ರಾಮನಗರ: ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು 980ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟಾರೆ 1956 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಒಟ್ಟಾರೆ 120 ಕ್ಷೇತ್ರಗಳಲ್ಲಿ ಲಭ್ಯವಿದ್ದ 1956 ಸದಸ್ಯ ಸ್ಥಾನಗಳ ಪೈಕಿ 257 ಅವಿರೋಧವಾಗಿ ಆಯ್ಕೆಯಾಗಿದ್ದವು. ಮೂರು ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಉಳಿದ 1696 ಸ್ಥಾನಗಳಿಗೆ 4312 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ 2616 ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.

ಜಿಲ್ಲೆಯ ರಾಮನಗರ ಮತ್ತು ಮಾಗಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಜೆಡಿಎಸ್, ಕನಕಪುರ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜೇತರಾಗಿದ್ದರೆ ಎಂದು ತಿಳಿದು ಬಂದಿದೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆಲ ಕುತೂಹಲಕರ ಮತ್ತು ಅಚ್ಚರಿ ಮೂಡಿಸುವ ಫಲಿತಾಂಶಗಳು ಹೊರಬಿದ್ದಿವೆ. ಎರಡು ಅಭ್ಯರ್ಥಿಗಳು ಸಮ ಮತ ಪಡೆದು, ಅಂತಿಮವಾಗಿ ಲಾಟರಿ ಮೂಲಕ ಆಯ್ಕೆಯಾದ ಪ್ರಸಂಗಗಳು ನಡೆದಿವೆ. ಅಲ್ಲದೆ ಒಂದು, ಎರಡು ಮತಗಳ ಅಂತರದಲ್ಲಿ ಸೋತವರೂ ಇದ್ದಾರೆ.

ಲಾಟರಿ ಮೂಲಕ ಆಯ್ಕೆ: ರಾಮನಗರ ಮತ್ತು ಕನಕಪುರ ತಾಲ್ಲೂಕಿನಲ್ಲಿ ತಲಾ ಎರಡು ಸ್ಥಾನಗಳು ಲಾಟರಿ ಮೂಲಕ ಆಯ್ಕೆಯಾಗಿವೆ. ರಾಮನಗರದ ಜಾಲಮಂಗಲ ಪಂಚಾಯಿತಿಯ ಬಾಳಲಿಂಗೇಗೌಡನದೊಡ್ಡಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸಿದ್ದಲಿಂಗಯ್ಯ ಮತ್ತು ಜೆಡಿಎಸ್ ಬೆಂಬಲಿತ ಗಿರೀಶ್ ಅವರು ತಲಾ 179 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು.

ಆಗ ಎಣಿಕೆ ಅಧಿಕಾರಿಗಳು ಅಭ್ಯರ್ಥಿಗಳ ಸಮ್ಮುಖದಲ್ಲಿ ಲಾಟರಿ ಮಾಡಿದರು. ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿದ್ದಲಿಂಗಯ್ಯ ಆಯ್ಕೆಯಾದರು.

ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯ ಜೋಗಿದೊಡ್ಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಭಾವ, ಭಾಮೈದರ ನಡುವೆಯೂ ಸಮಬಲ ಉಂಟಾಗಿತ್ತು. ಇಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಉಮೇಶ್ (ಭಾಮೈದ) ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಬೈರೇಗೌಡ (ಭಾವ) ಸ್ಪರ್ಧಿಸಿದ್ದರು. ಇಬ್ಬರೂ ತಲಾ 118 ಮತಗಳನ್ನು ಪಡೆದರು. ಆದರೆ ಲಾಟರಿಯಲ್ಲಿ ಭಾವ ಬೈರೇಗೌಡ ಅವರು ವಿಜೇತರಾದರು.

ಕನಕಪುರ ತಾಲ್ಲೂಕಿನ ಹೊಸದುರ್ಗ ಪಂಚಾಯಿತಿಯ ಸಾಲಬನಿ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಮಂಜುಳ ಮತ್ತು ಕಾಂಗ್ರೆಸ್ ಬೆಂಬಲಿತ ರಾಣಿ ಕುಮಾರ್ ಅವರು ತಲಾ 301 ಮತಗಳನ್ನು ಪಡೆದಿದ್ದರು. ಲಾಟರಿಯಲ್ಲಿ ರಾಣಿ ಕುಮಾರ್ ಆಯ್ಕೆಯಾದರು.

ಹಾರೋಹಳ್ಳಿ ಪಂಚಾಯಿತಿಯ 5ನೇ ವಾರ್ಡ್ನ ಜೆಡಿಎಸ್ ಬೆಂಬಲಿತ ರಿಯಾನ್ ತಾಜ್ ಮತ್ತು ಕಾಂಗ್ರೆಸ್ ಬೆಂಬಲಿತ ಚೈತನ್ಯ ಅವರು ತಲಾ 221 ಮತಗಳನ್ನು ಪಡೆದಿದ್ದರು. ಲಾಟರಿಯಲ್ಲಿ ರಿಯಾನ್ ತಾಜ್ ಗೆಲುವಿನ ನಗೆ ಬೀರಿದರು.

