ್ಲಿ ಸೌರದೀಪ ವ್ಯವಸ್ಥೆ, ಸರ್ಕಾರಿ ಪ್ರೌಢಶಾಲೆಗೆ ನೀರು ಸರಬರಾಜು, ನಾಲೆ ಸೇತುವೆ ನಿರ್ವಹಣೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲು ಅಧ್ಯಕ್ಷರು ತಮ್ಮ ಈ ಎರಡು ಕೋಟಿ ರೂಪಾಯಿ ಅನುದಾನವನ್ನು ಬಳಸಿಕೊಳ್ಳಬಹುದು. ಅದಕ್ಕೆ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಅವರು ವಿವರಿಸಿದರು.

ಜೆಡಿಎಸ್ ಸದಸ್ಯರ ಆಕ್ರೋಶ: ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜಯಗಳಿಸಿದ ಯು.ಪಿ.ನಾಗೇಶ್ವರಿ ಅವರು ಜೆಡಿಎಸ್ಗೆ ಸಡ್ಡು ಹೊಡೆದು, ಕಾಂಗ್ರೆಸ್ ಬೆಂಬಲದಿಂದ ಅಧ್ಯಕ್ಷ ಸ್ಥಾನ ಗಿಟ್ಟಿಸಿದ್ದಾರೆ.

ಇದೀಗ ತಮ್ಮ ಅನುದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಕ್ಷೇತ್ರದ ಅಭಿವೃದ್ಧಿಗೆ ಸಿಂಹ ಪಾಲು ಒದಗಿಸಿದ್ದಾರೆ. ಜೆಡಿಎಸ್ ಸದಸ್ಯರನ್ನು ಕಡೆಗಣಿಸಿರುವ ಅಧ್ಯಕ್ಷರು ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೈಲಾಂಚ ಜಿ.ಪಂ ಕ್ಷೇತ್ರದ ಜೆಡಿಎಸ್ ಸದಸ್ಯ ಎಚ್.ಸಿ. ರಾಜಣ್ಣ ದೂರುತ್ತಾರೆ.

ಜಿ.ಪಂ ಅಧ್ಯಕ್ಷರು ತಮ್ಮ ಕ್ಷೇತ್ರ, ಕಾಂಗ್ರೆಸ್ನ 10 ಸದಸ್ಯರ ಕ್ಷೇತ್ರಗಳು ಸೇರಿದಂತೆ ಒಟ್ಟು 12 ಸದಸ್ಯರ ಕ್ಷೇತ್ರಗಳಿಗೆ ಬಹುಪಾಲು ಅನುದಾನ ಒದಗಿಸಲು ಕ್ರಿಯಾ ಯೋಜನೆ ರೂಪಿಸಿದ್ದಾರೆ. ಜಿ.ಪಂ ಜೆಡಿಎಸ್ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆ ಅಧ್ಯಕ್ಷರು ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಸದಸ್ಯರನ್ನು ಸಂಪರ್ಕಿಸಿಯೂ ಇಲ್ಲ. ಕೆಲ ಸಂಬಂಧಿಕರು, ಆಪ್ತರು ನೀಡಿದ ಕೆಲವು ಕೆಲಸಗಳನ್ನು ಪ್ರಸ್ತಾಪಿಸಿರುವುದು ಬಿಟ್ಟರೆ, ಜೆಡಿಎಸ್ ಸದಸ್ಯರನ್ನು ಸೌಜನ್ಯಕ್ಕೂ ಅಧ್ಯಕ್ಷರು ಸಂಪರ್ಕಿಸಿ ಸಮಸ್ಯೆಗಳ ಬಗ್ಗೆ ಮತ್ತು ಆಗಬೇಕಾದ ಕೆಲಸಗಳ ಬಗ್ಗೆ ವಿವರ ಪಡೆಯಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ನ ಕೆಲ ಸದಸ್ಯರ ಕ್ಷೇತ್ರಗಳಿಗೆ 10ರಿಂದ 12 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮುಂದಾಗುವ ಅಧ್ಯಕ್ಷರು ನಿಸ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ. ಅಭಿವೃದ್ಧಿ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ನಡೆ, ಅವರ ಕಾರ್ಯ ವೈಖರಿ, ಅನುದಾನ ಬಳಕೆಯಲ್ಲಿ ತಾರತಮ್ಯ ಮಾಡುತ್ತಿರುವ ವಿಷಯಗಳನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗಿದೆ.

ಅವರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದು, ಶೀಘ್ರದಲ್ಲಿಯೇ ಪಕ್ಷದ ವತಿಯಿಂದ ಅಧ್ಯಕ್ಷರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.