ಭಾನುವಾರ, ಮಾರ್ಚ್ 26, 2023
31 °C
ಶಫಿ ದಾರಾಶಾ ಟ್ರೋಫಿ: ಅಧ್ಯಕ್ಷರ ಇಲೆವೆನ್‌ ಬೃಹತ್‌ ಮೊತ್ತ

ಅಭಿಷೇಕ್‌ ರೆಡ್ಡಿ ದ್ವಿಶತಕದ ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿಷೇಕ್‌ ರೆಡ್ಡಿ ದ್ವಿಶತಕದ ಮಿಂಚು

ಬೆಂಗಳೂರು: ಅಭಿಷೇಕ್‌ ರೆಡ್ಡಿ (212; 251ಎ, 25ಬೌಂ, 6ಸಿ) ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಬಲದಿಂದ ಅಧ್ಯಕ್ಷರ ಇಲೆವೆನ್‌ ತಂಡ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಶ್ರಯದ ಶಫಿ ದಾರಾಶಾ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಉಪಾಧ್ಯಕ್ಷರ ಇಲೆವೆನ್‌ ವಿರುದ್ಧದ ಪಂದ್ಯದಲ್ಲಿ ಬೃಹತ್‌ ಮೊತ್ತ ಪೇರಿಸಿದೆ.ಆಲೂರಿನ ಎರಡನೇ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಅಧ್ಯಕ್ಷರ ಇಲೆವೆನ್‌ 90 ಓವರ್‌ಗಳಲ್ಲಿ 7 ವಿಕೆಟ್‌ಗೆ 412ರನ್‌ ಕಲೆಹಾಕಿತು.ಸವಾಲಿನ ಮೊತ್ತದ ಎದುರು ಮೊದಲ ಇನಿಂಗ್ಸ್‌ ಆರಂಭಿಸಿರುವ ಉಪಾಧ್ಯಕ್ಷರ ಇಲೆವೆನ್‌ ತಂಡ ದಿನದಾಟದ ಅಂತ್ಯಕ್ಕೆ 8 ಓವರ್‌ಗಳಲ್ಲಿ 1 ವಿಕೆಟ್‌ಗೆ 31ರನ್‌ ಪೇರಿಸಿದೆ.ಬ್ಯಾಟಿಂಗ್‌ ಆರಂಭಿಸಿದ ಅಧ್ಯಕ್ಷರ ಇಲೆವೆನ್‌ ತಂಡ ಶುರುವಿನಿಂದಲೇ ವೇಗವಾಗಿ ರನ್‌ ಕಲೆಹಾಕುವತ್ತ ಚಿತ್ತ ಹರಿಸಿತು. ಅಭಿಷೇಕ್‌ ರೆಡ್ಡಿ ಮತ್ತು ಅನಿರುದ್ಧ್‌ ಜೋಶಿ (41) ಉಪಾಧ್ಯಕ್ಷರ ಇಲೆವೆನ್‌ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.ಆ ಬಳಿಕ ಶ್ರೇಯಸ್‌ ಗೋಪಾಲ್‌ (ಔಟಾಗದೆ 67) ಮತ್ತು ಕೆ. ಗೌತಮ್‌ (ಔಟಾಗದೆ 26) ಬಿರುಸಿನ ಬ್ಯಾಟಿಂಗ್‌ ನಡೆಸಿ ತಂಡದ ಮೊತ್ತ 400ರ ಗಡಿ ದಾಟುವಂತೆ ನೋಡಿಕೊಂಡರು.ಸಂಕ್ಷಿಪ್ತ ಸ್ಕೋರ್‌: ಅಧ್ಯಕ್ಷರ ಇಲೆವೆನ್‌: ಪ್ರಥಮ ಇನಿಂಗ್ಸ್‌: 90 ಓವರ್‌ಗಳಲ್ಲಿ 7 ವಿಕೆಟ್‌ಗೆ 412 (ಅಭಿಷೇಕ್‌ ರೆಡ್ಡಿ 212, ಅನಿರುದ್ಧ್‌ ಎ.ಜೋಶಿ 41, ಶ್ರೇಯಸ್‌ ಗೋಪಾಲ್‌ ಔಟಾಗದೆ 67, ಕೆ. ಗೌತಮ್‌ ಔಟಾಗದೆ 26; ಎಸ್‌.ಎಲ್‌. ಅಕ್ಷಯ್‌ 87ಕ್ಕೆ2, ಪ್ರವೀಣ್‌ ದುಬೇ 100ಕ್ಕೆ2, ಜೀಶನ್‌ ಅಲಿ ಸಯ್ಯದ್‌ 77ಕ್ಕೆ2).ಉಪಾಧ್ಯಕ್ಷರ ಇಲೆವೆನ್‌: ಮೊದಲ ಇನಿಂಗ್ಸ್‌: 8 ಓವರ್‌ಗಳಲ್ಲಿ 1 ವಿಕೆಟ್‌ಗೆ 31 (ಆರ್‌. ಪ್ರತೀಕ್ಷ್‌ ಬ್ಯಾಟಿಂಗ್‌ 22, ಕೆ.ಎಲ್‌. ಶ್ರೀಜಿತ್‌ ಬ್ಯಾಟಿಂಗ್‌ 4; ರೋನಿತ್‌ ಮೋರೆ 18ಕ್ಕೆ1).ಆಲೂರು ಕ್ರೀಡಾಂಗಣ–3: ಸಂಯುಕ್ತ ಇಲೆವೆನ್‌: ಪ್ರಥಮ ಇನಿಂಗ್ಸ್‌: 70.3 ಓವರ್‌ಗಳಲ್ಲಿ 175 (ಮಿಲಿಂದ್‌ ರಮೇಶ್‌ 33, ಸಿದ್ದಾರ್ಥ್‌ 37, ಅಬ್ದುಲ್‌ ಮಜಿದ್‌ 20, ಪ್ರತೀಕ್‌ ಜೈನ್‌ ಔಟಾಗದೆ 21, ಬಿ.ಪಿ. ದರ್ಶನ್‌ ಮಾಚಯ್ಯ 19ಕ್ಕೆ2, ಕೆ.ಸಿ.ಕಾರ್ಯಪ್ಪ 42ಕ್ಕೆ3, ಮಿತ್ರಕಾಂತ್‌ ಸಿಂಗ್‌ ಯಾದವ್‌ 53ಕ್ಕೆ5).ಬೆಂಗಳೂರು ವಲಯ: ಮೊದಲ ಇನಿಂಗ್ಸ್‌: 27 ಓವರ್‌ಗಳಲ್ಲಿ 3 ವಿಕೆಟ್‌ಗೆ 81 (ಅರ್ಜುನ್‌ ಹೊಯ್ಸಳ 28, ನಿಶಿತ್‌ ರಾಜ್‌ ಬ್ಯಾಟಿಂಗ್‌ 33, ಅಭಿನವ್‌ ಮನೋಹರ್‌ ಬ್ಯಾಟಿಂಗ್‌ 13; ಅಭಿಷೇಕ್‌ ಅಹ್ಲಾವತ್‌ 25ಕ್ಕೆ1, ಅಬ್ರಾರ್‌ ಖಾಜಿ 17ಕ್ಕೆ2).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.