ಚನ್ನಪಟ್ಟಣ ವರದಿ
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ (ಜೂ.5) ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ಜರುಗಿತು. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಂಡು ಸಂಜೆ 7ರವರೆಗೆ ಜರುಗಿತು. ತಾಲ್ಲೂಕಿನ 32 ಪಂಚಾಯಿತಿಗಳ 412 ಸ್ಥಾನಗಳಿಗೆ 1038 ಮಂದಿ ಕಣದಲ್ಲಿದ್ದರು. ಜೂ. 2 ರಂದು ಚುನಾವಣೆ ನಡೆದಿತ್ತು.

ಮತ ಎಣಿಕೆಗಾಗಿ 18 ಕೊಠಡಿಗಳಲ್ಲಿ 146 ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. 161 ಮೇಲ್ವಿಚಾರಕರು, 161 ಮತ ಎಣಿಕೆ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸೂಕ್ತ ಬಂದೋಬಸ್ತ್ ನೊಂದಿಗೆ ಮತ ಎಣಿಕೆ ಕಾರ್ಯ ನಡೆಸಲಾಯಿತು.

ಆಯಾಯ ಕ್ಷೇತ್ರಗಳ ಎಜೆಂಟರು ಹಾಗೂ ಅಭ್ಯರ್ಥಿಗಳ ಹೊರತು ಪಡಿಸಿ ಇತರರನ್ನು ಮತ ಎಣಿಕೆ ಕೇಂದ್ರದ ಒಳಗೆ ಬಿಡದಂತೆ ಕ್ರಮ ಕೈಗೊಂಡಿದ್ದ ಕಾರಣ ಮತ ಎಣಿಕೆ ಕಾರ್ಯ ಸುಗಮವಾಗಿ ಜರುಗಿತು. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡ ಹಿನ್ನೆಲೆಯಲ್ಲಿ 10 ಗಂಟೆಯ ವೇಳೆಗೆ ಫಲಿತಾಂಶ ಬರಲಾರಂಭಿಸಿತು.

ಹೊರಗಡೆ ತಮ್ಮ ಅಭ್ಯರ್ಥಿಗಳ ಫಲಿತಾಂಶವನ್ನು ಕಾಣಲು ಕಿಕ್ಕಿರಿದ ಜನಸ್ತೋಮ ಕಾದು ಕುಳಿತಿತ್ತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೆದ್ದವರು ಪಟಾಕಿ ಸಿಡಿಸಿ, ಜೈಕಾರ ಹಾಕಿ, ಗೆದ್ದವರನ್ನು ಮೇಲೇತ್ತಿ ಸಂಭ್ರಮಿಸಿದರು. ಸೋತವರು ಸಪ್ಪೆ ಮೋರೆ ಹಾಕಿಕೊಂಡು ಹೊರಗೆ ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಕಾಂಗ್ರೆಸ್ ಬೆಂಬಲಿತರ ಜಯಭೇರಿ:
ತಾಲ್ಲೂಕಿನ 32 ಗ್ರಾಮ ಪಂಚಾಯತಿಗಳಲ್ಲಿ 20 ಗ್ರಾ. ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಭಾರಿಸಿದ್ದು, ಇಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಉಳಿದಂತೆ ಜೆಡಿಎಸ್ ಬೆಂಬಲಿಗರು 9 ಪಂಚಾಯಿತಿಗಳಲ್ಲಿ ಬಹುಮತ ಪಡೆದಿದ್ದು, ಉಳಿದ 3 ಪಂಚಾಯಿತಿಗಳು ಅತಂತ್ರವಾಗಿದ್ದು ಇಲ್ಲಿ ಅಧಿಕಾರ ಹಿಡಿಯಲು ಎರಡು ಪಕ್ಷಗಳ ಬೆಂಬಲಿಗರು ಕಸರತ್ತು ನಡೆಸುವಂತಾಗಿದೆ.

ಯೋಗೇಶ್ವರ್ಗೆ ಜೈ:  ತಾಲ್ಲೂಕಿನ ಗ್ರಾ. ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಬಾರಿಸುತ್ತಿದ್ದಂತೆ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಪಟ್ಟಣದ ನಿವಾಸಕ್ಕೆ ತೆರಳಿದ ಅವರ ಅಭಿಮಾನಿಗಳು ಅವರಿಗೆ ಹೂಮಾಲೆ ತೊಡಿಸಿ, ಮೇಲೆತ್ತಿ ಸಂಭ್ರಮಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.